ಮತ್ತೆ ಮದುವೆಯಾಗಲಿದ್ದಾರೆ IAS ಟೀನಾ ದಾಬಿ, ವರ ಪ್ರದೀಪ್ ಇವರೇ ನೋಡಿ!

* UPSC ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದ ಟೀನಾ ದಾಬಿ

* ಮತ್ತೆ ಮದುವೆಯಾಗಲಿದ್ದಾರೆ IAS ಟೀನಾ ದಾಬಿ

* 2018 ರಲ್ಲಿ ಐಎಎಸ್ ಅಥರ್ ಖಾನ್ ಅವರನ್ನು ವಿವಾಹವಾಗಿದ್ದ ಟೀನಾ

Tina Dabi 2015 IAS Topper Gets Engaged, Shares Pics With Fiance pod

ನವದೆಹಲಿ(ಮಾ.29): UPSC ಟಾಪರ್ ಐಎಎಸ್ ಟೀನಾ ದಾಬಿ ಮತ್ತೆ ಮದುವೆಯಾಗಲಿದ್ದಾರೆ. 2016 ರ ರಾಜಸ್ಥಾನ ಕೇಡರ್ ಅಧಿಕಾರಿ ಟೀನಾ 2013 ರ ಬ್ಯಾಚ್ ಐಎಎಸ್ ಪ್ರದೀಪ್ ಗವಾಂಡೆ ಅವರನ್ನು ಏಪ್ರಿಲ್ 22 ರಂದು ಮದುವೆಯಾಗಲಿದ್ದಾರೆ. ಜೈಪುರದ ಹೋಟೆಲ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಟೀನಾ ದಾಬಿ ಈ ಹಿಂದೆ 2018 ರಲ್ಲಿ ಐಎಎಸ್ ಅಥರ್ ಖಾನ್ ಅವರನ್ನು ವಿವಾಹವಾಗಿದ್ದರು. 2020 ರಲ್ಲಿ ಎರಡು ವರ್ಷಗಳ ಬಳಿಕ, ಅವರು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದಿದ್ದರು.

ಟೀನಾ ದಾಬಿ ತನ್ನ ಭಾವಿ ಪತಿ ಪ್ರದೀಪ್ ಗವಾಂಡೆ ಅವರೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋವನ್ನು ಹಂಚಿಕೊಂಡು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ 'ನೀವು ನೀಡುವ ಸ್ಮೈಲ್ ಅನ್ನು ನಾನು ಧರಿಸಿದ್ದೇನೆ'. ಚುರು ಕಲೆಕ್ಟರ್ ಆಗಿದ್ದ ಪ್ರದೀಪ ಗಾವಂಡೆ ಅವರಿಗೂ ಇದು ಎರಡನೇ ಮದುವೆ. ಐಎಎಸ್ ಆಗುವ ಮೊದಲು ಅವರು ವೈದ್ಯರಾಗಿದ್ದರು. 

 
 
 
 
 
 
 
 
 
 
 
 
 
 
 

A post shared by Tina Dabi (@dabi_tina)

ಇನ್ನು ಟೀನಾ ದಾಬಿಯವರ ಮಾಜಿ ಪತಿ ಅಥರ್ ಖಾನ್ 2016 ರ UPSC ಪರೀಕ್ಷೆಯಲ್ಲಿ ಎರಡನೇ ಟಾಪರ್ ಆಗಿದ್ದರು ಎಂಬುದು ಉಲ್ಲೇಖನೀಯ. ಟೀನಾ ದಾಬಿ ಮತ್ತು ಅಥರ್ ಖಾನ್ ಇಬ್ಬರೂ ತರಬೇತಿ ಸಮಯದಲ್ಲಿ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. 2018 ರಲ್ಲಿ ನಡೆದ, ಅವರಿಬ್ಬರ ವಿವಾಹವು ಬಹಳಷ್ಟು ಸುದ್ದಿ ಮಾಡಿತ್ತು. 

ಟೀನಾ ಸಹೋದರಿ ರಿಯಾ ದಾಬಿ ಕೂಡ ಐಎಎಸ್

ಅಥರ್ ಖಾನ್ ಮೊದಲು ರಾಜಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರು, ಆದರೆ ವಿಚ್ಛೇದನದ ನಂತರ ಅವರು ಜಮ್ಮು ಮತ್ತು ಕಾಶ್ಮೀರ ಕೇಡರ್‌ನೊಂದಿಗೆ ತಮ್ಮ ರಾಜ್ಯಕ್ಕೆ ಹೋದರು. ಟೀನಾ ದಾಬಿ ಮೂಲತಃ ದೆಹಲಿಯವರು. ಕಳೆದ ವರ್ಷ ಅವರ ಸಹೋದರಿ ರಿಯಾ ದಾಬಿ ಕೂಡ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದರು. ಯುಪಿಎಸ್‌ಸಿ ತೇರ್ಗಡೆಯಾದ ಅತ್ಯಂತ ಕಿರಿಯ ಅಭ್ಯರ್ಥಿಗಳಲ್ಲಿ ರಿಯಾ ಕೂಡ ಒಬ್ಬರು. ಅವರು 23 ನೇ ವಯಸ್ಸಿನಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಟೀನಾ ಸಹೋದರಿ 

ಟೀನಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ 

ತನ್ನ ವೈಯಕ್ತಿಕ ಜೀವನದ ಜೊತೆಗೆ, ಟೀನಾ ದಾಬಿ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಟೀನಾ ಕೂಡ ತನ್ನ ಸೌಂದರ್ಯದಿಂದಾಗಿಯೂ ಇವರು ಚರ್ಚೆಯಲ್ಲಿರುತ್ತಾರೆ. ಟೀನಾ ಆಗಾಗ್ಗೆ ತನ್ನ ಫೋಟೋ ಮತ್ತು ರೀಲ್‌ಗಳನ್ನು ಹಂಚಿಕೊಳ್ಳುತ್ತಾಳೆ ಅದು ತುಂಬಾ ವೈರಲ್ ಆಗಿದೆ.

Latest Videos
Follow Us:
Download App:
  • android
  • ios