ಮದುವೆಗೆ ಸಂಭ್ರಮದಲ್ಲಿ ಮಲಗಿದ್ದ ಮಗುವನ್ನು ಕಾರಿನಲ್ಲೇ ಮರೆತ ದಂಪತಿ, ನರಳಿ ಪ್ರಾಣಬಿಟ್ಟ ಕಂದಮ್ಮ!
ಮೇಕ್‌ಅಪ್, ಡ್ರೆಸ್, ಸ್ಟೇಟಸ್ ಚಿಂತೆಯಲ್ಲಿ ದಂಪತಿ ಮದುವೆ ಸಮಾರಂಭಕ್ಕೆ ತೆರಳಿದ್ದಾರೆ. ಎಲ್ಲರ ಮುಂದೆ ಕಾರಿನಿಂದ ಇಳಿದು ಡ್ರೆಸ್ ಸರಿಮಾಡಿಕೊಂಡು, ಆಭರಣ ತೋರಿಸಿಕೊಂಡು ಮಂಟಪಕ್ಕೆ ಎಂಟ್ರಿಕೊಟ್ಟಿದ್ದಾರೆ. ಮದುವೆ ಮುಗಿಸಿ, ಊಟ ಮುಗಿಸಿದಾಗ ಥಟ್ಟನೆ ನೆನಪಾಗಿದೆ. ಅರೇ ನಮ್ಮ ಮಗು ಎಲ್ಲಿ? ಓಡೋಡಿ ಬಂದು ಕಾರಿನಲ್ಲಿ ನೋಡಿದಾಗ ಎಲ್ಲವೂ ಮುಗಿದಿತ್ತು.
ಕೋಟಾ(ಮೇ.15) ಕುಟುಂಬಸ್ಥರು, ಆಪ್ತರ ಮದುವೆಗೆ ಹಲವರು ತಿಂಗಳಿನಿಂದಲೇ ತಯಾರಿ ಆರಂಭಿಸುತ್ತಾರೆ. ಡ್ರೆಸ್, ಅದಕ್ಕೆ ತಕ್ಕಂತೆ ಆಭರಣ, ಮೇಕ್ಅಪ್ ಸೇರಿದಂತೆ ಎಲ್ಲವೂ ಮ್ಯಾಚಿಂಗ್. ಹೀಗೆ ಭಾರಿ ತಯಾರಿ ಮಾಡಿಕೊಂಡು ದಂಪತಿ ಮದುವೆ ಸಮಾರಂಭಕ್ಕೆ ತೆರಳಿದ್ದಾರೆ. ಕಾರು ಪಾರ್ಕ್ ಮಾಡಿ, ಮಂಟಪಕ್ಕೆ ತೆರಳಿ ಮುದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಕುಟುಂಬಸ್ಥರು, ಆಪ್ತರ ಮುಂದೆ ತಮ್ಮ ಆಭರಣ, ಮೇಕ್‌ಅಪ್ ಝಳಪಿಸಿ ಸ್ಟೇಟಸ್ ಮೈಂಟೇನ್ ಮಾಡಿದ್ದಾರೆ. ಮದುವೆ ಮುಗಿತು, ಊಟವೂ ಮೀಗಿತು, ಐಸ್‌ಕ್ರೀಮ್, ಪಾನ್ ತಿಂದು ಒಂದಷ್ಟು ಹರಟೆ ಹೊಡೆದು ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ದಂಪತಿಗೆ ಅರೆ, ನಮ್ಮ ಮಗಳು ಎಲ್ಲಿ ಎಂದು ನೆನಪಾಗಿದೆ. ಮಂಟಪದಲ್ಲಿ ಹುಡುಕಿದ್ದಾರೆ. ಸಿಗಲಿಲ್ಲ. ಕೊನೆಗೆ ಓಡೋಡಿ ಕಾರಿನತ್ತ ಧಾವಿಸಿದ್ದಾರೆ. ಲಾಕ್ ಮಾಡಿ ಹೋದ ಕಾರಿನ ಹಿಂಬದಿ ಸೀಟಿನಲ್ಲಿ ಮಗು ನರಳಿ ನರಳಿ ಪ್ರಾಣ ಬಿಟ್ಟ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.
ಪ್ರದೀಪ್ ನಾಗರ್ ತನ್ನ ಪತ್ನಿ ಇಬ್ಬರು ಮಕ್ಕಳೊಂದಿಗೆ ಮದುವೆ ತೆರಳಿದ್ದಾರೆ. ಮುಂಭಾಗದ ಸೀಟಿನಲ್ಲಿ ಪತ್ನಿ ಕುಳಿತುಕೊಂಡರೆ, ಹಿಂಬದಿ ಸೀಟಿನಲ್ಲಿ ಮೂರು ವರ್ಷದ ಪುತ್ರಿ ಗೋರ್ವಿಕಾ ನಾಗರ್‌ಳನ್ನು ಮಕ್ಕಳ ಸೀಟಿನಲ್ಲಿ ಮಲಗಿಸಿದ್ದರು. ಇತ್ತ ಪುಟ್ಟ ಕಂದಮ್ಮನ ಜೊತೆ ಆಕೆಯ ಪುಟ್ಟ ಅಕ್ಕ ಕುಳಿತಿದ್ದಳು. ಮದುವೆ ಮಂಟಪದ ಮಂಭಾಗಕ್ಕೆ ಆಗಮಿಸಿದ ಪ್ರದೀಪ್ ನಾಗರ್ ಕಾರು ನಿಲ್ಲಿಸಿದ್ದಾರೆ. ಈ ವೇಳೆ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಪತ್ನಿ ಹಾಗೂ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಪುಟ್ಟ ಮಗಳು ಕಾರಿನಿಂದ ಇಳಿದಿದ್ದಾರೆ.
