ಒಡಿಶಾದ ಸಿಮಿಲಿಪಾಲ್‌ ರಾಷ್ಟ್ರೀಯ ಉದ್ಯಾನವನದಲ್ಲಿ ಅಪರೂಪದ ಸುಂದರ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಅತೀ ಅಪರೂಪದ ಕಪ್ಪು ಹುಲಿಯೊಂದು ಸಿಮಿಲಿಪಾಲ್‌ ರಾಷ್ಟ್ರೀಯ ಉದ್ಯಾನವನದಲ್ಲಿ ಓಡಾಡುತ್ತಿರುವ ದೃಶ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಭುವನೇಶ್ವರ: ಒಡಿಶಾದ ಸಿಮಿಲಿಪಾಲ್‌ ರಾಷ್ಟ್ರೀಯ ಉದ್ಯಾನವನದಲ್ಲಿ ಅಪರೂಪದ ಸುಂದರ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಅತೀ ಅಪರೂಪದ ಕಪ್ಪು ಹುಲಿಯೊಂದು ಸಿಮಿಲಿಪಾಲ್‌ ರಾಷ್ಟ್ರೀಯ ಉದ್ಯಾನವನದಲ್ಲಿ ಓಡಾಡುತ್ತಿರುವ ದೃಶ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂತರಾಷ್ಟ್ರೀಯ ಹುಲಿಗಳ ದಿನದ ಸಂದರ್ಭದಲ್ಲಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾದ ಈ 15 ಸೆಕೆಂಡುಗಳ ವಿಡಿಯೋದಲ್ಲಿ ಹುಲಿ ತನ್ನ ಪ್ರದೇಶವನ್ನು ಗುರುತಿಸಿ, ಮರದ ಮೇಲೆ ಗೀರು ಗುರುತುಗಳನ್ನು ಹಾಕುತ್ತಿರುವುದು ಕಾಣಿಸುತ್ತಿದೆ. 

ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಶಾಂತ್ ನಂದಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅಂತರಾಷ್ಟ್ರೀಯ ಹುಲಿಗಳ ದಿನದಂದು ತನ್ನ ಪ್ರದೇಶವನ್ನು ಗುರುತಿಸುವ ಅಪರೂಪದ ಮೆಲನಿಸ್ಟಿಕ್ ಹುಲಿಯ ಆಸಕ್ತಿದಾಯಕ ವಿಡಿಯೋ ಇದಾಗಿದೆ. 

Scroll to load tweet…
Scroll to load tweet…

ಸುಶಾಂತ್ ನಂದಾ ಅವರು ವನ್ಯಜೀವಿಗಳ ಫೋಟೋಗಳನ್ನು ಮತ್ತೆ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿರುತ್ತಾರೆ. ಆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿರುತ್ತವೆ. ಇಲ್ಲಿಯವರೆಗೂ ಸಿಮಿಲಿಪಾಲ್‌ನಲ್ಲಿ ಮಾತ್ರ ಈ ಕಪ್ಪು ಬಣ್ಣದ ಹುಲಿಗಳನ್ನು ಸೆರೆಹಿಡಿಯಲಾಗಿದೆ, ಕಪ್ಪು ಹುಲಿಗಳು ಒಂದು ನಿರ್ದಿಷ್ಟ ಜಾತಿಯ ಹುಲಿಗಳಲ್ಲ. ಇವುಗಳು ಸಾಮಾನ್ಯವಾಗಿ ಕಿತ್ತಳೆ ಹುಲಿಯ ಬಣ್ಣದ ರೂಪಾಂತರವಾಗಿದೆ. ಮೆಲನಿಸ್ಟಿಕ್ ಹುಲಿಗಳು ಎಂದು ಕರೆಯಲ್ಪಡುವ ಈ ಹುಲಿಗಳು ತಮ್ಮ ಕಿತ್ತಳೆ ಬಣ್ಣದ ರೋಮದ ಬದಲು ದಪ್ಪ ಕಪ್ಪು ಪಟ್ಟೆಗಳೊಂದಿಗೆ ಜನಿಸುತ್ತವೆ, ಕೆಲವು ಸಂದರ್ಭಗಳಲ್ಲಿ ಅವುಗಳು ಸಂಪೂರ್ಣವಾಗಿ ಕಪ್ಪು ಬಣ್ಣದಲ್ಲಿ ಕಾಣುತ್ತವೆ. ಈ ಭೂಮಿಯ ಮೇಲೆ ಕೇವಲ ಆರು ಕಪ್ಪು ಹುಲಿಗಳಿವೆ ಎಂದು ತಿಳಿದು ಬಂದಿದೆ. ಸಿಮಿಲಿಪಾಲ್‌ನಲ್ಲಿ ಕಾಣಿಸಿಕೊಂಡ ಈ ಅಪರೂಪದ ರೂಪಾಂತರಿ ಹುಲಿಯು ಈ ಹಿಂದೆ 2017 ಮತ್ತು 2018 ರಲ್ಲಿ ವರದಿಯಾಗಿದೆ. 

