ಹಿಂದೂ ಧರ್ಮವಿಲ್ಲ, ಎಲ್ಲ ಸಮಸ್ಯೆಗಳಿಗೆ ಬ್ರಾಹ್ಮಣವಾದ ಕಾರಣ: ಎಸ್‌ಪಿ ಮುಖಂಡ
ಇತ್ತೀಚೆಗೆ ರಾಮಚರಿತ ಮಾನಸ ನಿಷೇಧಕ್ಕೆ ಆಗ್ರಹಿಸಿದ್ದ ಎಸ್‌ಪಿ ಮುಖಂಡ ಸ್ವಾಮಿ ಪ್ರಸಾದ್ ಮೌರ್ಯ, ಈಗ ‘ಹಿಂದೂ ಧರ್ಮ ಎಂಬುದೇ ಇಲ್ಲ. ಇಂದಿನ ಎಲ್ಲ ಸಮಸ್ಯೆಗಳಿಗೂ ಬ್ರಾಹ್ಮಣವಾದ ಕಾರಣ’ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.

ಲಖನೌ: ಇತ್ತೀಚೆಗೆ ರಾಮಚರಿತ ಮಾನಸ ನಿಷೇಧಕ್ಕೆ ಆಗ್ರಹಿಸಿದ್ದ ಎಸ್‌ಪಿ ಮುಖಂಡ ಸ್ವಾಮಿ ಪ್ರಸಾದ್ ಮೌರ್ಯ, ಈಗ ‘ಹಿಂದೂ ಧರ್ಮ ಎಂಬುದೇ ಇಲ್ಲ. ಇಂದಿನ ಎಲ್ಲ ಸಮಸ್ಯೆಗಳಿಗೂ ಬ್ರಾಹ್ಮಣವಾದ ಕಾರಣ’ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ. ಸಭೆಯೊಂದರಲ್ಲಿ ಮಾತನಾಡಿದ ಅವರು, 'ಹಿಂದೂ ಧರ್ಮ ಎಂಬುದೇ ಇಲ್ಲ. ಬ್ರಾಹ್ಮಣ ಧರ್ಮವನ್ನೇ ಹಿಂದೂ ಧರ್ಮ ಎಂದು ಕರೆಯಲಾಗುತ್ತದೆ. ದಲಿತರನ್ನು, ಆದಿವಾಸಿಗಳನ್ನು ಹಾಗೂ ಹಿಂದುಳಿದವರನ್ನು ಸಿಲುಕಿಸಲು ಸಂಚು ನಡೆದಿದೆ. ನಿಜವಾಗಿಯೂ ಹಿಂದೂ ಧರ್ಮ ಇತ್ತೆಂದರೆ ಇಂದು ದಲಿತರು, ಹಿಂದುಳಿದವರು ಹಾಗೂ ಆದಿವಾಸಿಗಳಿಗೆ ಗೌರವ ಸಿಗುತ್ತಿತ್ತು ಎಂದರು.
ಎಸ್‌ಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ, ಉತ್ತರಾಖಂಡದಲ್ಲಿರುವ ಬದರಿನಾಥ ಸೇರಿದಂತೆ ದೇಶದ ಹಲವು ದೇಗುಲಗಳು ಈ ಹಿಂದೆ ಬೌದ್ಧ ಮಂದಿರಗಳಾಗಿದ್ದವು. ಅವುಗಳನ್ನು ಒಡೆದು ಹಿಂದೂ ದೇಗುಲ ನಿರ್ಮಾಣ ಮಾಡಲಾಯಿತು. ಗ್ಯಾನವಾಪಿ ಮಸೀದಿ ರೀತಿಯಲ್ಲೇ ಈ ದೇಗುಲಗಳನ್ನೂ ಸಮೀಕ್ಷೆಗೆ ಒಳಪಡಿಸಬೇಕು ಎಂದು ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ (Swami Prasad Maurya) ವಿವಾದಿತ ಹೇಳಿಕೆ ನೀಡಿದ್ದರು.
ಉತ್ತರಪ್ರದೇಶದ ಮಾಜಿ ಸಚಿವರೂ ಆಗಿರುವ ಮೌರ್ಯ, ‘8ನೇ ಶತಮಾನದವರೆಗೂ ಬದರಿನಾಥವು ಬೌದ್ಧ ಮಂದಿರವಾಗಿತ್ತು. ಹೀಗಾಗಿ ಯಾವ್ಯಾವ ಬೌದ್ಧ ಮಂದಿರಗಳನ್ನು ಒಡೆದು ದೇಗುಲ ನಿರ್ಮಿಸಲಾಗಿದೆಯೋ ಅದರ ಹಿನ್ನೆಲೆ ತಿಳಿಯಲು ಅವುಗಳನ್ನೂ ಗ್ಯಾನವಾಪಿ (Ganavapi Masjid) ಮಾದರಿ ಸಮೀಕ್ಷೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದ್ದರು. ಮೌರ್ಯ ಅವರ ಈ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿತ್ತು.
ನೂತನ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್‌ಜೆಡಿ: ಬ್ರಾಹ್ಮಣತ್ವ ಸ್ಥಾಪನೆಗೆ ಬಿಜೆಪಿ ಯತ್ನ ಎಂದ ಎಸ್‌ಪಿ