ಕೇರಳದಲ್ಲಿ ಬಾಂಬ್ ಸ್ಫೋಟದ ಬೆನ್ನಲ್ಲೇ ಉತ್ತರದಲ್ಲಿ ಭಯೋತ್ಪಾದಕರ ದಾಳಿ ನಡೆದಿದೆ. ಈ ದಾಳಿಯಲ್ಲಿ ಪೊಲೀಸ್ ಅಧಿಕಾರಿ ತೀವ್ರವಾಗಿ ಗಾಯಗೊಂಡಿದ್ದಾರೆ. ಪರಿಣಾಣ ಹೈಅಲರ್ಟ್ ಘೋಷಿಸಲಾಗಿದೆ.

ಶ್ರೀನಗರ(ಅ.29) ಕೇರಳ ಬಾಂಬ್ ಸ್ಫೋಟದಿಂದ ದೇಶದ ಪ್ರಮುಖ ನಗರಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಇದರ ಬೆನ್ನಲ್ಲೇ ಜಮ್ಮ ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲೇ ಭಯೋತ್ಪಾದಕರ ದಾಳಿಯಾಗಿದೆ. ಶ್ರೀನಗರದ ಈದ್ಗಾ ಬಳಿ ಪೊಲೀಸ್ ಅಧಿಕಾರಿ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರರ ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿರುವ ಪೊಲೀಸ್ ಅಧಿಕಾರಿ ಮಸ್ರೂರ್ ಅಹಮ್ಮದ್‌ರನ್ನು ತಕ್ಷಣವೇ ಆಸ್ಪತ್ರೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಕಾರಣ ಪೊಲೀಸ್ ಅಧಿಕಾರಿ ಸ್ಥಿತಿ ಚಿಂತಾಜನಕವಾಗಿದೆ.

ಹಲವು ದಿನಗಳಲ್ಲಿ ಪ್ಲಾನ್ ಮಾಡಿದ್ದ ಉಗ್ರರು ನೇರವಾಗಿ ಈದ್ಗಾ ಬಳಿಗೆ ತೆರಳಿ ಪಿಸ್ತೂಲ್ ಮೂಲಕ ದಾಳಿ ಮಾಡಿದ್ದಾರೆ. ಬಂದೂಕು, ಮಶಿನ್ ಗನ್ ಸಾಗಣೆ ಕಷ್ಟವಾದ ಕಾರಣ ಉಗ್ರರು ಸಣ್ಣ ಪಿಸ್ತೂಲ್ ಮೂಲಕ ಶ್ರೀನಗರ ಇನ್ಸ್‌ಪೆಕ್ಟರ್ ಮಸ್ರೂರ್ ಮೇಲೆ ದಾಳಿ ನಡೆಸಿದ್ದಾರೆ. ಇದೇ ವೇಳೆ ಪೊಲೀಸ್ ಅಧಿಕಾರಿಗಳು ಪ್ರತಿ ದಾಳಿ ನಡೆಸುವ ವೇಳೆ ಉಗ್ರರು ಪರಾರಿಯಾಗಿದ್ದಾರೆ.

ಬಾಂಬ್ ಸ್ಫೋಟದಿಂದ ಅಲ್ಲ, ಬೆಂಕಿಯಿಂದ ಮಹಿಳೆ ಸಾವು: ಸಣ್ಣ ಘಟನೆ ಎಂದು ಬಿಂಬಿಸಲು ಹೊರಟಿತಾ ಕೇರಳ?

