Asianet Suvarna News Asianet Suvarna News

ಕೇಂದ್ರ ಗೃಹ ಇಲಾಖೆಯಲ್ಲಿ ಇಷ್ಟೊಂದು ಭ್ರಷ್ಟಾಚಾರನಾ? ಕೇಂದ್ರ ವಿಚಕ್ಷಣ ದಳದ ವರದಿ ಇಲ್ಲಿದೆ

ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಇಲಾಖೆಗಳಲ್ಲಿ ಅತ್ಯಂತ ಭ್ರಷ್ಟ ಎನಿಸಿದ ಅಥವಾ ಅತ್ಯಂತ ಹೆಚ್ಚು ಭ್ರಷ್ಟಾಚಾರದ ಆರೋಪವಿರುವ ಇಲಾಖೆ ಯಾವುದು? ಈ ಪ್ರಶ್ನೆಗೆ ಕೇಂದ್ರ ಜಾಗೃತ ದಳ ಉತ್ತರಿಸಿದೆ.

This is the government department with the most corrupt employees Here is the Central Vigilance Commission Annual report akb
Author
First Published Aug 22, 2023, 2:10 PM IST

ನವದೆಹಲಿ: ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಇಲಾಖೆಗಳಲ್ಲಿ ಅತ್ಯಂತ ಭ್ರಷ್ಟ ಎನಿಸಿದ ಅಥವಾ ಅತ್ಯಂತ ಹೆಚ್ಚು ಭ್ರಷ್ಟಾಚಾರದ ಆರೋಪವಿರುವ ಇಲಾಖೆ ಯಾವುದು? ಈ ಪ್ರಶ್ನೆಗೆ ಕೇಂದ್ರ ಜಾಗೃತ ದಳ ಉತ್ತರಿಸಿದ್ದು, ಅತ್ಯಂತ ಹೆಚ್ಚು ಭ್ರಷ್ಟಾಚಾರ ಆರೋಪವಿರುವುದು ಕೇಂದ್ರ ಗೃಹ ಇಲಾಖೆಯ ಮೇಲೆ ಎಂದು ಹೇಳಿದೆ. ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಉದ್ಯೋಗಿಗಳ ವಿರುದ್ಧ ಅತೀ ಹೆಚ್ಚು ಭ್ರಷ್ಟಾಚಾರದ ದೂರುಗಳು ಬಂದಿವೆ. ನಂತರದ ಸ್ಥಾನದಲ್ಲಿ ರೈಲ್ವೆ ಉದ್ಯೋಗಿಗಳು ಹಾಗೂ ಬ್ಯಾಂಕ್ ಉದ್ಯೋಗಿಗಳು ಇದ್ದಾರೆ ಎಂದು ಕೇಂದ್ರ ವಿಚಕ್ಷಣ ದಳದ ವಾರ್ಷಿಕ ವರದಿ ಹೇಳಿದೆ. 

ಒಟ್ಟಾರೆಯಾಗಿ, 2022 ರಲ್ಲಿ ಕೇಂದ್ರ ಸರ್ಕಾರದ (Central Govt)ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿರುವ ಎಲ್ಲಾ ವರ್ಗದ ಅಧಿಕಾರಿಗಳು ಮತ್ತು ಉದ್ಯೋಗಿಗಳ ಮೇಲೆ ಒಟ್ಟು 1,15,203 ದೂರುಗಳನ್ನು ಸ್ವೀಕರಿಸಲಾಗಿದೆ ಅವುಗಳಲ್ಲಿ 85,437 ದೂರುಗಳನ್ನು ವಿಲೇವಾರಿ  ಮಾಡಲಾಗಿದೆ.  29,766  ಕೇಸುಗಳು ಬಾಕಿ ಉಳಿದಿವೆ, ಇದರಲ್ಲಿ 22,034 ದೂರುಗಳು ಮೂರು ತಿಂಗಳಿಗಿಂತ ಹೆಚ್ಚು ಕಾಲದಿಂದ ಬಾಕಿ ಉಳಿದಿವೆ ಎಂದು ಜಾಗೃತ ದಳದ ವರದಿ ಹೇಳಿದೆ. ಪ್ರಾಮಾಣಿಕ ವಾಚ್‌ಡಾಗ್ ರೀತಿ ಕೆಲಸ ಮಾಡುವ ಕೇಂದ್ರ ವಿಚಕ್ಷಣ ದಳದ ಅಧಿಕಾರಿಗಳಿಗೆ ಈ ದೂರುಗಳನ್ನು ಪರಿಶೀಲಿಸಲು ಕೇಂದ್ರೀಯ ವಿಜಿಲೆನ್ಸ್ ಕಮಿಷನ್ ಮೂರು ತಿಂಗಳ ಕಾಲ ಮಿತಿ ನೀಡಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 

ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈಗೆ ಝಡ್‌ ಪ್ಲಸ್ ಭದ್ರತೆ

ಕಳೆದ ವರ್ಷ ಕೇಂದ್ರ ಗೃಹ ಸಚಿವಾಲಯದ ಉದ್ಯೋಗಿಗಳ ವಿರುದ್ಧ 46,643 ದೂರುಗಳು ಬಂದಿದ್ದವು. ಹಾಗೆಯೇ  ರೈಲ್ವೆ ಉದ್ಯೋಗಿಗಳ ವಿರುದ್ಧ 10,580 ಮತ್ತು ಬ್ಯಾಂಕ್‌ ಉದ್ಯೋಗಿಗಳ ವಿರುದ್ಧ 8,129 ದೂರುಗಳು ಬಂದಿವೆ ಎಂದು ಈ ವರದಿ ತಿಳಿಸಿದೆ. ಗೃಹ ಸಚಿವಾಲಯದ ಉದ್ಯೋಗಿಗಳ ವಿರುದ್ಧದ ಒಟ್ಟು ದೂರುಗಳಲ್ಲಿ 23,919 ದೂರುಗಳು  ವಿಲೇವಾರಿಯಾಗಿದೆ ಮತ್ತು 22,724 ವಿಲೇವಾರಿಗೆ ಬಾಕಿ ಇದೆ  ಅದರಲ್ಲೂ 19,198 ದೂರುಗಳು ಮೂರು ತಿಂಗಳಿಗಿಂತ ಹೆಚ್ಚು ಕಾಲದಿಂದ ಬಾಕಿಯಿದೆ ಎಂದು ಅದು ಹೇಳಿದೆ.

ಹಾಗೆಯೇ ರೈಲ್ವೆಯಲ್ಲಿ  9,663 ದೂರುಗಳನ್ನು ವಿಲೇವಾರಿ ಮಾಡಲಾಗಿದೆ. 917 ದೂರುಗಳು ವಿಲೇವಾರಿಗೆ ಬಾಕಿ ಇದೆ. ಇದರಲ್ಲಿ 9 ದೂರುಗಳು ಮೂರು ತಿಂಗಳಿಗಿಂತಲೂ ಹೆಚ್ಚು ಕಾಲದಿಂದ ಬಾಕಿ ಇದೆ. ಹಾಗೆಯೇ ಬ್ಯಾಂಕ್ ಉದ್ಯೋಗಿಗಳ ವಿರುದ್ಧದ  7,762 ಭ್ರಷ್ಟಾಚಾರ ದೂರುಗಳನ್ನು ವಿಲೇವಾರಿ ಮಾಡಲಾಗಿದೆ 367  ದೂರುಗಳು ಬಾಕಿ ಉಳಿದಿವೆ. ಅದರಲ್ಲಿ 78 ದೂರುಗಳು ಮೂರು ತಿಂಗಳಿನಿಂದಲೂ ಬಾಕಿ ಉಳಿದಿವೆ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯ ಸರ್ಕಾರಿ ನೌಕರರ ವಿರುದ್ಧ 7,370 ದೂರುಗಳು ದಾಖಲಾಗಿವೆ. ಇವುಗಳಲ್ಲಿ 6,804 ದೂರುಗಳನ್ನು ವಿಲೇವಾರಿ  ಮಾಡಲಾಗಿದೆ ಮತ್ತು 566 ದೂರುಗಳು ಬಾಕಿ ಉಳಿದಿವೆ ಅದರಲ್ಲೂ 18 ದೂರುಗಳು ಕಳೆದ ಮೂರು ತಿಂಗಳಿಗಿಂತ  ಹೆಚ್ಚು ಕಾಲದಿಂದ ಬಾಕಿ ಉಳಿದಿವೆ. 