ಕಾರಿನೊಳಗೆ ಆಟವಾಡುತ್ತಿದ್ದ ಮೂರು ಮಕ್ಕಳು ಉಸಿರುಕಟ್ಟಿ ಸಾವು
ಇತ್ತ ಪ್ರದೀಪ್ ನಾಗರ್ ಕಾರನ್ನು ಪಾರ್ಕಿಂಗ್ ಮಾಡಲು ತೆರಳಿದ್ದಾರೆ. 3 ವರ್ಷದ ಗೋರ್ವಿಕಾ ನಾಗರ್‌ಳನ್ನು ಪತಿ ಪ್ರದೀಪ್ ಎತ್ತಿಕೊಂಡು ಬರಲಿದ್ದಾರೆ ಎಂದು ಪತ್ನಿ ಭಾವಿಸಿ ಮತ್ತೊಬ್ಬಳ ಮಗಳ ಕೈಹಿಡಿದು ಮದುವೆ ಮಂಟಪಕ್ಕೆ ತೆರಳಿದ್ದಾಳೆ. ಇತ್ತ ಪತಿ ಪ್ರದೀಪ್ ನಾಗರ್ ಕಾರು ಪಾರ್ಕಿಂಗ್ ಮಾಡಿ ಲಾಕ್ ಮಾಡಿ ಮದುವೆಗೆ ಆಗಮಿಸಿದ್ದಾರೆ.
ಮದುವೆಯಲ್ಲಿ ಎಲ್ಲಾ ಆಪ್ತರ ಜೊತೆ ಮಾತುಕತೆ, ಹರಟೆ ನಡೆದಿದೆ. ಮದುವೆ ಊಟ ಮುಗಿಸಿದ ಬಳಿಕ ಅರೇ ನಮ್ಮ ಮಗು ಎಲ್ಲಿ ಎಂದು ಪ್ರದೀಪ್ ನಾಗರ್‌ನನ್ನು ಪತ್ನಿ ಕೇಳಿದ್ದಾಳೆ. ನೀನು ಇಳಿಯುವಾಗ ಕರೆದುಕೊಂಡು ಬಂದಿಲ್ವಾ ಎಂದು ಪ್ರಶ್ನಿಸಿದ್ದಾಳೆ. ಗೊಂದಲ, ಆತಂಕ ಶುರುವಾಗಿದೆ. ಮಂಟಪದಲ್ಲಿ ಹುಡುಕಿದ್ದಾರೆ. ಮಗು ಪತ್ತೆ ಇಲ್ಲ. ಓಡೋಡಿ ಕಾರಿನತ್ತ ಧಾವಿಸಿದ್ದಾರೆ. ಈ ವೇಳೆ ಕಾರಿನ ಹಿಂಬದಿ ಸೀಟಿನಲ್ಲಿ ಮಲಗಿಸಿದ್ದ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿದೆ.
ಮಧ್ಯಾಹ್ನದ ಬಿಸಿಲಿನಲ್ಲಿ ಐದು ದಿನದ ಮಗುವನ್ನ ಮಲಗಿಸಿದ ಪೋಷಕರು; ಮುಂದೇನಾಯ್ತು?
ಗಾಳಿ ಸಿಗದೆ ನರಳಿ ನರಳಿ ಪ್ರಾಣ ಬಿಟ್ಟಿದೆ. ತಕ್ಷಣವೇ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಆದರೆ ತಪಾಸನೆ ನಡೆಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. 3 ವರ್ಷದ ಮಗಳನ್ನು ಪತ್ನಿ ಎತ್ತಿಕೊಂಡಿದ್ದಾರೆ ಎಂದು ಪತಿ ಭಾವಿಸಿದರೆ, ಪತಿಯಲ್ಲಿ ಮಗಳಿದ್ದಾಳೆ ಎಂದು ಪತ್ನಿ ಭಾವಿಸಿದ್ದಾಳೆ. ಮದುವೆ ಮಂಟಪದಲ್ಲಿ ಇಬ್ಬರೂ ತಮ್ಮ ತಮ್ಮ ಆಪ್ತರ ಜೊತೆ ಹರಟೆಯಲ್ಲಿ ಬ್ಯೂಸಿಯಾಗಿದ್ದರು. ಹೀಗಾಗಿ ಮಗು ಕಾರಲ್ಲೇ ಮರೆತರೂ ನೆನಪೇ ಆಗಿಲ್ಲ.