* ತೃಣಮೂಲ ಕಾಂಗ್ರೆಸ್‌ ಸೇರ್ಪಡೆ ಬೆನ್ನಲ್ಲೇ, ತಾನು ಬಿಜೆಪಿಯಲ್ಲಿ ಭ್ರಮನಿರಸನಗೊಂಡಿದ್ದೆ ಎಂದ ಬಬೂಲ್* ಟಿಎಂಸಿಯ ಅಂತಿಮ 11 ಆಟ​ಗಾ​ರರಲ್ಲಿ ನಾನೂ ಒಬ್ಬ: ಸುಪ್ರಿ​ಯೋ 

ನವದೆಹಲಿ(ಸೆ.20): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಸೇರ್ಪಡೆ ಬೆನ್ನಲ್ಲೇ, ತಾನು ಬಿಜೆಪಿಯಲ್ಲಿ ಭ್ರಮನಿರಸನಗೊಂಡಿದ್ದಾಗಿ ಕೇಂದ್ರದ ಮಾಜಿ ಸಚಿವ ಬಾಬುಲ್‌ ಸುಪ್ರಿಯೋ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮ್ಮ ರಾಜಕೀಯ ಜೀವನವನ್ನು ಕ್ರೀಡೆಗೆ ಹೋಲಿಸಿಕೊಂಡ ಸುಪ್ರಿಯೋ ಅವರು, ‘ನಾವು ತಂಡದ ಆಟಗಾರನಾಗಿ ಮೈದಾನಕ್ಕಿಳಿದು ಆಟವಾಡಲು ಇಚ್ಛಿಸುತ್ತೇನೆ. ಆದರೆ ಹೆಚ್ಚುವರಿ ಆಟಗಾರನಾಗಿ ಬೆಂಚ್‌ನಲ್ಲಿ ಕುಳಿತುಕೊಳ್ಳಲು ಇಚ್ಛಿಸಲ್ಲ. ಅಲ್ಲದೆ ಟಿಎಂಸಿಯ 11 ಮಂದಿ ಆಟಗಾರರ ತಂಡದಲ್ಲಿ ಮಮತಾ ದೀದಿ ಅವರು ನನ್ನನ್ನು ಗುರುತಿಸಿದ್ದಾರೆ’ ಎಂದು ಹೇಳಿದರು.

ಇನ್ನು ಬಿಜೆಪಿ ನಾಯಕರ ಸಾಮೂಹಿಕ ರಾಜೀನಾಮೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅಸನ್ಸೋಲ್‌ ಸಂಸದ ಸುಪ್ರಿಯೋ, ‘ಇದಕ್ಕೆ ಕಾರಣವೇನು ಎಂಬ ಬಗ್ಗೆ ಬಿಜೆಪಿ ನಾಯಕತ್ವ ಪರಿಶೀಲಿಸಬೇಕು. ಜೊತೆಗೆ ಈ ಕುರಿತಾದ ಪ್ರಶ್ನೆಗೆ ಉತ್ತರಿಸಲು ನಾನು ಬಿಜೆಪಿ ಸದಸ್ಯನಲ್ಲ’ ಎಂದರು.