ಮಮತಾ ಬ್ಯಾನರ್ಜಿ ಕುರಿತು ಮೀಮ್ ಹಂಚಿಕೊಂಡಿದ್ದಕ್ಕೆ ಎಕ್ಸ್ ಯೂಸರ್‌ಗೆ ಪೊಲೀಸರ ಎಚ್ಚರಿಕೆ!
ಸ್ಟೇಜ್ ಏರಿ ಬರುವಾಗ ಮಮತಾ ಬ್ಯಾನರ್ಜಿ ಡಾನ್ಸ್ ಮಾಡುತ್ತಲೇ ಇರುವ ಎಐ ವರ್ಷನ್‌ನ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿತ್ತು. ತಮಾಷೆಯ ವಿಡಿಯೋ ಪೋಸ್ಟ್ ಮಾಡಿದ ಹ್ಯಾಂಡಲ್‌ಗೆ ಕೋಲ್ಕತ್ತಾ ಪೊಲೀಸ್ ನೋಟಿಸ್ ಕಳಿಸಿತ್ತು.
ನವದೆಹಲಿ (ಮೇ.6): "ಆಕ್ಷೇಪಾರ್ಹ, ದುರುದ್ದೇಶಪೂರಿತ ಮತ್ತು ಪ್ರಚೋದನೆ ಮಾಡುವ" ವೀಡಿಯೊವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಕೋಲ್ಕತ್ತಾ ಪೊಲೀಸರ ಸೈಬರ್ ಕ್ರೈಮ್ ವಿಭಾಗವು ಸೋಮವಾರ ಇಬ್ಬರು ಸೋಶಿಯಲ್ ಮೀಡಿಯಾ ಯೂಸರ್‌ಗಳಿಗೆ ನೋಟಿಸ್ ಜಾರಿ ಮಾಡಿದೆ. ಮಮತಾ ಬ್ಯಾನರ್ಜಿಯ ಅವರ ಎಐ ವಿಡಿಯೋ ಇದಾಗಿದೆ. ಇದರಲ್ಲಿ ಮಮತಾ ಬ್ಯಾನರ್ಜಿ ಡಾನ್ಸ್ ಮಾಡುತ್ತಾ ವೇದಿಕೆ ಏರುವ ದೃಶ್ಯವ್ನು ಒಳಗೊಂಡಿದೆ. ಮಮತಾ ಬ್ಯಾನರ್ಜಿ ಅವರ ಆಕ್ಷೇಪಾರ್ಹ ವಿಡಿಯೋ ಶೇರ್ ಮಾಡಿದ್ದಕ್ಕಾಗಿ ಇಬ್ಬರು ಸೋಶಿಯಲ್ ಮೀಡಿಯಾ ಯೂಸರ್‌ಗಳಾದ @SoldierSaffron7 ಮತ್ತು @Shalendervoice ಗೆ ಕೋಲ್ಕತ್ತಾ ಪೊಲೀಸ್‌ನ ಸೈಬರ್ ಕ್ರೈಮ್ ವಿಭಾಗ ನೋಟಿಸ್ ಜಾರಿ ಮಾಡಿದೆ.
"ಹೆಸರು ಮತ್ತು ವಾಸಸ್ಥಳ ಸೇರಿದಂತೆ ನಿಮ್ಮ ಗುರುತನ್ನು ತಕ್ಷಣವೇ ಬಹಿರಂಗಪಡಿಸಲು ನಿಮಗೆ ನಿರ್ದೇಶಿಸಲಾಗಿದೆ. ಕೋರಿದ ಮಾಹಿತಿಯನ್ನು ಬಹಿರಂಗಪಡಿಸದಿದ್ದರೆ, ನೀವು ಕಾನೂನು ಕ್ರಮಕ್ಕೆ ಜವಾಬ್ದಾರರಾಗಿರುತ್ತೀರಿ u/s 42 CrPC," ಎಂದು ಕೋಲ್ಕತ್ತಾ ಪೊಲೀಸ್‌ನ ಡಿಸಿಪಿ (ಸೈಬರ್ ಕ್ರೈಮ್) ವಿಭಾಗ ಇವರು ಹಂಚಿಕೊಂಡ ವಿಡಿಯೋದ ಕಾಮೆಂಟ್ ಬಾಕ್ಸ್‌ನಲ್ಲಿಯೇ ರಿಪ್ಲೈ ಪೋಸ್ಟ್ ಮಾಡಿದೆ.
