Asianet Suvarna News Asianet Suvarna News

NCERT Syllabus: ಶಾಲಾ ಪಠ್ಯದಲ್ಲಿ ವಿಜಯನಗರ, ಚಾಲುಕ್ಯರ ಕಡೆಗಣನೆ!

*ಸಂಸದೀಯ ಸ್ಥಾಯಿ ಸಮಿತಿ ವರದಿ
*ಪ್ರಮಾದ ಸರಿಪಡಿಸಿಲು ಶಿಫಾರಸು
*ವಿವಿಧ ವಿಷಯಗಳಿಗೆ ಸಾಮಾನ್ಯ ಪಠ್ಯಕ್ರಮ!
 

The Parliamentary Standing Committee said NCERT books do not  cover some of the great Indian empires mnj
Author
Bengaluru, First Published Dec 1, 2021, 9:00 AM IST

ನವದೆಹಲಿ(ಡಿ. 01): ಕರ್ನಾಟಕವನ್ನು ಆಳಿದ ವಿಜಯನಗರ ಸಾಮ್ರಾಜ್ಯ (Vijayanagar Empire), ಚಾಲುಕ್ಯ ಅರಸರು (Chalukya)ಮತ್ತು ದೇಶಕ್ಕೆ ಅಪಾರ ಕೊಡುಗೆ ನೀಡಿದ ವಿಕ್ರಮಾದಿತ್ಯ, ಚೋಳರು, ಗೊಂಡ್ವಾನರು ಸೇರಿದಂತೆ ಭಾರತವನ್ನಾಳಿದ ಕೆಲ ಶ್ರೇಷ್ಠ ರಾಜಮನೆತನಗಳನ್ನು ಶಾಲಾ ಇತಿಹಾಸ ಪಠ್ಯಪುಸ್ತಕದಲ್ಲಿ ಕಡೆಗಣಿಸಲಾಗಿದೆ ಎಂದು ಸಂಸದೀಯ ಸ್ಥಾಯಿ ಸಮಿತಿ ತಿಳಿಸಿದೆ. ರಾಜ್ಯಸಭಾ ಸಂಸದ ವಿನಯ್‌ ಸಹಸ್ರಬುದ್ಧೆ (Vinay Sahasrabuddhe) ನೇತೃತ್ವದ ಸಮಿತಿಯು ‘ಶಾಲಾ ಪಠ್ಯದ ವಿಷಯ ಮತ್ತು ವಿನ್ಯಾಸ ಸುಧಾರಣೆ’ ಶೀರ್ಷಿಕೆಯ ವರದಿಯನ್ನು ಮಂಗಳವಾರ ಸಂಸತ್ತಿನಲ್ಲಿ ಸಲ್ಲಿಸಿದೆ. 

ಇತಿಹಾಸ ಪಠ್ಯಪುಸ್ತಕಗಳಲ್ಲಿ ಐತಿಹಾಸಿಕ ಸತ್ಯಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು (Freedom Fighters) ಅಪರಾಧಿಗಳಂತೆ ತಪ್ಪಾಗಿ ಬಿಂಬಿಸಲಾಗಿದೆ. ನಮ್ಮ ಸ್ವಾತಂತ್ರ್ಯ ಸೇನಾನಿಗಳ ಕುರಿತ ತಪ್ಪುಗಳನ್ನು ಸರಿಪಡಿಸಬೇಕು. ಆ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಶಿಫಾರಸು ಮಾಡಿದೆ.

ಪೂರ್ವ-ಕಲ್ಪಿತ ಪಕ್ಷಪಾತಗಳೊಂದಿಗೆ ಇತಿಹಾಸ!

