ಕೇಂದ್ರ ಸರ್ಕಾರ 2027ರಲ್ಲಿ ನಡೆಸಲಿರುವ ರಾಷ್ಟ್ರೀಯ ಜನಗಣತಿಯು ಭಾರತದ ಪಾಲಿಗೆ ಮೊದಲ ಸಂಪೂರ್ಣ ಡಿಜಿಟಲ್ ಜನಗಣತಿ ಆಗಿರಲಿದೆ.

ನವದೆಹಲಿ (ಜೂ.13): ಕೇಂದ್ರ ಸರ್ಕಾರ 2027ರಲ್ಲಿ ನಡೆಸಲಿರುವ ರಾಷ್ಟ್ರೀಯ ಜನಗಣತಿಯು ಭಾರತದ ಪಾಲಿಗೆ ಮೊದಲ ಸಂಪೂರ್ಣ ಡಿಜಿಟಲ್ ಜನಗಣತಿ ಆಗಿರಲಿದೆ. ಈ ಜನ ಗಣತಿಯ ಅಂತಿಮ ಅಂಕಿ-ಅಂಶಗಳು 9 ತಿಂಗಳೊಳಗೇ ಸರ್ಕಾರದ ಕೈಸೇರುವ ನಿರೀಕ್ಷೆ ಇದೆ. ಅಂದರೆ ಅದೇ ವರ್ಷದ ಅಂತ್ಯದಲ್ಲಿ ಜನಗಣತಿಯ ಸಂಪೂರ್ಣ ಅಂಕಿ-ಅಂಶಗಳು ಸಿದ್ಧವಾಗಲಿವೆ. ಮೊಬೈಲ್ ಆ್ಯಪ್‌ನಂಥ ತಂತ್ರ ಜ್ಞಾನ ಬಳಸಿ ಈ ಕಾರ್ಯ ಮಾಡುವ ಹಿನ್ನೆಲೆ ಯಲ್ಲಿ ಈ ಬದಲಾವಣೆ ಸಾಧ್ಯವಾಗಲಿದೆ. ಈ ಹಿಂದೆ ಜನಗಣತಿ ಅಂಕಿ-ಅಂಶಗಳು ಬಹಿರಂಗವಾಗಬೇಕಿದ್ದರೆ ಸಾಕಷ್ಟು ಸಮಯ ಕಾಯಬೇಕಿತ್ತು. 2011ರ ಜನಗಣತಿ ಮಾಹಿತಿಯನ್ನು ಒಟ್ಟು ಗೂಡಿಸಲು ಸುಮಾರು 2 ವರ್ಷಗಳಷ್ಟು ಸುದೀರ್ಘ ಹಿಡಿದಿತ್ತು. ಆದರೆ, ಈ ಬಾರಿ ತಂತ್ರಜ್ಞಾನ ಬಳಸಿಕೊಂಡು ಜನಗಣತಿ ಮಾಡು ತಿರುವ ಕಾರಣ ಅಂಕಿ-ಅಂಶಗಳ ಸಂಗ್ರಹ ಸಲೀಸಾಗಲಿದೆ ಎಂದು ಮೂಲಗಳು ತಿಳಿಸಿವೆ.

ಎರಡು ಹಂತದ ಪ್ರಕ್ರಿಯೆ: ಕೇಂದ್ರ ಸರ್ಕಾರ 2027ರ ಮಾರ್ಚ್‌ನಲ್ಲಿ ಜನಗಣತಿ ನಡೆಸುವು ದಾಗಿ ತಿಳಿಸಿದೆ. ಈ ಜನಗಣತಿ ಪ್ರಕ್ರಿಯೆ ಎರಡು ಹಂತದಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಮನೆಗಳ ಪಟ್ಟಿ ಸಿದ್ದಪಡಿಸುವ ಕಾರ್ಯ ನಡೆಯಲಿದೆ. 2026ರಲ್ಲೇ ಈ ಪ್ರಕ್ರಿಯೆ ಆರಂಭವಾ ಗಲಿದ್ದು, ಈ ವೇಳೆ ಮನೆ ಹಾಗೂ ಕುಟುಂಬಗಳ ಗಣತಿ ಕಾರ್ಯ ನಡೆಯಲಿದೆ. ಎರಡನೇ ಹಂತದಲ್ಲಿ ಜನಸಂಖ್ಯಾ ಗಣತಿ ನಡೆಯಲಿದೆ. ಇದು 2027ರ ಫೆಬ್ರವರಿಯಲ್ಲಿ ಆರಂಭ ವಾಗಲಿದೆ. ಈ ವೇಳೆ ಹೆಸರು, ವಯಸ್ಸು, ಲಿಂಗ, ಶಿಕ್ಷಣ, ಆದಾಯ ಮತ್ತಿತರ ವ್ಯಕ್ತಿಗತ ವಿಚಾರಗಳನ್ನು ಸಂಗ್ರಹಿಸಲಾಗುತ್ತದೆ.

