ನನ್ನ ಹಾಗೂ ಸೋದರನ ನಡುವೆ ಬಿರುಕು ಏರ್ಪಟ್ಟಿದೆ ಎಂದಿರುವ ಬಿಜೆಪಿಯ ಸುಳ್ಳು, ಲೂಟಿ ಮತ್ತು ಟೊಳ್ಳು ಪ್ರಚಾರವನ್ನು ಇಬ್ಬರೂ ಸೇರಿಕೊಂಡು ಧ್ವಂಸ ಮಾಡುತ್ತೇವೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಹೇಳಿದ್ದಾರೆ.

ನವದೆಹಲಿ: ‘ನನ್ನ ಹಾಗೂ ಸೋದರನ ನಡುವೆ ಬಿರುಕು ಏರ್ಪಟ್ಟಿದೆ ಎಂದಿರುವ ಬಿಜೆಪಿಯ ಸುಳ್ಳು, ಲೂಟಿ ಮತ್ತು ಟೊಳ್ಳು ಪ್ರಚಾರವನ್ನು ಇಬ್ಬರೂ ಸೇರಿಕೊಂಡು ಧ್ವಂಸ ಮಾಡುತ್ತೇವೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಹೇಳಿದ್ದಾರೆ. ಪ್ರಿಯಾಂಕ ಹಾಗೂ ರಾಹುಲ್‌ ನಡುವೆ ಬಿಕ್ಕಟ್ಟು ಏರ್ಪಟ್ಟಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅವರು, ಬಿಜೆಪಿಯವರೇ, ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆ ಹೆಚ್ಚಾಗಿರುವ ಈ ಸಮಯದಲ್ಲಿ ಈ ಅಸಂಬದ್ಧ ವಿಷಯವನ್ನು ಪ್ರಸ್ತಾಪಿಸಬೇಕೆ? ಕ್ಷಮಿಸಿ ನಿಮ್ಮ ಸಣ್ಣ ಮನಸ್ಥಿತಿಯ ಈ ಆಸೆ ಎಂದಿಗೂ ನೆರವೇರುವುದಿಲ್ಲ. ನಾನು ಮತ್ತು ನನ್ನ ಸೋದರ ಒಬ್ಬರ ಮೇಲೊಬ್ಬರು ಪ್ರೀತಿ, ಗೌರವ, ನಂಬಿಕೆಗಳನ್ನು ಹೊಂದಿದ್ದೇವೆ ಮತ್ತು ಇದು ಎಂದೆಂದಿಗೂ ಹೀಗೆ ಇರುತ್ತದೆ. ಹಾಗೆಯೇ ನಿಮ್ಮ ಸುಳ್ಳು, ಲೂಟಿ, ಪೊಳ್ಳು ಪ್ರಚಾರಗಳನ್ನು ನಾವು ನಾಶ ಮಾಡುತ್ತೇವೆ. ಇದಕ್ಕಾಗಿ ದೇಶದ ಕೋಟ್ಯಂತರ ಸೋದರ, ಸೋದರಿಯರು ನಮ್ಮ ಜೊತೆಗಿದ್ದಾರೆ’ ಎಂದು ತಿರುಗೇಟು ನೀಡಿದ್ದಾರೆ.

ಇದೇ ವೇಳೆ ಬೆಂಗಳೂರಿನಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ‘ಇಂದು ನನ್ನ ಸೋದರಿ ನನಗೆ ರಾಖಿ ಕಟ್ಟಿದಳು. ಕಾಂಗ್ರೆಸ್‌ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯನ್ನು ಜಾರಿ ಮಾಡಿತು’ ಎಂದಿದ್ದಾರೆ.


ಮೋದಿ To ಪ್ರಿಯಾಂಕಾ ಗಾಂಧಿ..ಬಾರ್ಬಿ ಟ್ರೆಂಡ್‌ನಲ್ಲಿ ಭಾರತದ ರಾಜಕಾರಣಿಗಳು

ರಾಬರ್ಟ್‌ ವಾದ್ರಾಗೆ ಬಿಗ್‌ ರಿಲೀಫ್‌, ಡಿಎಲ್‌ಎಫ್‌ ಲ್ಯಾಂಡ್‌ ಡೀಲ್‌ನ ದಾಖಲೆಗಳು ಪ್ರವಾಹದ ನೀರಿನಿಂದ ನಾಶ!