ಸಿಕ್ಕಿಂ ಗಡಿಯಲ್ಲಿ ಭಾರತೀಯ ಮತ್ತು ಚೀನಾ ಸೇನೆ ಮಧ್ಯೆ ಸಂಘರ್ಷ| ಅತ್ತ ಫ್ರಾನ್ಸ್‌ನಿಂದ ಭಾರತಕ್ಕೆ ಮತ್ತೆ 3 ರಫೇಲ್‌ ವಿಮಾನ

ನವದೆಹಲಿ(ಜ.28): ಸಿಕ್ಕಿಂ ಗಡಿಯಲ್ಲಿ ಭಾರತೀಯ ಮತ್ತು ಚೀನಾ ಸೇನೆ ಮಧ್ಯೆ ಸಂಘರ್ಷ ನಡೆದಿರುವ ನಡುವೆಯೇ ಬುಧವಾರ ಮತ್ತೆ 3 ರಫೇಲ್‌ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಿವೆ. ತನ್ಮೂಲಕ ಈವರೆಗೆ ಫ್ರಾನ್ಸ್‌ನಿಂದ ಈವರೆಗೆ ಒಟ್ಟಾರೆ 11 ರಫೇಲ್‌ ಯುದ್ಧ ವಿಮಾನಗಳು ಭಾರತದ ವಾಯುಪಡೆ ಬತ್ತಳಿಕೆಗೆ ಸೇರ್ಪಡೆಯಾದಂತಾಗಿದೆ.

ಆಗಸದಲ್ಲಿ ಹಾರಾಟ ನಡೆಸುವಾಗಲೇ ಇಂಧನ ಭರ್ತಿ ಸಾಮರ್ಥ್ಯ ಹಾಗೂ ಪ್ರತೀ ಗಂಟೆಗೆ 780 ಕಿ.ಮೀನಿಂದ 1650 ಕಿ.ಮೀ ವರೆಗೆ ಸಂಚರಿಸುವ ಸಾಮರ್ಥ್ಯದ 4.5 ಪೀಳಿಗೆ ವ್ಯಾಪ್ತಿಗೆ ರಫೇಲ್‌ ಯುದ್ಧ ವಿಮಾನಗಳು ಸೇರಿವೆ.

ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ನಿಂದ ಒಟ್ಟಾರೆ 36 ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಭಾರತ ಸಹಿಹಾಕಿದ್ದು, ಹಂತಹಂತವಾಗಿ ರಫೇಲ್‌ ಯುದ್ಧವಿಮಾನಗಳನ್ನು ರವಾನಿಸಲಾಗುತ್ತಿದೆ.