ಹಾಗೆಯೇ ಪಠ್ಯವು ನಾಲ್ಕು ವೇದಗಳು (4 Vedas), ಭಗವದ್ಗೀತೆ (bhagavad gita), ಜೈನಧರ್ಮ ಮತ್ತಿತರ ವಿಭಿನ್ನ ಸಾಹಿತ್ಯವನ್ನೂ ಒಳಗೊಂಡಿರಬೇಕು. ವಿವಿಧ ರಾಜಮನೆತನಗಳ ಕುರಿತಾಗಿ ಅಸಮಾನ ಪ್ರಾತಿನಿಧ್ಯ ನೀಡಲಾಗಿದೆ. ಎನ್‌ಸಿಇಆರ್‌ಟಿ ಇತಿಹಾಸ ಪುಸ್ತಕ (NCERT history Book) ಬರವಣಿಗೆ ಕುರಿತ ಮಾರ್ಗಸೂಚಿಯನ್ನು ಇನ್ನೊಮ್ಮೆ ನೋಡಬೇಕು. ಇಂಥ ತಪ್ಪುಗಳಾಗದಂತೆ ಕ್ರಮ ವಹಿಸಬೇಕು. ಪೂರ್ವ-ಕಲ್ಪಿತ ಪಕ್ಷಪಾತಗಳೊಂದಿಗೆ ಇತಿಹಾಸವನ್ನು ಬರೆಯುತ್ತಿದ್ದರೆ ಅದು ಅಪಾಯಕಾರಿ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

Seminar: ಗ್ರಂಥಪಾಲಕರಿಗೆ ತಾಂತ್ರಿಕ ಪರಿಣಿತಿ ಮುಖ್ಯ, ವಿಟಿಯು ಉಪಕುಲಪತಿ ಕರಿಸಿದ್ದಪ್ಪ ಅಭಿಪ್ರಾಯ

ಸಾಮವೇದ, ಯಜುರ್ವೇದ, ಅಥರ್ವವೇದ ಮತ್ತು ಋಗ್ವೇದದ ನಾಲ್ಕು ವೇದಗಳ ಜ್ಞಾನ ಮತ್ತು ಭಗವದ್ಗೀತೆಯೂ ಪಠ್ಯಕ್ರಮದ ಭಾಗವಾಗಿರಬೇಕು ಎಂದು ಅದು ಹೇಳಿದೆ. ಆಗಮ ಸಾಹಿತ್ಯದ ಭಾಗಗಳನ್ನು (ಜೈನ ಧರ್ಮದ ಗ್ರಂಥಗಳು, ಭಗವಾನ್ ಮಹಾವೀರರ ಉಪದೇಶಗಳು ಸೇರಿದಂತೆ) ಸಹ ಸೇರಿಸಬೇಕು ಎಂದು ಸಮಿತಿ ಹೇಳಿದೆ. ಸಮಿತಿಯು "ಎನ್‌ಸಿಇಆರ್‌ಟಿ ಇತಿಹಾಸ ಪಠ್ಯಪುಸ್ತಕಗಳ ಬರವಣಿಗೆಯ ಮಾರ್ಗಸೂಚಿಗಳನ್ನು ಮರುಪರಿಶೀಲಿಸಬೇಕು, ಇದರಿಂದಾಗಿ ವಿವಿಧ ಯುಗಗಳು, ಅವಧಿಗಳು ಮತ್ತು ಘಟನೆಗಳಿಗೆ ಸಮಾನ ತೂಕ ಮತ್ತು ಪ್ರಾಮುಖ್ಯತೆಯನ್ನು ನೀಡಬೇಕು" ಎಂದು ತಿಳಿಸಿದೆ.

