ಪ್ರೇಕ್ಷಕರಿಲ್ಲದೆ ವಾಘಾ ಬೀಟಿಂಗ್ ರಿಟ್ರೀಟ್: 61 ವರ್ಷದಲ್ಲೇ ಮೊದಲು!
ಪ್ರೇಕ್ಷಕರಿಲ್ಲದೆ ವಾಘಾ ಬೀಟಿಂಗ್ ರಿಟ್ರೀಟ್| 61 ವರ್ಷದಲ್ಲೇ ಮೊದಲು| ಭಾರತ- ಪಾಕಿಸ್ತಾನ ಸೈನಿಕರು ಎದೆಮಟ್ಟಕಾಲು ಎತ್ತಿ ನೆಲಕ್ಕೆ ಅಪ್ಪಳಿಸಿ ಅದ್ಭುತ ದೇಶ ಪ್ರೇಮ ಮೆರೆಯುವ ಮೈನವಿರೇಳಿಸುವ ಈ ಕಾರ್ಯಕ್ರಮ
ಅಮೃತಸರ(ಆ. 16): 61 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಅಟ್ಟಾರಿ- ವಾಘಾ ಗಡಿಯಲ್ಲಿ ಪ್ರೇಕ್ಷಕರಿಲ್ಲದೆ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮ ನಡೆಯಿತು.
ಭಾರತ- ಪಾಕಿಸ್ತಾನ ಸೈನಿಕರು ಎದೆಮಟ್ಟಕಾಲು ಎತ್ತಿ ನೆಲಕ್ಕೆ ಅಪ್ಪಳಿಸಿ ಅದ್ಭುತ ದೇಶ ಪ್ರೇಮ ಮೆರೆಯುವ ಮೈನವಿರೇಳಿಸುವ ಈ ಕಾರ್ಯಕ್ರಮ ವೀಕ್ಷಣೆಗೆ ಪ್ರತಿವರ್ಷ ದೂರದೂರುಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಬರುತ್ತಾರೆ. ಆದರೆ ಕೊರೋನಾ ವೈರಸ್ ಕಾರಣ ಈ ಬಾರಿ ಪ್ರೇಕ್ಷಕರಿಗೆ ಅವಕಾಶ ಇರಲಿಲ್ಲ.
ಕೊರೋನಾ ವೈರಸ್‌ನಿಂದಾಗಿ ಈ ಬಾರಿ ಅಟ್ಟಾರಿ- ವಾಗಾ ಅಂತಾರಾಷ್ಟ್ರೀಯ ಗಡಿಯಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭ ವೀಕ್ಷಕರಿಲ್ಲದೇ ನೆರವೇರಿದೆ. ಬೀಟಿಂಗ್ ರೀಟ್ರೀಟ್ ಕಾರ್ಯಕ್ರಮಕ್ಕೂ ಪ್ರೇಕ್ಷಕರಿಗೆ ಅವಕಾಶ ಇರಲಿಲ್ಲ.
ಕಳೆದ 61 ವರ್ಷಗಳಲ್ಲೇ ಮೊದಲ ಬಾರಿ ಕೇವಲ ಯೋಧರಷ್ಟೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾನ್ಯವಾಗಿ ಪ್ರತಿವರ್ಷ ಬೀಟಿಂಗ್ ರೀಟ್ರೀಟ್ ಅನ್ನು ವೀಕ್ಷಿಸಲು ಪ್ರೇಕ್ಷಕರು ಕಿಕ್ಕಿರಿದು ಸೇರುತ್ತಿದ್ದರು.