ಅಂತಾ​ರಾ​ಷ್ಟ್ರೀಯ ಯೋಗ ದಿನಕ್ಕೆ ವರ್ಷ​ದಿಂದ ವರ್ಷಕ್ಕೆ ಹೆಚ್ಚು ಉತ್ತಮ ಪ್ರತಿ​ಕ್ರಿಯೆ ದೊರ​ಕು​ತ್ತಿದೆ. ಜೂ.21ರಂದು ನಡೆ​ಯ​ಲಿ​ರುವ ಈ ಸಲದ ಯೋಗ ದಿನಾ​ಚ​ರ​ಣೆ​ಯಲ್ಲಿ ವಿಶ್ವದಾದ್ಯಂತ 25 ಕೋಟಿ ಜನರು ಪಾಲ್ಗೊ​ಳ್ಳುವ ನಿರೀ​ಕ್ಷೆ​ಯಿದೆ ಎಂದು ಕೇಂದ್ರ ಆಯುಷ್‌ ಸಚಿವ ಸರ್ಬಾ​ನಂದ ಸೋನೊ​ವಾಲ್‌ ಹೇಳಿ​ದ್ದಾ​ರೆ.

ಪಿಟಿಐ ದಿಬ್ರು​ಗಢ (ಅ​ಸ್ಸಾಂ): ಅಂತಾ​ರಾ​ಷ್ಟ್ರೀಯ ಯೋಗ ದಿನಕ್ಕೆ ವರ್ಷ​ದಿಂದ ವರ್ಷಕ್ಕೆ ಹೆಚ್ಚು ಉತ್ತಮ ಪ್ರತಿ​ಕ್ರಿಯೆ ದೊರ​ಕು​ತ್ತಿದೆ. ಜೂ.21ರಂದು ನಡೆ​ಯ​ಲಿ​ರುವ ಈ ಸಲದ ಯೋಗ ದಿನಾ​ಚ​ರ​ಣೆ​ಯಲ್ಲಿ ವಿಶ್ವದಾದ್ಯಂತ 25 ಕೋಟಿ ಜನರು ಪಾಲ್ಗೊ​ಳ್ಳುವ ನಿರೀ​ಕ್ಷೆ​ಯಿದೆ ಎಂದು ಕೇಂದ್ರ ಆಯುಷ್‌ ಸಚಿವ ಸರ್ಬಾ​ನಂದ ಸೋನೊ​ವಾಲ್‌ ಹೇಳಿ​ದ್ದಾ​ರೆ.
ಅಂತಾ​ರಾ​ಷ್ಟ್ರೀಯ ಮಟ್ಟದ ಮುಖ್ಯ ಸಮಾ​ರಂಭ ನ್ಯೂಯಾ​ರ್ಕ್‌ ವಿಶ್ವ​ಸಂಸ್ಥೆ ಕಚೇ​ರಿ​ಯಲ್ಲಿ ನಡೆ​ಯ​ಲಿದೆ. ಆ ಸಮಾ​ರಂಭ​ದಲ್ಲಿ ಭಾರ​ತದ ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದು ಹಾಜ​ರಾ​ಗಿ ಯೋಗ ಪ್ರದ​ರ್ಶನ ಮಾಡ​ಲಿ​ದ್ದಾರೆ. ಭಾರ​ತದ ಮುಖ್ಯ ಸಮಾ​ರಂಭ ಜಬ​ಲ್ಪು​ರ​ದಲ್ಲಿ (Jabalpura) ನಡೆ​ಯ​ಲಿದೆ. ಅಲ್ಲಿ ಉಪ​ರಾ​ಷ್ಟ್ರ​ಪತಿ ಜಗ​ದೀಪ್‌ ಧನ​ಕರ್‌ ಪಾಲ್ಗೊ​ಳ್ಳ​ಲಿ​ದ್ದಾರೆ ಎಂದು ಸಚಿ​ವರು ಶನಿ​ವಾರ ಸುದ್ದಿಗಾ​ರ​ರಿಗೆ ತಿಳಿ​ಸಿ​ದ​ರು.