ಹುಲಿ ಸಂಖ್ಯೆಯಲ್ಲಿ ಮತ್ತೆ ಕರ್ನಾಟಕಕ್ಕೆ ನಂ.1 ಪಟ್ಟ?

ಈ ಹುಲಿಗಳೇಕೆ ಕಪ್ಪು?
ಈ ಅಪರೂಪದ ಮೆಲನಿಸ್ಟಿಕ್ ಹುಲಿಗಳ ಭವ್ಯವಾದ ಕಪ್ಪು ಪಟ್ಟೆಗಳ ಹಿಂದಿನ ಕಾರಣವು ಜೆನೆಟಿಕ್‌ ರೂಪಾಂತರವಾಗಿದೆ. ಅವು ಒಂದು ನಿರ್ದಿಷ್ಟ ಜೀನ್‌ನಲ್ಲಿ ಒಂದೇ ಮೂಲ ರೂಪಾಂತರವನ್ನು ಹೊಂದಿರುವ ಬೆಂಗಾಲಿ ಹುಲಿಗಳಾಗಿವೆ. ಈ ರೂಪಾಂತರವು ಹುಲಿಗಳ ವಿಶಿಷ್ಟವಾದ ಕಪ್ಪು ಪಟ್ಟೆಗಳನ್ನು ಹಿಗ್ಗಿಸಲು ಮತ್ತು ಕಿತ್ತಳೆ ಹಿನ್ನೆಲೆಯಲ್ಲಿ ಹರಡಲು ಕಾರಣವಾಗುತ್ತದೆ. ಈ ನಿರ್ದಿಷ್ಟ ಜೀನ್‌ನಲ್ಲಿನ ವಿಭಿನ್ನ ರೂಪಾಂತರಗಳು ಚಿರತೆಗಳು ಸೇರಿದಂತೆ ಇತರ ಜಾತಿಯ ಪ್ರಾಣಿಗಳಲ್ಲಿ ಬಣ್ಣದಲ್ಲಿ ಒಂದೇ ರೀತಿಯ ಬದಲಾವಣೆಗಳನ್ನು ಉಂಟು ಮಾಡುತ್ತವೆ.

10 ವರ್ಷದಲ್ಲಿ ದೇಶದಲ್ಲಿ 1 ಸಾವಿರಕ್ಕೂ ಹೆಚ್ಚು ಹುಲಿಗಳ ಸಾವು..!

ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರದ (NCBS) ಪರಿಸರ ವಿಜ್ಞಾನಿ ಡಾ ಉಮಾ ರಾಮಕೃಷ್ಣನ್ ಮತ್ತು ಅವರ ವಿದ್ಯಾರ್ಥಿ ವಿನಯ್ ಸಾಗರ್ ನೇತೃತ್ವದ ತಂಡವು ಈ ಗಾಢ ಬಣ್ಣ ಹಾಗೂ ವಿನ್ಯಾಸವು ಕಾಡು ಬೆಕ್ಕುಗಳನ್ನು ಗಾಢವಾಗಿ ಕಾಣುವಂತೆ ಮಾಡುತ್ತದೆ ಎಂಬುದನ್ನು ಪತ್ತೆ ಮಾಡಿದೆ. ಈ ಕಪ್ಪು ಹುಲಿಯ ಡಿಜಿಟಲ್ ಇಲಸ್ಟ್ರೇಷನ್ ಅನ್ನು ಗ್ರಾಫಿಕ್ ಡಿಸೈನರ್ ಸುದರ್ಶನ್ ಶಾ ಚಿತ್ರಿಸಿದ್ದು ಸುಂದರವಾಗಿದೆ.

Scroll to load tweet…