ಗುಜರಾತ್‌ನ 68 ನ್ಯಾಯಾಂಗ ಅಧಿಕಾರಿಗಳನ್ನು ಜಿಲ್ಲಾ ನ್ಯಾಯಾಧೀಶ ಸೇರಿದಂತೆ ವಿವಿಧ ಹುದ್ದೆಗೆ ಬಡ್ತಿಗೆ ಬಡ್ತಿ ಮಾಡಿರುವ ಗುಜರಾತ್‌ ಸರ್ಕಾರ ಹಾಗೂ ಹೈಕೋರ್ಟ್ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.

ನವದೆಹಲಿ: ಗುಜರಾತ್‌ನ 68 ನ್ಯಾಯಾಂಗ ಅಧಿಕಾರಿಗಳನ್ನು ಜಿಲ್ಲಾ ನ್ಯಾಯಾಧೀಶ ಸೇರಿದಂತೆ ವಿವಿಧ ಹುದ್ದೆಗೆ ಬಡ್ತಿಗೆ ಬಡ್ತಿ ಮಾಡಿರುವ ಗುಜರಾತ್‌ ಸರ್ಕಾರ ಹಾಗೂ ಹೈಕೋರ್ಟ್ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ. ಇದೇ ವೇಳೆ, ಬಡ್ತಿ ಪ್ರಕ್ರಿಯೆ ಬಗ್ಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಅದನ್ನು ‘ಅಕ್ರಮ’ ಎಂದು ಕರೆದಿದೆ. ಈ 68 ಮಂದಿಯ ಪೈಕಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರನ್ನು ಮಾನಹಾನಿ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದ್ದ ಸೂರತ್‌ ಮುಖ್ಯ ಜುಡಿಷಿಯಲ್‌ ಮ್ಯಾಜಿಸ್ಪ್ರೇಟ್‌ ಹರೀಶ್‌ ಹಸ್ಮುಖಭಾಯಿ ವರ್ಮಾ(Harish Hasmukh Bhai verma) ಕೂಡ ಇದ್ದರು.

ಇವರ ಬಡ್ತಿಯನ್ನು ಅಕ್ರಮ ಎಂದು ಇಬ್ಬರು ನ್ಯಾಯಾಂಗ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme court) ದ್ವಿಸದಸ್ಯ ಪೀಠ, ‘ಬಡ್ತಿಗಳನ್ನು ಮೆರಿಟ್‌, ಜ್ಯೇಷ್ಠತೆಯ ತತ್ವದ ಮೇಲೆ ಮತ್ತು ಪರೀಕ್ಷೆಯ ಆಧಾರದಲ್ಲಿ ನಡೆಸಬೇಕು. ಅಲ್ಲದೆ, ಬಡ್ತಿ ಕುರಿತಂತೆ ಪ್ರಕರಣವೊಂದು ಕೋರ್ಟ್‌ನಲ್ಲಿ ಬಾಕಿ ಇತ್ತು. ಆದರೂ ಇಲ್ಲಿ ನಿಯಮ ಪಾಲನೆ ಮಾಡದೇ ತರಾತುರಿಯಲ್ಲಿ ಬಡ್ತಿ ಮಾಡಲಾಗಿದೆ. ಹೀಗಾಗಿ ಬಡ್ತಿ ಅಧಿಸೂಚನೆ ರದ್ದು ಮಾಡಬೇಕು. ಬಡ್ತಿ ಹೊಂದಿದವರನ್ನು ಮೂಲ ಹುದ್ದೆಗೇ ಕಳಿಸಬೇಕು ಎಂದು ಸೂಚಿಸಿದೆ.

ದೂರು ಏನು?:

ನೇಮಕಾತಿ ನಿಯಮಗಳ ಪ್ರಕಾರ ಜಿಲ್ಲಾ ನ್ಯಾಯಾಧೀಶರ ಹುದ್ದೆಯನ್ನು ಮೆರಿಟ್‌/ ಸೀನಿಯಾರಿಟಿ ಆಧಾರದ ಮೇಲೆ ನಡೆಸಬೇಕು. ಆದರೆ ಇಲ್ಲಿ ಹಿರಿತನ/ಮೆರಿಟ್‌ ಆಧಾರದ ಮೇಲೆ ನಡೆಸಲಾಗಿದೆ. ಹೀಗಾಗಿ ಬಡ್ತಿಯಲ್ಲಿ ನಿಯಮವನ್ನು ತಿರುವು ಮುರುವು ಮಾಡಲಾಗಿದೆ ಎಂದು ಇಬ್ಬರು ನ್ಯಾಯಾಂಗ ಅಧಿಕಾರಿಗಳು ದೂರಿದ್ದರು.

ಹೇಳಿಕೆಗಳು ಎಲ್ಲೆ ಮೀರಬಾರದು: ರಾಹುಲ್‌ ಗಾಂಧಿಗೆ ಹೈಕೋರ್ಟ್‌ ಸಲಹೆ

ಮೋದಿ ಸರ್‌ನೇಮ್‌ ಕೇಸ್‌: ಜೈಲು ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ ರಾಹುಲ್‌ ಗಾಂಧಿ