ಇದು ಕೊರೊನಾ ತಂದೊಡ್ಡಿದ ಹೊಸ ಸಂಕಟ| ದೆಹಲಿಯ ತಿಹಾರ್ ಜೈಲಿನ ಕಥೆ ಇದು| 3,468 ಕೈದಿಗಳು ಮಿಸ್ಸಿಂಗ್| ಪೆರೋಲ್ ಹೆಸರಲ್ಲಿ ಹೊರಹೋದವರು ಮತ್ತೆ ಬಂದೇ ಇಲ್ಲ
ತಿಹಾರ್(ಏ.15) ಕೊರೋನಾ ಎಂಬ ಮಹಾಮಾರಿ ಜನ ಸಾಮಾನ್ಯರ ಬದುಕನ್ನೇ ಅಸ್ತವ್ಯಸ್ತಗೊಳಿಸಿದೆ. ನೈಟ್ ಕರ್ಫ್ಯೂ, ಲಾಕ್‌ಡೌನ್ ಹೀಗೇ ನಾನಾ ನಿಯಮಗಳಿಂದ ಜನರ ಜೀವನ ಶೈಲಿಯೆ ಬದಲಾಗಿದೆ. ಮಹಾಮಾರಿಯಿಂದಾಗಿ ಅನೇಕ ಮಂದಿ ತಮ್ಮ ಆಪ್ತರನ್ನು ಕಳೆದುಕೊಂಡರೆ, ಇನ್ನು ಕೆಲವರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಈ ಮಹಾಂಆಋಇಯ ಭಯ ಎಲ್ಲಾ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ. ಸದ್ಯ ಈ ಕೊರೋನಾದಿಂದಾಗಿ ದಕ್ಷಿಣ ಏಷ್ಯಾದ ತಿಹಾರ್ ಜೈಲಿನ ಕೈದಿಗಳೂ ನಾಪತ್ತೆಯಾಗಿದ್ದಾರೆ. ಕೊರೋನಾದಿಂದಾಗಿ ಪೆರೋಲ್ ಮೇಲೆ ಹೊರಗೆ ಕಳುಹಿಸಿದ್ದ ಕೈದಿಗಳು ಮರಳಿ ಬಂದೇ ಇಲ್ಲ.
ಹೌದು ದೇಶಾದ್ಯಂತ ಅಬ್ಬರಿಸುತ್ತಿದ್ದ ಕೊರೋನಾದಿಂದ ಪಾತರಾಗಲು ಗುಂಪು ಸೇರದಿರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಹೀಗಿರುವಾಗ 2020ರಲ್ಲಿ ಎಚ್‌ಐವಿ, ಕ್ಯಾನ್ಸರ್, ಕಿಡ್ನಿ ಕಸಿ, ಅಸ್ತಮಾ, ಟಿ ಬಿ ಇಂಥ ರೋಗಗಳಿಂದ ಬಳಲುತ್ತಿದ್ದ ತಿಹಾರ್ ಜೈಲಿನ 6,740 ಮಂದಿ ಕೈದಿಗಳನ್ನು ಪೆರೋಲ್ ಮೇಲೆ ಹೊರ ಕಳುಹಿಸಲಾಗಿತ್ತು. ಆದರೆ ಇವರಲ್ಲಿ 3,468 ಕೈದಿಗಳು ಹಿಂತಿರುಗಿಲ್ಲ.
ಕೊರೋನಾತಂಕದ ನಡುವೆ ಕೈದಿಗಳು ಹಿಂತಿರುಗದಿರುವುದು ತಿಹಾರ್ ಜೈಲು ಅಧಿಕಾರಿಗಳಿಗೆ ಮತ್ತೊಂದು ತಲೆ ನೋವಾಗಿದೆ. ಕೈದಿಗಳನ್ನು ಮರಳಿ ಹೇಗೆ ಜೈಲಿಗೆ ಕರೆತರುವುದು ಎಂದು ತಿಳಿಯದ ಜೈಲು ಅಧಿಕಾರಿಗಳು ಸಹಾಯಕ್ಕಾಗಿ ದೆಹಲಿ ಪೊಲೀಸರ ಮೊರೆ ಹೋಗಿದ್ದಾರೆ.
ಇನ್ನು ಸದ್ಯ ದೇಶದಲ್ಲಿ ಕೊರೋನಾ ಎರಡನೇ ಅಲೆ ಎ<ಟ್ರಿ ನೀಡಿದ್ದು, ಇದು ಮೊದಲ ಅಲೆಗಿಂತಲೂ ಅಪಾಯಕಾರಿ ಎನ್ನಲಾಗಿದೆ. ಹೀಗಿರುವಾಗಲೇ ತಿಹಾರ್ ಜೈಲಿನಲ್ಲಿ 67 ಮಂದಿ ಈ ಕೊರೋನಾ ಸೋಂಕಿಗಡ ತುತ್ತಾಗಿದ್ದಾರೆ