ಘಟನೆ ಮಾಹಿತಿ ಪಡೆಯುತ್ತಿದ್ದ ಸಿಆರ್‌ಪಿಎಫ್ ತಂಡ ಸ್ಥಳಕ್ಕೆ ಧಾವಿಸಿ ಸಂಪೂರ್ಣ ವಲಯವನ್ನು ಸುತ್ತುವರಿದಿದೆ. ಇದೀಗ ಆಪರೇಶನ್ ಆರಂಭಿಸಿದೆ. ಉಗ್ರರ ವಿರುದ್ದ ಕಾರ್ಯಾಚರಣೆ ಆರಂಭಿಸಿರುವ ಸಿಆರ್‌ಪಿಎಪ್‌ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಾಥ್ ನೀಡಿದೆ. ಇತ್ತ ಮಶ್ರೂರ್ ಮೇಲಿನ ಗುಂಡಿನ ದಾಳಿಯ ತನಿಖೆ ಆರಂಭಿಸಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಭಯೋತ್ಪಾದಕರ ಹತ್ಯೆಗೆ ಪ್ಲಾನ್ ಮಾಡಿದೆ.

2021-22ರ ಸಾಲಿನಲ್ಲಿ ಕರ್ತವ್ಯದಲ್ಲಿದ್ದ ಹಲವು ಪೊಲೀಸರು ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಉಗ್ರರ ವಿರುದ್ದ ಕಾರ್ಯಾಚರಣೆಯಲ್ಲಿ ಇತ್ತೀಚಗಷ್ಟೇ ಜಮ್ಮ ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿ ಬಲಿಯಾಗಿದ್ದಾರೆ. 

ಒಂದೆಡೆ ಭಯೋತ್ಪಾದಕರು ದಾಳಿ ತೀವ್ರಗೊಳಿಸಲು ಆರಂಭಿಸಿದರೆ, ಅತ್ತ ಗಡಿಯಲ್ಲಿ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ಆರಂಭಿಸಿದೆ. ಇತ್ತೀಚೆಗೆ ಸತತ 7 ಗಂಟೆಗಳ ಕಾಲ ಶೆಲ್ ಮತ್ತು ಗುಂಡಿನ ದಾಳಿ ನಡೆಸಿವೆ. ಈ ದಾಳಿಯಲ್ಲಿ ಕರ್ನಾಟಕ ಮೂಲದ ಯೋಧ ಬಸವರಾಜ್‌ ಸೇರಿದಂತೆ ಇಬ್ಬರು ಬಿಎಸ್‌ಎಫ್‌ ಯೋಧರು ಮತ್ತು ರಜನಿ ದೇವಿ ಎಂಬ ಓರ್ವ ಮಹಿಳೆಗೆ ಗಾಯಗಳಾಗಿವೆ.

ಕಾಂಗ್ರೆಸ್‌, ಸಿಪಿಎಂ ಓಲೈಕೆ ರಾಜಕಾರಣಕ್ಕೆ ಮುಗ್ಧರು ಬೆಲೆತೆರಬೇಕಾಗಿದೆ: ಕೇರಳ ಸ್ಫೋಟಕ್ಕೆ ರಾಜೀವ್‌ ಚಂದ್ರಶೇಖರ್‌ ಕಿಡಿ

ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಸೇನೆ, ‘ಗುರುವಾರ ರಾತ್ರಿ 9.15ರ ವೇಳೆಗೆ ಪಾಕ್‌ ರೇಂಜರ್ಸ್‌ಗಳು ಭಾರತದ ಅರ್ನಿರ್ಯಾ ಪ್ರದೇಶಕ್ಕೆ ಹೊಂದಿಕೊಂಡ ಅಂತಾರಾಷ್ಟ್ರೀಯ ಗಡಿ ಪ್ರದೇಶದ ಸೇನಾ ಪೋಸ್ಟ್‌ಗಳನ್ನು ಗುರಿಯಾಗಿಸಿ ಶೆಲ್‌ ದಾಳಿ ನಡೆಸಿದರು. ಈ ವೇಳೆ ಕೆಲವು ಶೆಲ್‌ಗಳು ಜನವಸತಿ ಪ್ರದೇಶಗಳಿಗೂ ತಲುಪಿ ರಜನಿ ದೇವಿ ಎಂಬ ಮಹಿಳೆ ಗಾಯಗೊಂಡಿದ್ದಾಳೆ.