ನೈಸರ್ಗಿಕ ಈಜಕೊಳದಲ್ಲಿ ರಾಷ್ಟ್ರಪ್ರಾಣಿಯ ಸ್ವಚ್ಛಂದ ವಿಹಾರ: ಅಪರೂಪದ ವಿಡಿಯೋ ವೈರಲ್
ಹುಲಿ ಕುಟುಂಬವೊಂದು ಕಾಡಿನ ಮಧ್ಯೆ ಇರುವ ನೈಸರ್ಗಿಕ ನೀರಿನ ಮೂಲದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವ ಅಪರೂಪದ ವಿಡಿಯೋ ಸೆರೆ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಾಣಿ ಪಕ್ಷಿಗಳು ಝೂಗಳಲ್ಲಿ ಇರುವ, ಪರಸ್ಪರ ತುಂಟಾಟವಾಡುವ ಪ್ರೀತಿ ಸಾಕಷ್ಟು ವಿಡಿಯೋಗಳನ್ನು ನಾವು ನೋಡಿದ್ದೇವೆ. ಆದರೆ ಈಗ ನಾವು ತೋರಿಸುತ್ತಿರುವ ವಿಡಿಯೋ ಅತೀ ಅಪರೂಪವಾದುದು. ಹುಲಿ ಕುಟುಂಬವೊಂದು ಕಾಡಿನ ಮಧ್ಯೆ ಇರುವ ನೈಸರ್ಗಿಕ ನೀರಿನ ಮೂಲದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವ ಅಪರೂಪದ ವಿಡಿಯೋ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ನಗರಪ್ರದೇಶದಲ್ಲಿ ವಾಸ ಮಾಡುವ ಜನರು ದಣಿವಾರಿಸಿಕೊಳ್ಳಲು ಕೃತಕ ಈಜುಕೊಳಗಳತ್ತ ಧಾವಿಸಿ ಎಂಜಾಯ್ ಮಾಡುತ್ತಾರೆ ಅಥವಾ ಬೀಚ್‌ಗಳು ಸಮುದ್ರಗಳು ನದಿ ತೊರೆಗಳು ಮುಂತಾದ ಪ್ರಕೃತಿದತ್ತ ತಾಣಗಳತ್ತ ತೆರಳುತ್ತಾರೆ. ಆದರೆ ಹುಲಿಗಳು ಪ್ರಕೃತಿ ಸಹಜವಾದ ಈ ನೈಸರ್ಗಿಕ ತಾಣದಲ್ಲಿ ವಿಹಾರ ಮಾಡುತ್ತಿವೆ.
ಬೇಸಿಗೆಯ ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಪ್ರಾಣಿಗಳು ಇಳೆಗೆ ಮಳೆ ಬೀಳುತ್ತಿದ್ದಂತೆ ಸಂಭ್ರಮಗೊಂಡಿವೆ. ಬಿಸಿಲಿನಿಂದ ಒಣಗಿದ್ದ ಕಾಡುಗಳು ವರುಣನ ಸ್ಪರ್ಶಕ್ಕೆ ಮತ್ತೆ ಚಿಗುರಿ ಪ್ರಕೃತಿ ಸೌಂದರ್ಯವನ್ನು ಕಣ್ಣಿಗೆ ಉಣ ಬಡಿಸುತ್ತಿವೆ. ಹಾಗೆಯೇ ಒಣಗಿದ್ದ ನೀರಿನ ಮೂಲಗಳಾದ ಹಳ್ಳ ಕೊಳ್ಳಗಳು ಜಲ ತೊರೆಗಳು ತುಂಬಿ ಹರಿಯುತ್ತಿವೆ. ಸಹಜವಾಗಿ ಆದ ಈ ಪ್ರಕೃತಿ ಸೌಂದರ್ಯದ ಸೊಗಸನ್ನು ಹುಲಿಗಳು ಕೂಡ ಅನುಭವಿಸುತ್ತಿವೆ. ಕಾಡೊಂದರ ಒಳಗಿರುವ ತೊರೆಯಲ್ಲಿ ನೀರಿನ ಮಧ್ಯೆ ಐದಾರು ಹುಲಿಗಳು ಕುಳಿತುಕೊಂಡು ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್ ನಂದಾ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಹರಿಯುತ್ತಿರುವ ಸಣ್ಣ ತೊರೆಯ ನಡುವೆ ನಾಲ್ಕು ಹುಲಿಗಳು ಕುಳಿತುಕೊಂಡಿವೆ. ಅಲ್ಲಿಗೆ ಬಂದ ಮತ್ತೊಂದು ಹುಲಿ ಅತ್ತಿತ್ತ ನೀರಲ್ಲಿ ಓಡಾಡುತ್ತಾ ಕುಳಿತುಕೊಳ್ಳಲು ನೀರಲ್ಲಿಯೂ ಒಳ್ಳೆಯ ಜಾಗವನ್ನು ಹುಡುಕುತ್ತಿದೆ. ನಂತರ ತೊರೆಯ ಮಧ್ಯೆ ಇರುವ ಕಲ್ಲೊಂದರ ಮೇಲೆ ತನ್ನ ಎರಡು ಮುಂಭಾಗದ ಕಾಲುಗಳನ್ನು ಇಟ್ಟು ಕುಳಿತುಕೊಳ್ಳುತ್ತದೆ. ಸ್ವಲ್ಪ ಹೊತ್ತಿನಲ್ಲೇ ಅಲ್ಲಿಂದ ಎದ್ದು ಹೋಗುವ ಹುಲಿ ಇನ್ನುಳಿದ ನಾಲ್ಕು ಹುಲಿಗಳು ಕುಳಿತಿರುವ ಸ್ಥಳದತ್ತ ಹೋಗುತ್ತದೆ.
ಕ್ಯಾಮರಾದಲ್ಲಿ ಸೆರೆಯಾಯ್ತು ಅತೀ ಅಪರೂಪದ ಬ್ಲಾಕ್ ಟೈಗರ್: ವಿಡಿಯೋ ವೈರಲ್
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂದಾ, ಹುಲಿ ಸಂರಕ್ಷಿತ ಅರಣ್ಯಗಳು ಕೋಟ್ಯಾಂತರ ಭಾರತೀಯರ ನೀರಿನ ಮೂಲವೂ ಆಗಿದೆ. ಬಹುತೇಕ ಪ್ರಮುಖ ನದಿಗಳು ಈ ಹುಲಿ ಸಂರಕ್ಷಿತ ಅರಣ್ಯದ ಮಧ್ಯೆ ಹರಿಯುತ್ತವೆ. ಹುಲಿ ಸಂರಕ್ಷಣೆಯ ಯಶಸ್ಸು ಭಾರತದ ಆಹಾರ ಭದ್ರತೆ ಹಾಗೂ ನಮ್ಮ ನೀರಿನ ಮೂಲ ಕೀಲಿ ಆಗಿದೆ. ಇಲ್ಲಿ ಹುಲಿ ಕುಟುಂಬವೊಂದು ಮುಂಗಾರು ಮಳೆಯಿಂದ ಉಂಟಾದ ಪ್ರಕೃತಿ ಸೌಂದರ್ಯವನ್ನು ಎಂಜಾಯ್ ಮಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಈ ಸಮಯ ಆನಂದಮಯ.. ಕ್ಯಾಮರಾದಲ್ಲಿ ಸೆರೆಯಾಯ್ತು ಟೈಗರ್‌ಗಳ ಸರಸ..!
ಈ ವಿಡಿಯೋವನ್ನು 30 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 1,300 ಕ್ಕೂ ಹೆಚ್ಚು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೋಡುಗರು ಈ ವಿಡಿಯೋ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ಹುಲಿಗಳ ಅತೀ ಅಪರೂಪದ ಫೋಟೋ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹುಲಿಗಳು ಅದರಲ್ಲೂ ಗಂಡು ಹುಲಿಗಳು ಸಾಮಾನ್ಯವಾಗಿ ಏಕಾಂಗಿ ಜೀವನ ಮಾಡುತ್ತವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅವರು ಮದ್ಯವಿಲ್ಲದೇ ಕೇವಲ ಮಾಂಸ ಮಾತ್ರ ಇರುವ ಫೂಲ್ ಪಾರ್ಟಿ ಮಾಡುತ್ತಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಭಾರತೀಯ ಅರಣ್ಯ ಇಲಾಖೆ ಅಧಿಕಾರಿ ಆಗಿರುವ ಸುಶಾಂತ್ ನಂದಾ ಅವರು ಆಗಾಗ ವನ್ಯಜೀವಿಗಳ ಅಪರೂಪದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಪೋಸ್ಟ್ ಮಾಡುತ್ತಿರುತ್ತಾರೆ.