ಮೆಟ್ರೋದಲ್ಲಿ ಯುವಕನೊಬ್ಬ ಯುವತಿಯ ಕೆನ್ನೆ ಗಿಲ್ಲಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಮೆಟ್ರೋ ರೈಲಿನಲ್ಲಿ ನಡೆದಿದ್ದು, ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮೆಟ್ರೋದಲ್ಲಿ ರೀಲ್ಸ್ ಮಾಡುವುದು ಅಪಾಯಕಾರಿ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.
ಬೆಂಗಳೂರು: ಮಹಾನಗರಗಳಲ್ಲಿಂದು ಮೆಟ್ರೋ ಪ್ರಯಾಣ ಇಲ್ಲಿಯ ಜನರ ಜೀವನದ ಒಂದು ಭಾಗವಾಗಿದೆ. ಬೆಂಗಳೂರಿನ ಟ್ರಾಫಿಕ್ ಭಯದಿಂದ ಟಿಕೆಟ್ ದರ ಏರಿಕೆಯಾದ್ರೂ ಜನರು ಮೆಟ್ರೋ ರೈಲು ಆಯ್ಕೆ ಮಾಡಿಕೊಳ್ಳುತ್ತಾರೆ. ಬೆಲೆ ಏರಿಕೆಗೆ ಆರಂಭದಲ್ಲಿ ಸಾಕಷ್ಟು ವಿರೋಧವಾದರೂ ಜನರು ಅನಿವಾರ್ಯವಾಗಿ ಮೆಟ್ರೋ ಮೇಲೆ ಅವಲಂಬಿತರಾಗಿದ್ದಾರೆ. ಒಂದು ವರ್ಗದ ಜನರು ಕೇವಲ ಪ್ರಯಾಣಕ್ಕಾಗಿ ಮೆಟ್ರೋ ಬಳಕೆ ಮಾಡುತ್ತಾರೆ. ಇಂದಿನ ಜನರೇಷನ್ ಝಡ್ ಕಿಡ್ ಮೆಟ್ರೋ ನಿಲ್ದಾಣಕ್ಕೆ ಬರುತ್ತಿದ್ದಂತೆ ವಿಡಿಯೋ, ರೀಲ್ಸ್ ಮಾಡಲು ಆರಂಭಿಸುತ್ತಾರೆ. ರಾಷ್ಟ್ರ ರಾಜಧಾನಿ ದೆಹಲಿ ಮೆಟ್ರೋ ಮನರಂಜನಾ ಕೇಂದ್ರವಾಗಿ ಬದಲಾಗಿದೆ. ದೆಹಲಿ ಮೆಟ್ರೋಗೆ ಸಂಬಂಧಿಸಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸದಾ ವೈರಲ್ ಆಗುತ್ತಿರುತ್ತವೆ. ಕಳೆದೆರಡು ದಿನಗಳಿಂದ ಬೆಂಗಳೂರಿನ ಮೆಟ್ರೋದಲ್ಲಿ ನಡೆದಿದೆ ಎನ್ನಲಾದ ರೀಲ್ಸ್ ವ್ಯಾಪಕ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೋರ್ವ, ಯುವತಿಯ ಕೆನ್ನೆಯನ್ನು ಗಿಲ್ಲುತ್ತಾನೆ. ಈ ವಿಡಿಯೋವನ್ನು ರಿಯಲ್ ಕನ್ನಡಿಗರು (Real kannadigaru) ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಏನ್ ಧೈರ್ಯ ಗುರು ನಿನಗೆ, ನಮ್ಮ ಬೆಂಗಳೂರಿನಲ್ಲಿ ಈ ರೀತಿ ಮಾಡಬೇಡಿ ಎಂಬ ಶೀರ್ಷಿಕೆಯಡಿಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿಕೊಳ್ಳಲಾಗಿದ್ದು, ವೈರಲ್ ಆಗುತ್ತಿದೆ. ಈ ವಿಡಿಯೋಗೆ ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಇಬ್ಬರು ಯುವತಿಯರು ಮೆಟ್ರೋ ರೈಲಿನ ಬಾಗಿಲ ಬಳಿಯಲ್ಲಿ ನಿಂತುಕೊಂಡಿರುತ್ತಾರೆ. ರೈಲಿನಿಂದ ಹೊರಗೆ ಹೋಗುತ್ತಿರುವ ಯುವಕ, ಓರ್ವ ಯುವತಿಯನ್ನು ಕನ್ನೆಯನ್ನು ಗಿಲ್ಲುತ್ತಾನೆ. ಕೂಡಲೇ ಆ ಯುವಕನ ಕೈ ಹಿಡಿದು ಯುವತಿ ಆತನನ್ನು ರೈಲಿನೊಳಗೆ ಎಳೆದುಕೊಳ್ಳುತ್ತಾಳೆ. ನಂತರ ನಿಧಾನವಾಗಿ ಆತನ ಕೆನ್ನೆಗೆ ಏಟು ನೀಡಿ ಜೋರಾಗಿ ನಗುತ್ತಾಳೆ. ಯುವಕ ಸಹ ನಗುತ್ತಲೇ ಅಲ್ಲಿಂದ ಹೊರಡುತ್ತಾಳೆ. ಇತ್ತ ಪಕ್ಕದಲ್ಲಿಯೇ ನಿಂತಿದ್ದ ಯುವತಿಯೂ ಸಹ ಜೋರಾಗಿ ನಗಲು ಆರಂಭಿಸುತ್ತಾಳೆ. ಈ ಎಲ್ಲಾ ದೃಶ್ಯವನ್ನು ಎದುರಿನ ಸೀಟ್‌ನಲ್ಲಿದ್ದವರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ವೈರಲ್ ಆಗಿರುವ ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ...https://www.facebook.com/reel/1819997128790183
ಈ ವಿಡಿಯೋ ನೋಡಿದ ನೆಟ್ಟಿಗರು, ಇದು ಅವರವರೇ ಮಾಡಿಕೊಂಡಂತಹ ರೀಲ್ಸ್ ಎಂದ ಹೇಳಿದ್ದಾರೆ. ಮೆಟ್ರೋ ರೈಲಿನ ಬಾಗಿಲ ಬಳಿಯಲ್ಲಿ ನಿಂತು ಈ ರೀತಿ ರೀಲ್ಸ್ ಮಾಡೋದು ತುಂಬಾ ಅಪಾಯಕಾರಿಯಾಗಿದೆ. ಇದು ಯಾವುದೇ ಮೆಟ್ರೋ ಆಗಿದ್ರೂ ಅಲ್ಲಿಯ ಸಿಬ್ಬಂದಿ ಕೂಡಲೇ ಆ ಮೂವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬ ಮಾತುಗಳು ಕೇಳಿ ಬಂದಿವೆ. ಮೆಟ್ರೋ ರೈಲನ್ನು ಪ್ರಯಾಣಕ್ಕಾಗಿ ಮಾತ್ರ ಬಳಕೆ ಮಾಡಿ ಎಂಬ ಸಲಹೆಯನ್ನು ನೀಡಲಾಗಿದೆ.
ಇದನ್ನೂ ಓದಿ: ತಿಂಗಳಿಗೊಮ್ಮೆ ನಿಮ್ಮ ಆರೇಂಜ್ ಪರೀಕ್ಷಿಸಿ, ಯುವರಾಜ್ ಸಂಸ್ಥೆಯ ಸ್ತನ ಕ್ಯಾನ್ಸರ್ ಜಾಹೀರಾತಿಗೆ ಆಕ್ರೋಶ!
ನಮ್ಮ ಮೆಟ್ರೋದಲ್ಲೀಗ ಎಐ ಕ್ಯಾಮೆರಾ ಕಣ್ಗಾವಲು
ದೆಹಲಿ ಮೆಟ್ರೋದಂತೆ ಅನೈತಿಕ ಚಟುವಟಿಕೆ, ಅಪಾಯದ ಘಟನೆಗಳು ‘ನಮ್ಮ ಮೆಟ್ರೋ’ದಲ್ಲೂ ಘಟಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಕಣ್ಗಾವಲಿಗೆ ಇನ್ನಷ್ಟು ಒತ್ತು ನೀಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮವು ನಿಲ್ದಾಣಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ಸಿಸಿ ಕ್ಯಾಮೆರಾ ಅಳವಡಿಸಿದೆ. ಇತ್ತೀಚೆಗೆ ಬೆಂಗಳೂರು ನಮ್ಮ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ಜೋಡಿಯೊಂದು ಅಸಭ್ಯವಾಗಿ ವರ್ತಿಸಿದ್ದರು. ಈ ವಿಡಿಯೋವನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದರು. ಹಾಗಾಗಿ ಇಂತಹ ಘಟನೆಗಳನ್ನು ತಪ್ಪಿಸುವ ಉದ್ದೇಶದಿಂದ ನಮ್ಮ ಮೆಟ್ರೋದಲ್ಲಿ ಎಐ ತಂತ್ರಜ್ಞಾನ ಆಧರಿತ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
ಇದನ್ನೂ ಓದಿ: ಮಟ್ರೋದಲ್ಲಿ ಯುವತಿ ಕೂಗಾಟ, ಚೀರಾಟ ಕೇಳಿ ಹೌಹಾರಿದ ಪ್ರಯಾಣಿಕರು; ಏನ್ ಮಾಡಿದ್ರೂ ತಣ್ಣಗಾಗದ ಹುಡ್ಗಿ

