Asianet Suvarna News Asianet Suvarna News

ವಾಹನ ಸಂಚರಿಸಬಲ್ಲ ವಿಶ್ವದಲ್ಲೇ ಅತಿ ಎತ್ತರದ ರಸ್ತೆ ಭಾರತದಲ್ಲಿ!

* ಲಡಾಕ್‌ನಲ್ಲಿ 19,300 ಅಡಿ ಎತ್ತರದಲ್ಲಿ ರಸ್ತೆ ನಿರ್ಮಾಣ

* ವಾಹನ ಸಂಚರಿಸಬಲ್ಲ ವಿಶ್ವದಲ್ಲೇ ಅತಿ ಎತ್ತರದ ರಸ್ತೆ ಭಾರತದಲ್ಲಿ

 

This road at 19300 ft in Ladakh is world highest motorable road pod
Author
Bangalore, First Published Aug 5, 2021, 11:26 AM IST

ನವದೆಹಲಿ(ಆ.05): ಪೂರ್ವ ಲಡಾಖ್‌ನ ಉಮ್ಲಿಂಗ್ಲಾ ಪಾಸ್‌ ಬಳಿ 19,300 ಅಡಿ ಎತ್ತರದಲ್ಲಿ ಜಗತ್ತಿನಲ್ಲಿಯೇ ಅತಿ ಎತ್ತರದ ಮೋಟಾರಬಲ್‌ (ಮೋಟಾರು ವಾಹನಗಳಿಗೆ ಬಳಕೆಯಾಗುವ ರಸ್ತೆ) ರಸ್ತೆ ನಿರ್ಮಿಸಲಾಗಿದೆ ಎಂದು ರಕ್ಷಣಾ ಇಲಾಖೆ ಬುಧವಾರ ತಿಳಿಸಿದೆ.

ಗಡಿ ರಸ್ತೆಗಳ ಸಂಘಟನೆ ಉಮ್ಲಿಂಗ್ಲಾ ಪಾಸ್‌ 52 ಕಿಲೋ ಮೀಟರ್‌ ಉದ್ದದ ರಸ್ತೆ ನಿರ್ಮಿಸಿದೆ. ಇದು ಚುಮಾರ್‌ ಸೆಕ್ಟರ್‌ನ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ. ಲೇಹ್‌ನ ಚಿಸುಮ್ಲೇ ಮತ್ತು ಡೆಮ್ಚೋಕ್‌ ಸಂಪರ್ಕಿಸುವುದರಿಂದ ಸ್ಥಳೀಯರಿಗೂ ನೆರವಾಗುತ್ತದೆ.

ಲಡಾಕ್‌ನಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೂ ಸಹಾಯಕ. ಇದಕ್ಕೂ ಮೊದಲು ಬೋಲಿವಿಯಾದದಲ್ಲಿ 18,953 ಅಡಿ ಎತ್ತರದಲ್ಲಿ ನಿರ್ಮಿಸಲಾಗಿರುವ ರಸ್ತೆಯೇ ಅತಿ ಎತ್ತರದ ರಸ್ತೆಯಾಗಿತ್ತು ಎಂದು ತಿಳಿಸಿದೆ.

Follow Us:
Download App:
  • android
  • ios