@Shalendervoice ಎನ್ನುವ ಹ್ಯಾಂಡಲ್ ಪೋಸ್ಟ್‌ಅನ್ನು ಡಿಲೀಟ್ ಮಾಡಿದ್ದರೆ, @SoldierSaffron7 ಎನ್ನುವ ಹ್ಯಾಂಡಲ್‌ನಲ್ಲಿ ಇನ್ನೂ ಕೂಡ ಈ ವಿಡಿಯೋ ಪೋಸ್ಟ್ ಆಗಿಯೇ ಇದೆ. ವೀಡಿಯೊವನ್ನು ಹಂಚಿಕೊಂಡ ಕೆಲವು ಇತರ ಎಕ್ಸ್ ಹ್ಯಾಂಡಲ್‌ಗಳನ್ನು ಸಹ ಪೊಲೀಸರು ಟ್ಯಾಗ್ ಮಾಡಿದ್ದಾರೆ. ನಂತರ, ಪೊಲೀಸರು ಸಿಆರ್‌ಪಿಸಿಯ ಸೆಕ್ಷನ್ 149 (ಕಾಗ್ನೈಸಬಲ್ ಅಪರಾಧಗಳ ತಡೆಗಟ್ಟುವಿಕೆ) ಅಡಿಯಲ್ಲಿ ಇಬ್ಬರು ಎಕ್ಸ್ ಯೂಸರ್‌ಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
"ಆಕ್ಷೇಪಾರ್ಹ, ದುರುದ್ದೇಶಪೂರಿತ ಮತ್ತು ಪ್ರಚೋದನಕಾರಿ ಪೋಸ್ಟ್‌ಗಳನ್ನು ಪೋಸ್ಟ್ ಮಾಡಲು ನೀವು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿರುವಿರಿ ಎಂದು ಗಮನಿಸಲಾಗಿದೆ. ಕೋಲ್ಕತ್ತಾದ ಸೈಬರ್ ಪೊಲೀಸ್ ಠಾಣೆ ಈ ಮೂಲಕ ಅಂತಹ ಸಂದೇಶವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಸೆಕ್ಷನ್ 149 CrPC ಅಡಿಯಲ್ಲಿ ನಿಮ್ಮ ವಿರುದ್ಧ ನೋಟಿಸ್ ಜಾರಿಮಾಡುತ್ತದೆ" ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಈ ವಿಡಿಯೋ " ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ" ಎಂದು ತಿಳಿಸಲಾಗಿದೆ. ಎಕ್ಸ್ ಯೂಸರ್‌ಗಳಿಗೆ ಪೋಸ್ಟ್ ಅನ್ನು ಅಳಿಸಲು ಅಥವಾ ಕಟ್ಟುನಿಟ್ಟಾದ ದಂಡದ ಕ್ರಮವನ್ನು ಎದುರಿಸಲು ಸೂಚನೆ ನೀಡಲಾಗಿದೆ.
'ಕೋಲ್ಕತ್ತಾ ಪೊಲೀಸರು ಮಮತಾ ಬ್ಯಾನರ್ಜಿ ಮೇಲೆ ಮೀಮ್ಸ್ ಪೋಸ್ಟ್ ಮಾಡಿದ್ದಕ್ಕಾಗಿ ನೋಟಿಸ್ ನೀಡುತ್ತಿದ್ದಾರೆ. ಭಾರತದಲ್ಲಿ ಬಿಜೆಪಿ ಸರ್ಕಾರದಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂದು ಹೇಳುವವರು ಕೆಲವೊಮ್ಮೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಬೇಕು. ಬಂಗಾಳದಲ್ಲಿ ತುಂಬಾ ವಾಕ್ ಸ್ವಾತಂತ್ರ್ಯ ಇದೆ ಎನ್ನುವುದು ಇದರಿಂದ ಗೊತ್ತಾಗುತ್ತಿದೆ' ಎಂದು @SoldierSaffron7 ಟ್ವೀಟ್ ಮಾಡಿದೆ.
ಶಿಕ್ಷಕರ ನೇಮಕಾತಿ ಹಗರಣ ಬಂಗಾಳದ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆಗೆ ಸುಪ್ರೀಂ ತಡೆಯಾಜ್ಞೆ
ಪೋಲೀಸರು ಒಂದು ಸ್ಪೂಫ್ ವೀಡಿಯೋ ಕುರಿತಾಗಿ ನೋಟಿಸ್ ಕಳಿಸಿದ್ದಕ್ಕೆ, ಸೋಶಿಯಲ್ ಮೀಡಿಯಾ ಯೂಸರ್‌ಗಳು ಅಚ್ಚರಿಪಟ್ಟಿದ್ದಾರೆ. 'ಸಾಮಾನ್ಯ ವ್ಯಕ್ತಿಗೆ ಬೆದರಿಕೆ ಹಾಕಲು ಪೊಲೀಸರಿಗೆ ಇದೂ ಒಂದು ಮಾರ್ಗ. ಮೀಮ್ ವಿಡಿಯೋ ಮಾಡುವವರಿಗೆ ಪೊಲೀಸರು ಈ ರೀತಿ ಬೆದರಿಕೆ ಹಾಕುತ್ತಾರೆಯೇ? ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂಬುದನ್ನು ಪೊಲೀಸರು ಮರೆಯಬಾರದು. ಇಂತಹ ಬೆದರಿಕೆಗಳಿಗೆ ಯಾರೂ ಹೆದರುವುದಿಲ್ಲ. . ಹೋಗಿ ಇದನ್ನು ಮಮತಾ ಬ್ಯಾನರ್ಜಿಯವರಿಗೆ ತಿಳಿಸಿ" ಎಂದು ಸೋಶಿಯಲ್ ಮೀಡಿಯಾ ಯೂಸರ್ ಒಬ್ಬರು ಬರೆದಿದ್ದಾರೆ.
ಹೆಲಿಕಾಪ್ಟರ್ ನಲ್ಲಿ ಜಾರಿಬಿದ್ದ ಮಮತಾ ಬ್ಯಾನರ್ಜಿ, ಮತ್ತೆ ಗಾಯಗೊಂಡ ದೀದಿ!