Good news for SSLC Students: ಶೇ. 20 ರಷ್ಟು ಪಠ್ಯ ಕಡಿತಕ್ಕೆ ಮುಂದಾದ ಶಿಕ್ಷಣ ಇಲಾಖೆ

“ತತ್ತ್ವಶಾಸ್ತ್ರ (Philosophy) , ವಿಜ್ಞಾನ (Science) , ಗಣಿತ (mathematics) , ವೈದ್ಯಕೀಯ (medicine) , ಆಯುರ್ವೇದ (Ayurveda) , ಜ್ಞಾನಶಾಸ್ತ್ರ, ನೈಸರ್ಗಿಕ ವಿಜ್ಞಾನ, ರಾಜಕೀಯ, ಆರ್ಥಿಕತೆ, ನೀತಿಶಾಸ್ತ್ರ, ಭಾಷಾಶಾಸ್ತ್ರ, ಕಲೆ ಇತ್ಯಾದಿ ಕ್ಷೇತ್ರಗಳಲ್ಲಿ ಪ್ರಾಚೀನ ಭಾರತದ ಕೊಡುಗೆಗಳನ್ನು ಪಠ್ಯಪುಸ್ತಕಗಳಲ್ಲಿ ಸೇರಿಸಬಹುದು. ಸಾಂಪ್ರದಾಯಿಕ ಭಾರತೀಯ ಜ್ಞಾನ ವ್ಯವಸ್ಥೆಗಳನ್ನು ಆಧುನಿಕ ವಿಜ್ಞಾನದೊಂದಿಗೆ (Modern Science) ಜೋಡಿಸಬೇಕು ಮತ್ತು ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ಸಮಕಾಲೀನ ಸಂದರ್ಭದಲ್ಲಿ ಪ್ರಸ್ತುತಪಡಿಸಬೇಕು” ಎಂದು ವರದಿ ಹೇಳಿದೆ

ವಿವಿಧ ವಿಷಯಗಳಿಗೆ ಸಾಮಾನ್ಯ ಪಠ್ಯಕ್ರಮ!

CBSE, CICSE ಮತ್ತು ಹಲವಾರು ಇತರ ರಾಜ್ಯ ಶಿಕ್ಷಣ ಮಂಡಳಿಗಳಿಂದ ಕಾರ್ಯಗತಗೊಳಿಸಬಹುದಾದ "ವಿವಿಧ ವಿಷಯಗಳಿಗೆ  ವರ್ಗವಾರು ಸಾಮಾನ್ಯ ಪಠ್ಯಕ್ರಮ"  (core class-wise common syllabus)ವನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಶಿಕ್ಷಣ ಸಚಿವಾಲಯವು ಅನ್ವೇಷಿಸಬೇಕು ಎಂದು ಸಮಿತಿಯು ಸಲಹೆ ನೀಡಿದೆ. ಇದು "ದೇಶಾದ್ಯಂತ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದಲ್ಲಿ ಏಕರೂಪತೆಯನ್ನು ಖಚಿತಪಡಿಸುತ್ತದೆ" ಎಂದು ಸಮಿತಿ ಹೇಳಿದೆ.

ಏತನ್ಮಧ್ಯೆ, ಎನ್‌ಸಿಇಆರ್‌ಟಿ ಈಗಾಗಲೇ ಎರಡು  ಪಠ್ಯಕ್ರಮ ಪರಿಷ್ಕರಣೆಗಳನ್ನು ಕೈಗೊಂಡಿದೆ ಮತ್ತು ಜಿಎಸ್‌ಟಿ ಮತ್ತು ಡಿಮಾನಿಟೈಸೇಶನ್‌ನಂತಹ ವಿಷಯಗಳನ್ನು ತನ್ನ ಪುಸ್ತಕಗಳಲ್ಲಿ ಸೇರಿಸಿದೆ, ಜೊತೆಗೆ ಪ್ರಾದೇಶಿಕ ಮತ್ತು ಮಹಿಳಾ ಐಕಾನ್‌ಗಳನ್ನು ಪ್ರತಿನಿಧಿಸುವ ಇತಿಹಾಸವನ್ನು ಒಳಗೊಂಡಿದೆ ಎಂದು ಸಮಿತಿಗೆ ತಿಳಿಸಿದೆ. ಸಮಿತಿಯು ಶಾಲಾ ಪಠ್ಯಪುಸ್ತಕಗಳಲ್ಲಿನ ವ್ಯತ್ಯಾಸಗಳು ಮತ್ತು ಲೋಪಗಳನ್ನು ಸೂಚಿಸುವ ವಿಷಯದ ಕುರಿತು ತಜ್ಞರು, ವ್ಯಕ್ತಿಗಳು ಮತ್ತು ಸಂಸ್ಥೆ ಸೇರಿ ಸುಮಾರು 20,000 ಜನರಿಂದ ಅಭಿಪ್ರಾಯ ಸ್ವೀಕರಿಸಿ ವರದಿ ಸಿದ್ಧಪಡಿಸಿದೆ.

Follow Us:
Download App:
  • android
  • ios