ಕರ್ನಾಟಕ ಹೈಕೋರ್ಟ್‌  ನಿವೃತ್ತ ಮುಖ್ಯ ನ್ಯಾಯಾಧೀಶ ನ್ಯಾ. ರಿತುರಾಜ್‌ ಅವಸ್ಥಿ ಅವರನ್ನು ಕಾನೂನು ಆಯೋಗದ ಅಧ್ಯಕ್ಷರಾಗಿ ಕೇಂದ್ರ ಸರ್ಕಾರ ಸೋಮವಾರ ನೇಮಿಸಿದೆ.

ನವದೆಹಲಿ: ಕರ್ನಾಟಕ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಾಧೀಶ ನ್ಯಾ. ರಿತುರಾಜ್‌ ಅವಸ್ಥಿ ಅವರನ್ನು ಕಾನೂನು ಆಯೋಗದ ಅಧ್ಯಕ್ಷರಾಗಿ ಕೇಂದ್ರ ಸರ್ಕಾರ ಸೋಮವಾರ ನೇಮಿಸಿದೆ. ನ್ಯಾ. ಕೆ.ಟಿ. ಶಂಕರನ್‌, ಪ್ರೊ ಆನಂದ ಪಾಲಿವಾಲ್‌, ಪ್ರೊ ಡಿ.ಪಿ. ವರ್ಮಾ, ಪ್ರೊ ರಾಕಾ ಆರ‍್ಯ ಹಾಗೂ ಎಂ. ಕರುಣಾನಿಧಿ ಈ ಕಾನೂನು ಆಯೋಗದರ ಸದಸ್ಯರಾಗಿರಲಿದ್ದಾರೆ. ಕಾನೂನು ಆಯೋಗದ ಮುಖ್ಯಸ್ಥ ಹುದ್ದೆ 4 ವರ್ಷದಿಂದ ಖಾಲಿ ಇತ್ತು. ಕೇಂದ್ರ ಸರ್ಕಾರಕ್ಕೆ ವಿವಿಧ ಕಾನೂನು ವಿಷಯಗಳಲ್ಲಿ ಸಲಹೆ ನೀಡುವ ಹೊಣೆ ಈ ಆಯೋಗದ್ದಾಗಿದೆ. ಇಂಥ ಕೆಲಸಗಳಲ್ಲಿ ಏಕರೂಪ ನಾಗರಿಕ ಸಂಹಿತೆಯೂ ಒಂದು. ಇದು 22ನೇ ಕಾನೂನು ಆಯೋಗವಾಗಿದೆ.

Scroll to load tweet…


ಭಾರತದಲ್ಲಿ 10 ಲಕ್ಷ ಜನರಿಗೆ 19 ಜಡ್ಜ್‌ಗಳು

ಪದೇ ಪದೇ ಚುನಾವಣೆಗಳು ಬೇಡ - ಕಾನೂನು ಆಯೋಗದ ಕರಡು ವರದಿ