Asianet Suvarna News Asianet Suvarna News

ಕರ್ನಾಟಕದಿಂದ ತಂದಿದ್ದ 26 ಕೋಟಿ ರೂ. ತಿಮಿಂಗಿಲ ವಾಂತಿ ವಶಕ್ಕೆ

* 26 ಕೋಟಿ ರು.ಮೌಲ್ಯದ 27 ಕೆಜಿಯಷ್ಟುತಿಮಿಂಗಲದ ವಾಂತಿ

* ಕರ್ನಾಟಕದಿಂದ ತಂದಿದ್ದ 26 ಕೋಟಿ ತಿಮಿಂಗಲ ವಾಂತಿ ವಶಕ್ಕೆ

* ಮಹಾರಾಷ್ಟ್ರದಲ್ಲಿ ಕರ್ನಾಟಕದ ಓರ್ವ ಸೇರಿ ಐವರ ಬಂಧನ

Thane Sperm whale vomit worth Rs 26 crore seized five arrested pod
Author
Bangalore, First Published Jul 14, 2021, 8:03 AM IST

ಮುಂಬೈ(ಜು.14): ಕರ್ನಾಟಕದಿಂದ ಸಾಗಿಸಲಾಗಿದ್ದ ಸುಮಾರು 26 ಕೋಟಿ ರು.ಮೌಲ್ಯದ 27 ಕೆಜಿಯಷ್ಟುತಿಮಿಂಗಲದ ವಾಂತಿ (ಆ್ಯಂಬರ್ಗಿಸ್‌) ಯನ್ನು ಮಹಾರಾಷ್ಟ್ರದ ಠಾಣೆ ಅರಣ್ಯ ವಿಭಾಗದ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಕರ್ನಾಟಕ ಮೂಲದ ಓರ್ವ ಸೇರಿದಂತೆ 5 ಜನರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ವಿವಿಧ ಕಾಯ್ದೆಯಡಿ ಕೇಸು ದಾಖಲಿಸಿಕೊಳ್ಳಲಾಗಿದೆ.

ಸ್ಪಮ್‌ರ್‍ ವೇಲ್‌ ಅಳಿವಿನಂಚಿನಲ್ಲಿರುವ ಪ್ರಾಣಿಯಾಗಿದೆ. ಇವು ತಮ್ಮ ದೇಶದಲ್ಲಿ ಸೇರಿಕೊಂಡ ಬೇಡದ ವಸ್ತುಗಳನ್ನು ಹೊರಹಾಕುವ ವೇಳೆ ಅಂಟಿನಂಥ ವಸ್ತುವನ್ನೂ ಹೊರಹಾಕುತ್ತದೆ. ಇದನ್ನೇ ತಿಮಿಂಗಿಲ ವಾಂತಿ ಎನ್ನಲಾಗುತ್ತದೆ. ಇದನ್ನು ಸುಗಂಧ ದ್ರವ್ಯ ತಯಾರಿಸಲು ಬಳಸಲಾಗುತ್ತದೆ. ಇದು ಬಲು ದುಬಾರಿ. ಆದರೆ ಇದರ ಸಂಗ್ರಹ, ಮಾರಾಟ ಭಾರತದಲ್ಲಿ ಶಿಕ್ಷಾರ್ಹ ಅಪರಾಧ.

ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳ ತಂಡ ಇತ್ತೀಚೆಗೆ ತಂಡವೊಂದರ ಮೇಲೆ ದಾಳಿ ನಡೆಸಿ ಅವರಿಂದ 27 ಕೆಜಿ ತಿಮಿಂಗಲ ವಾಂತಿ ವಶಪಡಿಸಿಕೊಂಡಿದೆ. ವಿಚಾರಣೆ ವೇಳೆ ಇದನ್ನು ಕರ್ನಾಟಕದಿಂದ ತರಲಾಗಿತ್ತು ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ, ಹೆಚ್ಚಿನ ವಿಚಾರಣೆಗಾಗಿ ತಂಡವೊಂದನ್ನು ಕರ್ನಾಟಕಕ್ಕೆ ಕಳುಹಿಸಿಕೊಡಲಾಗಿದೆ.

Follow Us:
Download App:
  • android
  • ios