ಮೂರು ದಿನದಲ್ಲಿ ಪುಟ್ಟ ಮಗನ ಹುಟ್ಟುಹಬ್ಬಕ್ಕೆ ಬರಬೇಕಿದ್ದ ತಂದೆ, ಪೂಂಚ್ ಉಗ್ರ ದಾಳಿಯಲ್ಲಿ ಹುತಾತ್ಮ!
ಕೇಕ್ ಕತ್ತರಿಸಲು ಅಪ್ಪ ಬರಬೇಕು, ಅಪ್ಪ ವಿಶೇಷ ಕೇಕ್ ತರುತ್ತೇನೆಂದು ಹೇಳಿದ್ದಾರೆ. ಕೇಕ್ ಕತ್ತರಿಸಲು ಅಪ್ಪ ಬರಲೇಬೇಕು ಎಂದು 5 ವರ್ಷದ ಪುಟಾಣಿ ಮಗು ಹಠ ಹಿಡಿಯುತ್ತಿರುವ ದೃಶ್ಯ ಮನಕಲುಕುವಂತಿದೆ. ಇದು ಪೂಂಛ್ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವಾಯುಸೇನಾ ಯೋಧರ ಮನೆಯ ಚಿತ್ರಣ.
ಶ್ರೀನಗರ(ಮೇ.05) ಭಾರತೀಯ ವಾಯುಸೇನೆ ಮೇಲೆ ನಡೆದ ಉಗ್ರ ದಾಳಿಯಲ್ಲಿ ಓರ್ವ ವಾಯುಸೇನಾಧಿಕಾರಿ ಹುತಾತ್ಮರಾಗಿದ್ದರೆ, ಐವರು ಗಾಯಗೊಂಡಿದ್ದಾರೆ. ಇನ್ನೂ ಮೂರೇ ದಿನದಲ್ಲಿ ತನ್ನ 5 ವರ್ಷದ ಮಗನ ಹುಟ್ಟುಹಬ್ಬಕ್ಕೆ ಆಗಮಿಸಲು ರಜೆ ಪಡೆದುಕೊಂಡಿದ್ದ ಯೋಧ ಇದೀಗ ಹುತಾತ್ಮರಾಗಿದ್ದಾರೆ. ಇತ್ತ ಅಪ್ಪ ತನ್ನ ಹುಟ್ಟುಹಬ್ಬಕ್ಕೆ ಬರುತ್ತಾನೆ. ಕೇಕ್ ತಂದು ಅಪ್ಪನ ಜೊತೆಯಲ್ಲೇ ಕತ್ತರಿಸಬೇಕು ಎಂದು ಕನಸು ಕಾಣುತ್ತಿದ್ದ ಮಗ ಏನೂ ಏರಿಯದೇ ಕುಟುಂಬಸ್ಥರ ಜೊತೆ ಕಣ್ಣೀರು ಹಾಕುತ್ತಿದ್ದಾನೆ. ಪುಟಾಣಿ ಮಗುವಿಗೆ ಪರಿಸ್ಥಿತಿ ತಿಳಿಹೇಳಲು ಪ್ರಯತ್ನ ನಡೆಸಿದರೂ ಕೇಕ್ ಕತ್ತರಿಸಲು ಅಪ್ಪ ಬರಲೇಬೇಕು ಎಂದು ಹಠ ಹಿಡಿಯುತ್ತಿರುವ ದೃಶ್ಯ ಎಂತವಹರ ಕಣ್ಣಲ್ಲಿ ನೀರು ಜಿನುಗಿಸುತ್ತಿದೆ.
ಪೂಂಛ್‌ನಲ್ಲಿ ಭಾರತೀಯ ವಾಯುಸೇನೆ (ಐಎಎಫ್)ಗೆ ಸೇರಿದ ಎರಡು ವಾಹನಗಳ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ವಾಯುಪಡೆಯ 5 ಭದ್ರತಾ ಸಿಬ್ಬಂದಿಗೆ ಗಾಯಗಳಾಗಿದೆ. ಈ ಪೈಕಿ ಓರ್ವ ಯೋಧ ವಿಕ್ಕ ಪಹಡೆ ಹುತಾತ್ಮರಾಗಿದ್ದರೆ, ಮತ್ತೊರ್ವ ಯೋಧನ ಪರಿಸ್ಥಿತಿ ಗಂಭೀರವಾಗಿದೆ. ವಾಯುಸೇನಾ ಬೆಂಗಾವಲು ಪಡೆಯನ್ನೇ ಟಾರ್ಗೆಟ್ ಮಾಡಿದ್ದ ಉಗ್ರರು ದಾಳಿ ನಡೆಸಿದ್ದರು.
