ಟ್ರಕ್‌ ಡ್ರೈವರ್‌ಗೆ ಈ ವಿಷಯ ಗೊತ್ತಾಗಿದ್ರೆ ಒಂದು ಬ್ರೇಕ್ ಹಾಕುವ ಮೂಲಕ ಕಳ್ಳರಿಗೆ ನರಕವನ್ನೇ ತೋರಿಸಬಹುದಿತ್ತು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು

ಭೋಪಾಲ್: ಚಲಿಸುತ್ತಿರುವ ಟ್ರಕ್‌ನಿಂದಲೇ ವಸ್ತುಗಳನ್ನು ಕಳ್ಳತನ ಮಾಡುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಕನ್ನಡಿಗರು ಕಳ್ಳರು ಕಿರಾತಕ ಸಿನಿಮಾ ನೋಡಿರಬೇಕು ಎಂದು ಕಮೆಂಟ್ ಮಾಡುತ್ತಿದ್ದಾರೆ. 

ಕಿರಾತಕ ಸಿನಿಮಾದಲ್ಲಿ ನಾಯಕ ನಟ ಯಶ್ ಹಾಗೂ ಆತನ ಗೆಳೆಯರು ಚಲಿಸುತ್ತಿರುವ ಲಾರಿಯಿಂದಲೇ ಗೊಬ್ಬರ ಕಳ್ಳತನ ಮಾಡಿ ಮಾರಾಟ ಮಾಡುತ್ತಾರೆ. ಅಂತಹವುದೇ ಒಂದು ಘಟನೆ ಆಗ್ರಾ-ಮುಂಬೈ ಎಕ್ಸ್‌ಪ್ರೆಸ್‌ನಲ್ಲಿ ನಡೆದಿದೆ. ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ ಆಗ್ರಾ-ಮುಂಬೈನ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಕಳ್ಳತನ ನಡೆದಿದೆ. ಗೂಡ್ಸ್ ತುಂಬಿದ ಲಾರಿಯೊಂದರಿಂದ ದೊಡ್ಡ ಬಾಕ್ಸ್ ಕಳ್ಳತನ ಮಾಡಲಾಗುತ್ತದೆ. 

ವೈರಲ್ ವಿಡಿಯೋದಲ್ಲಿ ಏನಿದೆ? 

ಈ ವಿಡಿಯೋದಲ್ಲಿ ಇಬ್ಬರು ಚಲಿಸುತ್ತಿರುವ ಟ್ರಕ್ ಮೇಲಿನಿಂದ ದೊಡ್ಡದಾದ ಬಾಕ್ಸ್ ಬೀಳಿಸುತ್ತಾರೆ. ನಂತರ ಟ್ರಕ್ ಹಿಂದೆಯೇ ಬೈಕ್ ಸವಾರನೋರ್ವ ಬರುತ್ತಾರೆ. ನಂತರ ಲಾರಿಯ ಮೇಲಿದ್ದ ಇಬ್ಬರು ಒಬ್ಬೊಬ್ಬರಾಗಿ ಬೈಕ್ ಮೇಲೆ ಬಂದು ಕುಳಿತುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. 

2014 ರಿಂದ 2024ರವರೆಗೆ ಮೋದಿ ಹೃದಯದಲ್ಲಿದೆ ಆ ನೋವು!

ಈ ಟ್ರಕ್ ಅನ್ನು ಹಿಂಬಾಲಿಸಿದ ವಾಹನ ಸವಾರರೊಬ್ಬರು ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಇದು ಅತ್ಯಂತ ಅಪಾಯಕಾರಿಯಾದ ಕಳ್ಳತನ ಎಂದು ಹೇಳುವ ಮೂಲಕ ಕಳ್ಳರ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.

ಮುಂಬೈನಲ್ಲಿ ನೀರಿಗೆ ಹಾಹಾಕಾರ, ರೆಸ್ಟೋರೆಂಟ್‌ನಲ್ಲಿ ರಿಕ್ವೆಸ್ಟ್ ಮಾಡಿದ್ರಷ್ಟೇ ಕೊಡ್ತಾರೆ ಕುಡಿಯೋ ನೀರು!

Scroll to load tweet…

ಟ್ರಕ್‌ ಡ್ರೈವರ್‌ಗೆ ಈ ವಿಷಯ ಗೊತ್ತಾಗಿದ್ರೆ ಒಂದು ಬ್ರೇಕ್ ಹಾಕುವ ಮೂಲಕ ಕಳ್ಳರಿಗೆ ನರಕವನ್ನೇ ತೋರಿಸಬಹುದಿತ್ತು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನು ಒಬ್ಬರು ಮೂವರಿಗೂ ಒಬ್ಬರ ಮೇಲೆ ಮತ್ತೊಬ್ಬರಿಗೆ ಎಷ್ಟು ನಂಬಿಕೆ ನೋಡಿ ಎಂದು ಕಮೆಂಟ್ ಮಾಡಿದ್ದಾರೆ.