Budget 2023: ಅಮೃತ ಕಾಲದ ಬಜೆಟ್‌, ಭವಿಷ್ಯದ ಭಾರತಕ್ಕೆ ಬುನಾದಿ: ಪ್ರಧಾನಿ ಮೋದಿ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಂಸತ್ತಿನಲ್ಲಿ ಮಂಡಿಸಿದ ಕೇಂದ್ರ ಬಜೆಟ್ಟನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಬಹುವಾಗಿ ಶ್ಲಾಘಿಸಿದ್ದಾರೆ. ‘ಇದು ಅಮೃತ ಕಾಲದ ಮುಂಗಡ ಪತ್ರವಾಗಿದ್ದು, ಭವಿಷ್ಯದ ಭಾರತಕ್ಕೆ ಬುನಾದಿ ಹಾಕಲಿದೆ’ ಎಂದು ಕೊಂಡಾಡಿದ್ದಾರೆ. 

This Budget is the Foundation for future India Says PM Naendra Modi gvd

ನವದೆಹಲಿ (ಫೆ.02): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಂಸತ್ತಿನಲ್ಲಿ ಮಂಡಿಸಿದ ಕೇಂದ್ರ ಬಜೆಟ್ಟನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಬಹುವಾಗಿ ಶ್ಲಾಘಿಸಿದ್ದಾರೆ. ‘ಇದು ಅಮೃತ ಕಾಲದ ಮುಂಗಡ ಪತ್ರವಾಗಿದ್ದು, ಭವಿಷ್ಯದ ಭಾರತಕ್ಕೆ ಬುನಾದಿ ಹಾಕಲಿದೆ’ ಎಂದು ಕೊಂಡಾಡಿದ್ದಾರೆ. ಬಜೆಟ್‌ ಮಂಡನೆ ಬಳಿಕ ಟೀವಿಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಅಮೃತ ಕಾಲದ ಮೊದಲ ಬಜೆಟ್‌ ಇದಾಗಿದ್ದು, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಬಲವಾದ ಅಡಿಪಾಯವನ್ನು ನಿರ್ಮಿಸುತ್ತದೆ. ಈ ಬಜೆಟ್‌ ಬಡವರು, ಮಧ್ಯಮ ವರ್ಗದ ಜನರು, ರೈತರು ಸೇರಿದಂತೆ ಮಹತ್ವಾಕಾಂಕ್ಷೆಯ ಸಮಾಜದ ಕನಸುಗಳನ್ನು ನನಸಾಗಿಸುತ್ತದೆ’ ಎಂದರು.

‘ಬಜೆಟ್‌ ಭಾರತದ ಅಭಿವೃದ್ಧಿ ಪಥಕ್ಕೆ ಹೊಸ ಶಕ್ತಿಯನ್ನು ತುಂಬುತ್ತದೆ. ಮಧ್ಯಮ ವರ್ಗವು ಸಮೃದ್ಧ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸುಗಳನ್ನು ನನಸಾಗಿಸಲು ದೊಡ್ಡ ಶಕ್ತಿಯಾಗಿದೆ ಮತ್ತು ನಮ್ಮ ಸರ್ಕಾರವು ಮಧ್ಯಮ ವರ್ಗಕ್ಕೆ ಬಲ ತುಂಬಲು ಹಲವು ನಿರ್ಧಾರಗಳನ್ನು ತೆಗೆದುಕೊಂಡಿದೆ’ ಎಂದರು. ಬಜೆಟ್‌ನ ವಿವಿಧ ಅಂಶಗಳನ್ನು ಉಲ್ಲೇಖಿಸಿದ ಅವರು, ‘ಡಿಜಿಟಲ್ ಪಾವತಿಯ ಯಶಸ್ಸನ್ನು ಕೃಷಿ ವಲಯದಲ್ಲಿ ಕೂಡ ಪುನರಾವರ್ತಿಸಬೇಕು ಎಂಬುದು ನಮ್ಮ ಆಶಯ. ಅದಕ್ಕಾಗಿ ಡಿಜಿಟಲ್ ಮೂಲಸೌಕರ್ಯಗಳನ್ನು ಕೃಷಿ ವಲಯದಲ್ಲೂ ತರುವ ಯೋಜನೆಯನ್ನು ತರಲಾಗಿದೆ. ಇದು ಸಹಕಾರಿ ಸಂಸ್ಥೆಗಳನ್ನು ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿಯ ಕೇಂದ್ರವಾಗಿಸುತ್ತದೆ’ ಎಂದರು.

Budget 2023: ಅಂತರ್ಗತ ಅಭಿವೃದ್ಧಿಗೆ ಉತ್ತೇಜನ ನೀಡುವ ಬಜೆಟ್‌: ಡಾ.ಎಸ್‌.ಆರ್‌.ಕೇಶವ

‘ಮೂಲಸೌಕರ್ಯದಲ್ಲಿ 10 ಲಕ್ಷ ಕೋಟಿ ರು. ಅಭೂತಪೂರ್ವ ಹೂಡಿಕೆಯು ಅಭಿವೃದ್ಧಿಗೆ ವೇಗ ಮತ್ತು ಹೊಸ ಶಕ್ತಿ ನೀಡುತ್ತದೆ. ದೇಶಕ್ಕಾಗಿ ಸಾಂಪ್ರದಾಯಿಕವಾಗಿ ತಮ್ಮ ಕೈಗಳಿಂದ ಶ್ರಮಿಸುತ್ತಿರುವ ’ವಿಶ್ವಕರ್ಮ’ ಈ ದೇಶದ ಸೃಷ್ಟಿಕರ್ತರು. ಮೊದಲ ಬಾರಿಗೆ ’ವಿಶ್ವಕರ್ಮ’ರಿಗೆ ತರಬೇತಿ ಮತ್ತು ಬೆಂಬಲಕ್ಕೆ ಸಂಬಂಧಿಸಿದ ಯೋಜನೆಯನ್ನು ಬಜೆಟ್‌ನಲ್ಲಿ ತರಲಾಗಿದೆ’ ಎಂದು ಪ್ರಧಾನಮಂತ್ರಿ ವಿವರಿಸಿದರು.

Latest Videos
Follow Us:
Download App:
  • android
  • ios