Breaking: ಏರ್‌ಪೋರ್ಸ್ ಬೆಂಗಾವಲು ಪಡೆ ಮೇಲೆ ಪೂಂಚ್‌ನಲ್ಲಿ ಭಯೋತ್ಪಾದಕ ದಾಳಿ, ಹಲವು ಸೈನಿಕರಿಗೆ ಗಾಯ!
ಮಧ್ಯಪ್ರದೇಶದ ಚಿಂಚಿವಾಡ ಜಿಲ್ಲೆಯ 32 ವರ್ಷದ ವಾಯುಸೇನಾ ಯೋಧ ವಿಕ್ಕಿ ಪಹಡೆ ಇನ್ನೂ ಮೂರೇ ದಿನದಲ್ಲಿ ತವರಿಗೆ ಆಗಮಿಸಬೇಕಿತ್ತು. ತನ್ನ 5 ವರ್ಷದ ಮಗನ ಹುಟ್ಟುಹಬ್ಬಕ್ಕೆ ವಿಕ್ಕಿ ಪಹಡೆಗೆ ಮನೆಗೆ ತೆರಳು ರಜೆ ಅನುಮತಿಸಲಾಗಿತ್ತು. ಮೇ.07 ರಂದು ವಾಯುಸೇನಾ ಯೋಧ ವಿಕ್ಕಿ ಪಹಡೆ ಮಗನ ಹುಟ್ಟು ಹಬ್ಬ ಸಂಭ್ರಮ. ಫೋನ್ ಮೂಲಕ ತಾನು ಕೇಕ್ ತರುವುದಾಗಿ ಮಗನಿಗೆ ಭರವಸೆ ನೀಡಿದ್ದ ಅಪ್ಪ, ಇದೀಗ ಹುತಾತ್ಮರಾಗಿದ್ದಾರೆ.
ಏಪ್ರಿಲ್ 18ರಂದು ತಂಗಿ ಮದುವೆಗೆ ತವರಿಗೆ ತೆರಳಿದ್ದ ವಿಕ್ಕಿ ಪಹಡೆ ಕುಟುಂಬ ಜೊತೆ ಒಂದೆರಡು ದಿನ ಕಳೆದಿದ್ದರು. ಈ ವೇಳೆ ಹುಟ್ಟುಹಬ್ಬಕ್ಕೆ ಬಂದು ಅದ್ದೂರಿಯಾಗಿ ಸಂಭ್ರಮ ಆಚರಿಸುವುದಾಗಿ ಮಗನಿಗೆ ಸಂತೈಸಿ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ನಿನ್ನೆ(ಮೇ.04) ನಡೆಗ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ.
ಪುಟಾಣಿ ಮಗು ತಂದೆ ಬರಲೇಬೆಂಕೆಂದು ಹಠ ಹಿಡಿಯುತ್ತಿದ್ದಾನೆ. ಇತ್ತ ಕುಟುಂಬಸ್ಥರಿಗೆ ಸಂತೈಸಲು ಆಗದೆ, ಸಮಾಧಾನಿಸಲು ಆಗದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಹೆಮ್ಮೆ ಯೋಧನ ಮನೆಯ ಪರಿಸ್ಥಿತಿ ಎಂತವರ ಹೃದಯವನ್ನು ಕರಗಿಸುವಂತಿದೆ. ವಿಕ್ಕ ಪಹಾಡೆ ಪತ್ನಿ,5 ವರ್ಷದ ಪುತ್ರ,ಮೂವರು ತಂಗಿ ಹಾಗೂ ತಾಯಿಯನ್ನು ಅಗಲಿದ್ದಾರೆ.
ಮೂರು ನಾಗರೀಕರ ಸಾವಿನ ಬಳಿಕ ಪಿರ್ ಟೋಪಾ ಹಳ್ಳಿ ದತ್ತು ತೆಗೆದುಕೊಂಡ ಭಾರತೀಯ ಸೇನೆ!