ಮೊದಲ ಬಾರಿಗೆ ಹೈಟೆಕ್: 20270 ಜನಗಣತಿಯು ದೇಶದ ಮೊದಲ ಹೈಟೆಕ್ ಜನಗಣತಿಯಾಗಿದೆ. ಇದಕ್ಕೆಂದೇ ಹಿಂದಿ, ಇಂಗ್ಲಿಷ್ ಮತ್ತು 14 ಸ್ಥಳೀಯ ಭಾಷೆಗಳಲ್ಲಿ ಆಪ್‌ವೊಂದನ್ನು ಸಿದ್ದಪಡಿಸಲಾಗಿದೆ. ಇದೊಂದು ಬಳಕೆದಾರರ ಸ್ನೇಹಿ ಮೊಬೈಲ್ ಆ್ಯಪ್ ಆಗಿದ್ದು, ಜನ ಕೂಡ ಈ ಆ್ಯಪ್‌ನಲ್ಲಿರುವ ಮಾಹಿತಿಯನ್ನು ಸ್ವಯಂ ಆಗಿ ಬದಲಾಯಿಸಲುಅವಕಾಶ ಮಾಡಿಕೊಡಲಾಗಿದೆ. ಈ ರೀತಿ ಸಂಗ್ರಹಿಸಿದ ಮಾಹಿತಿಯನ್ನು ಆಧುನಿಕ ಪ್ರೊಸೆಸಿಂಗ್ ಪ್ರಕ್ರಿಯೆ ತಂತ್ರಜ್ಞಾನ ಬಳಸಿ ಅಪ್‌ಡೇಟ್ ಮಾಡಲಾಗುತ್ತದೆ. ಮೊಬೈಲ್ ಆ್ಯಪ್‌ನಲ್ಲಿ ಫ್ರೀ ಕೋಡೆಡ್ ಪ್ರತಿಕ್ರಿಯೆಗಳನ್ನು ಶೇಖರಿಸಲಾಗಿರುತ್ತದೆ. ಅಲ್ಲದೆ, ಇದರಲ್ಲಿ ಗಣತಿಗೂ ಮೊದಲೇ ಮನೆಗಳ ದಾಖಲೆಗಳನ್ನು ತುಂಬಿಸಿರಲಾಗಿರುತ್ತದೆ.

ಜತೆಗೆ ಈ ಮಾಹಿತಿಯನ್ನು ಎಡಿಟ್ ಮಾಡಲೂ ಅವಕಾಶ ಇರುತ್ತದೆ. ಇದರಿಂದ ಗಣತಿದಾರರ ಸಮಯ, ಶ್ರಮ ಉಳಿತಾಯವಾಗುತ್ತದೆ. ಇನ್ನು ಮೊದಲ ಬಾರಿಗೆ ಪ್ರತ್ಯೇಕ ಕೋಡ್ ಡಿಕ್ಷನರಿಯನ್ನೂ ಗಣತಿದಾ ರರಿಗೆ ಒದಗಿಸುತ್ತಿರುವುದು ಈ ಬಾರಿಯ ಗಣತಿಯ ವಿಶೇಷ. 2ನೇ ಹಂತದಲ್ಲಿ ಇದು ಗಣತಿದಾ ರರಿಗೆ ಅನುಕೂಲ ಮಾಡಿಕೊಡಲಿದೆ. ವಿವರಣಾತ್ಮಕ ಮತ್ತು ಅಂಕಿ-ಸಂಖ್ಯೆ ರಹಿತ ಉತ್ತರಗಳನ್ನು ದಾಖಲಿಸು ವುದು ಇದರಿಂದ ಸುಲಭವಾಗಲಿದೆ. ಪ್ರತಿ ಸಂಭಾವ್ಯ ಉತ್ತರಕ್ಕೂ ಮೊದಲೇ ಕೋಡ್‌ ಳನ್ನು ಸಿದ್ಧಪಡಿಸುವುದರಿಂದ ಡಿಜಿಟಲ್ ರೂಪ ದಲ್ಲಿ ದಾಖಲೆಗಳ ಸಂಗ್ರಹ ಸುಲಭವಾಗಲಿದೆ. ಇದರಿಂದ ಡೇಟಾಗಳ ಪ್ರೊಸೆಸಿಂಗ್ ಪ್ರಕ್ರಿಯೆ ಯಲ್ಲಿ ವಿಳಂಬವಾಗುವುದು ತಪ್ಪಲಿದೆ.