‘ವ​ಸು​ಧೈವ ಕುಟುಂಬ​ಕಂ’ (ವಿಶ್ವ ಒಂದೇ ಕುಟುಂಬ​) ಎಂಬುದೇ ಯೋಗ ದಿನಾ​ಚ​ರಣೆಯ ಮೂಲ ಧ್ಯೇಯ​ವಾ​ಗಿದೆ. ಈ ಸಲ ವಿ​ಶ್ವದ ವಿವಿಧ ಬಂದ​ರು​ಗ​ಳಲ್ಲಿ ಲಂಗರು ಹಾಕಿ​ರುವ 9 ನೌಕಾ​ಪಡೆ ಹಡ​ಗಿ​ನಲ್ಲಿ ‘ಓ​ಷ್ಯ​ನ್‌ ರಿಂಗ್‌ ಆಫ್‌ ಯೋಗ’ ಎಂಬ ವಿಶೇಷ ಪ್ರದ​ರ್ಶನ ನಡೆ​ಯ​ಲಿದೆ. ‘ಯೋಗ ಭಾರ​ತ​ಮಾ​ಲಾ’ ಪ್ರದ​ರ್ಶ​ನ​ದಲ್ಲಿ ಭಾರ​ತದ ಮೂರೂ ಸೇನಾ​ಪಡೆ ಪಾಲ್ಗೊ​ಳ್ಳ​ಲಿವೆ. ‘ಯೋಗ ಸಾಗ​ರ​ಮಾ​ಲಾ’ ಅಡಿ ಐಎ​ನ್‌​ಎಸ್‌ ವಿಕ್ರಾಂತ್‌ (INS Vikranth) ಯುದ್ಧ​ನೌ​ಕೆ​ಯಲ್ಲಿ ಯೋಗ ಏರ್ಪಾ​ಟಾ​ಗಿ​ದೆ. ಉತ್ತರ ಧ್ರುವ (North Pole) ಹಾಗೂ ದಕ್ಷಿಣ ಧ್ರುವ​ದಲ್ಲೂ (South Pole) ಯೋಗ ದಿನ ನಡೆ​ಯ​ಲಿದೆ. ಎಲ್ಲ ಗ್ರಾಮ ಪ್ರಧಾ​ನ​ರಿಗೂ ಪ್ರಧಾ​ನಿ ಮೋದಿ ಪತ್ರ ಬರೆದು ಯೋಗ ದಿನ​ವನ್ನು ಗ್ರಾಮ​ಗ​ಳ ಶಾಲೆ, ಆಸ್ಪತ್ರೆ, ಅಂಗ​ನ​ವಾಡಿ ಕೇಂದ್ರ​ಗ​ಳಲ್ಲಿ ಉತ್ತೇ​ಜಿ​ಸಲು ಕರೆ ನೀಡಿ​ದ್ದಾ​ರೆ.

ವಿಶ್ವಸಂಸ್ಥೆಯಲ್ಲಿ ಮೋದಿಗೆ 180 ದೇಶದ ಜನರ ಸಾಥ್‌

ನ್ಯೂಯಾರ್ಕ್: ವಿಶ್ವಸಂಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲಿ ಆಯೋಜನೆಯಾಗಿರುವ ಅಂತಾರಾಷ್ಟ್ರೀಯ ಯೋಗ (International Yoga Day) ದಿನಾಚರಣೆ ಕಾರ್ಯಕ್ರಮದಲ್ಲಿ 180 ದೇಶಗಳ ಜನ ಭಾಗಿಯಾಗಲಿದ್ದಾರೆ. ಇವರಲ್ಲಿ ಅಧಿಕಾರಿಗಳು, ಕಲಾವಿದರು, ವಿದ್ವಾಂಸರು ಮತ್ತು ಉದ್ಯಮಿಗಳು ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 180 ವಿವಿಧ ದೇಶಗಳ ಜನ ಇದರಲ್ಲಿ ಭಾಗಿಯಾಗಲಿದ್ದು ಇವರು ಜೀವನದ ವಿವಿಧ ಮಜಲುಗಳನ್ನು ಪ್ರತಿನಿಧಿಸಲಿದ್ದಾರೆ. ಪ್ರಧಾನಿ ಮೋದಿ ಅವರು 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಿದ್ದು, ಜೂ.21ರಂದು ಬೆಳಗ್ಗೆ 8 ಗಂಟೆಯಿಂದ 9 ಗಂಟೆಯವರೆಗೆ ಕಾರ್ಯಕ್ರಮ ವಿಶ್ವಸಂಸ್ಥೆಯಲ್ಲಿ ನಡೆಯಲಿದೆ.