ಹೈದರಾಬಾದ್[ಜ.21]: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೊಮ್ಮೆ ಬಹುಭಾಷಾ ನಟ ಪ್ರಕಾಶ್ ರಾಜ್ ಕಿಡಿ ಕಾರಿದ್ದಾರೆ. ಸೋಮವಾರದಂದು ಪ್ರಧಾನಿ ಮೋದಿ, ವಿದ್ಯಾರ್ಥಿಗಳೊಂದಿಗೆ ನಡೆಸಿದ್ದ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮ ಸಂಬಂಧ ಸಮಾಧಾನ ವ್ಯಕ್ತಪಡಿಸುತ್ತಾ ಮೊದಲು ದೇಶದ ಪ್ರಧಾನಿ ತಮ್ಮ ಡಿಗ್ರಿ ಸರ್ಟಿಫಿಕೇಟ್ ತೋರಿಸಲಿ ಎಂದು ಸವಾಲೆಸೆದಿದ್ದಾರೆ.

ಮತ್ತೊಂದು ವಿವಾದದಲ್ಲಿ ರೈ: ಸ್ಯಾಂಡಲ್‌ವುಡ್‌ನಿಂದ ಬ್ಯಾನ್ ಮಾಡುವಂತೆ ಒತ್ತಾಯ

ಹೈದರಾಬಾದ್ ನಲ್ಲಿ ಯಂಗ್ ಇಂಡಿಯಾ ನ್ಯಾಷನಲ್ ಕೋಆರ್ಟಿನೇಶನ್ ಕಮಿಟಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಬಹುಭಾಷಾ ನಟ ಪ್ರಕಾಶ್ ರೈ 'ನಮ್ಮ ಬಳಿ ಗುರುರು, ದಾಖಲೆ ಕೇಳುತ್ತಿರುವವರು, ಪರೀಕ್ಷಾ ಪೇ ಚರ್ಚಾ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ರಾಜಕೀಯ ಶಾಸ್ತ್ರದಲ್ಲಿ ಪದವಿ ಪಡೆದಿದ್ದೇನೆ ಎನ್ನುವ ಅವರು ಯಾವತ್ತೂ ತಮ್ಮ ಸರ್ಟಿಫಿಕೇಟ್ ತೋರಿಸಿಲ್ಲ. ಇಡೇ ದೇಶ ಒಂದು ದಿನ ನಿಮಗೆ ರಾಜಕೀಯ ಶಾಸ್ತ್ರ ಪಾಠ ಹೇಳಿಕೊಡುತ್ತದೆ ಮತ್ತು ನಿಮ್ಮನ್ನು ಕಿತ್ತೆಸೆಯುತ್ತದೆ' ಎಂದಿದ್ದಾರೆ.

ಇದೇ ವೇಳೆ ಪೌರತ್ವ ಕಾಯ್ದೆ , NRC ಹಾಗೂ NPR ವಿರೋಧಿಸುವವರನ್ನು ಶಿಕ್ಷಿತರು ಎಂದಿರುವ ಪ್ರಕಾಶ್ ರೈ, ಮೋದಿಯನ್ನು, ಹಿಟ್ಲರ್ ಗೆ ಹೋಲಿಸಿದ್ದಾರೆ. ಅಲ್ಲದೇ 'ನೀವು ನಮ್ಮ ಸೇವಕ, ಆದರೆ ನೀವು ಕೆಲ ಮಾಡ್ತೀರಾ? ನಿಮಗೆ ನಿಜಕ್ಕೂ ಜನರ ಸೇವೆ ಮಾಡುವ ಮನಸ್ಸಿದ್ದರೆ ನಿರುದ್ಯೋಗಿಗಳ ಹಾಘೂ ಶಿಕ್ಷಣ ಪಡೆಯಲು ಸಾಧ್ಯವಾಗದವರ ದಾಖಲೆ ಸಂಗ್ರಹಿಸಿ, ಸಮಸ್ಯೆ ನಿವಾರಿಸಲು ಪ್ರಯತ್ನಿಸಿ' ಎಂದಿದ್ದಾರೆ.

ಪಿಎಂ ಮೋದಿಗೆ ಹೀಗ್ ಮಾಡ್ಬೇಡಿ ಎಂದ ಪ್ರಕಾಶ್ ರೈ ಪತ್ನಿ!