40,000 ಕೋಟಿ ಮೌಲ್ಯದ 5,600 ಕೆಜಿ ಹೆರಾಯಿನ್‌ ವಶ: ಎಷ್ಟೋ ರಾಜ್ಯಗಳ ಬಜೆಟ್‌ಗಿಂತ ಹೆಚ್ಚು!

ಹಾಗೆಯೇ ಕೇಂದ್ರ  ಕೇಂದ್ರ ಲೋಕೋಪಯೋಗಿ ಇಲಾಖೆ ( Central Public Works Department), ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಡಿ ಬರುವ ದೆಹಲಿ ಅಭಿವೃದ್ಧಿ ಪ್ರಾಧಿಕಾರ, ದೆಹಲಿ ಮೆಟ್ರೋ ರೈಲು ನಿಗಮ (Delhi Metro Rail Corporation), ದೆಹಲಿ ಅರ್ಬನ್ ಆರ್ಟ್ ಕಮಿಷನ್, ಹಿಂದೂಸ್ತಾನ್ ಪ್ರಿಫ್ಯಾಬ್ ಲಿಮಿಟೆಡ್, ವಸತಿ ಮತ್ತು ಗೃಹ ಮತ್ತು ವಸತಿ ಸಚಿವಾಲಯದ ನೌಕರರ ವಿರುದ್ಧ 4,710 ದೂರುಗಳು ದಾಖಲಾಗಿವೆ ಎಂದು ವರದಿ ತಿಳಿಸಿದೆ.  ಇದರಲ್ಲಿ 3,889  ದೂರುಗಳ ವಿಲೇವಾರಿ ಮಾಡಲಾಗಿದೆ. 821 ವರದಿಗಳು ಬಾಕಿ ಉಳಿದಿವೆ. ಇದರಲ್ಲಿ 577 ವರದಿಗಳು ಕಳೆದ ಮೂರು ತಿಂಗಳಿಂದ ಬಾಕಿ ಉಳಿದಿವೆ ಎಂದು ವರದಿ ಹೇಳಿದೆ.

ಹಾಗೆಯೇ ಸಿವಿಸಿ ವಾರ್ಷಿಕ ವರದಿಯಲ್ಲಿ ಕೇಂದ್ರ ಕಲ್ಲಿದ್ದಲು ಸಚಿವಲಯದ ವಿರುದ್ಧ 4,304 ದೂರುಗಳು ದಾಖಲಾಗಿದ್ದು ಅದರಲ್ಲಿ 4,050 ದೂರುಗಳು ವಿಲೇವಾರಿ ಆಗಿವೆ. ಹಾಗೆಯೇ ಕೇಂದ್ರ ಕಾರ್ಮಿಕ ಸಚಿವಾಲಯದ ಉದ್ಯೋಗಿಗಳ ವಿರುದ್ಧ 4,236 ದೂರುಗಳಿದ್ದು, ಅದರಲ್ಲಿ 4,016 ವಿಲೇವಾರಿ ಆಗಿದೆ. ಹಾಗೆಯೇ ಪೆಟ್ರೋಲಿಯಂ ಸಚಿವಾಲಯದ ಉದ್ಯೋಗಿಗಳ ವಿರುದ್ಧ  2,617  ದೂರುಗಳು ದಾಖಲಾಗಿದ್ದು, ಇದರಲ್ಲಿ 2,409 ವಿಲೇವಾರಿ ಮಾಡಲಾಗಿದೆ

ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ನೌಕರರ ವಿರುದ್ಧ 2,150 ದೂರುಗಳು ದಾಖಲಾಗಿವೆ.  ರಕ್ಷಣಾ ಸಚಿವಾಲಯದ ನೌಕರರ ವಿರುದ್ಧ 1,619, ದೂರಸಂಪರ್ಕ ಇಲಾಖೆಯ ನೌಕರರ ವಿರುದ್ಧ 1,308, ಹಣಕಾಸು ಸಚಿವಾಲಯದ ನೌಕರರ ವಿರುದ್ಧ 1,202 ಮತ್ತು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (CBIC) ವಿರುದ್ಧ 1,101 ದೂರುಗಳು ದಾಖಲಾಗಿವೆ ಎಂದು ವರದಿ ಹೇಳಿದೆ. 

Follow Us:
Download App:
  • android
  • ios