ಅಮೃತಸರ(ಏ.22): ಕೊರೋನಾ ವೈಸರ್ ಮಹಾಮಾರಿ ವಕ್ಕರಿಸಿದ ಬಳಿಕ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬೇಡಿಕೆ ಮುಗಿಲು ಮುಟ್ಟಿದೆ. ಇನ್ನು ಹಲವಾರು ದೇಶಗಳಲ್ಲಿ ಜನರು ಭಾರೀ ಪ್ರಮಾಣದಲ್ಲಿ ಇದನ್ನು ಖರೀದಿಸಿ ದಾಸ್ತಾನು ಮಾಡಿದ ಪರಿಣಾಮ ಕೊರತೆಯೂ ಎದುರಾಗಿದೆ. ಹೀಗಿರುವಾಗ ಮಾಸ್ಕ್ ಹಾಗೂ ಸ್ಯಾನಿಟೈಸರ್ ಲಭ್ಯತೆಗಾಗಿ ಸರ್ಕಾರಗಳೂ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿವೆ. ಆದರೆ ಭಾರತದಲ್ಲಿ ಮಹಿಳೆಯರಿಂದ ವೃದ್ಧರವರೆಗೆ ಮಾಸ್ಕ್ ತಯಾರಿಸುವಲ್ಲಿ ಕೈಜೋಡಿಸಿರುವುದರಿಂದ ಈ ಕೊರತೆ ಕಂಡು ಬಂದಿಲ್ಲ.

ಇದೀಗ ಪಂಜಾಬ್‌ನ ಮೋಗಾದ 98 ವರ್ಷದ ವೃದ್ಧೆ ಗುರುದೇವ್ ಕೌರ್ ಕೂಡಾ ಕೊರೋನಾ ವಿರುದ್ಧದ ಸಮರಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ. ಪ್ರತಿದಿನ ಮಾಸ್ಕ್ ತಯಾರಿಸುತ್ತಿರುವ ಇವರು, ಮಾಸ್ಕ್ ಖರೀದಿಸಲು ಯಾರಿಗೆ ಸಾಧ್ಯವಿಲ್ಲವೋ ಅಂತಹವರಿಗೆ ಇದನ್ನು ಹಂಚುತ್ತಿದ್ದಾರೆ.

ಈಕೆ ನನ್ನ ತಾಯಿಯಲ್ಲ, ಮಾನವೀಯತೆ ಮೆರೆಯುತ್ತಿರುವ ಈ ಮಹಾತಾಯಿಗೆ ಧನ್ಯವಾದ: ಚಿರಂಜೀವಿ

ಪ್ರತಿದಿನ ಎಂಟು ತಾಸು ಮಾಸ್ಕ್ ತಯಾರಿಸಲು ಮೀಸಲು

ಗುರುದೇವ್‌ರವರ ಹೆಚ್ಚಾಗುತ್ತಿರುವ ವಯಸ್ಸಿನ ಜೊತೆ ದೃಷ್ಟಿಯೂ ಕಡಿಮೆಯಾಗಲಾರಂಭಿಸಿದೆ. ಹೀಗಿದ್ದರೂ ಅವರು ಪ್ರತಿದಿನ ಜೆಂಟು ಗಂಟೆ ಮಾಸ್ಕ್ ನಿರ್ಮಿಸುತ್ತಾರೆ. ಈ ಕೆಲಸಕ್ಕೆ ಅವರ ಸೊಸೆ ಹಾಗು ಕುಟುಂಬ ಸದಸ್ಯರೂ ಸಾಥ್ ನೀಡುತ್ತಾರೆ.

ಒಂದು ಕಣ್ಣು ಕಾಣಿಸುವುದಿಲ್ಲ

ಈ ಸಂಬಂಧ ಸುದ್ಧಿಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿದ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡುತ್ತೇವೆ. ಈ ರೋಗದಿಂದ ರಕ್ಷಿಸಿಕೊಳ್ಳಲು ಎಚ್ಚರ ವಹಿಸುವುದೂ ಅಗತ್ಯ. ಎಷ್ಟು ಸಾಧ್ಯವಾಗುತ್ತದೋ ಅಷ್ಟು ಮನೆಯಲ್ಲಿರಬೇಕು ಎಂದಿದ್ದಾರೆ. ಅಲ್ಲದೇ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಅವರು ತಮಗೆ ಒಂದು ಕಣ್ಣು ಕಾಣುವುದಿಲ್ಲ, ಇನ್ನು 25 ವರ್ಷದ ಹಿಂದೆ ಮತ್ತೊಂದು ಕಣ್ಣಿನ ಆಪರೇಷನ್ ಆಗಿದೆ. ಆದರೂ ಕಣ್ಣಿನ ದೃಷ್ಟಿ ಸರಿ ಇದೆ ಎಂದಿದ್ದಾರೆ.

ಉಚಿತವಾಗಿ ಸಾವಿರಾರು ಮಾಸ್ಕ್‌ ಹಂಚಿ ಮಾನವೀಯತೆ ಮೆರೆದ ಪಠಾಣ್‌ ಸಹೋದರರು

ಸಲಾಂ ಎಂದ ಮುಖ್ಯಮಂತ್ರಿ

ಕೌರ್‌ರವರ ಈ ಕಾರ್ಯ ಕಂಡ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ಶ್ಲಾಘಿಸಿದ್ದಾರೆ. ಪಂಜಾಬ್‌ನ ಅತ್ಯಂತ ಬಲಶಾಲಿ ಕೊರೋನಾ ವಾರಿಯರ್ ಎಂದರೆ, ಅದು ತನ್ನ ಕುಟುಂಬದೊಂದಿಗೆ ಮಾಸ್ಕ್ ತಯಾರಿಸುತ್ತಿರುವ ಮೋಗಿಯ 98  ವರ್ಷದ ಗುರುದೇವ್ ಕೌರ್ . ಪಂಜಾಬಿಗಳ ಇಂತಹ ನಿಸ್ವಾರ್ಥ ಸೇವೆ , ನಾವೆಷ್ಟು ಶಕ್ತಶಾಲಿ ಹಾಗೂ ನಮ್ಮ ಹಾದಿಯಲ್ಲಿ ಬರುಉವ ಎಲ್ಲಾ ಸವಾಲುಗಳನ್ನು ಎದುರಿಸುತ್ತೇವೆಂಬುವುದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.