ಬೆಂಗ​ಳೂ​ರು(ಮಾ.02): ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಚಳಿ ಕಡಿಮೆಯಾಗಿದ್ದು, ಬಿಸಿಲಿನ ಪ್ರಮಾಣ ನಿಧಾನವಾಗಿ ಹೆಚ್ಚಾಗಿ ತಾಪಮಾನದ ಬಿಸಿ ತಟ್ಟುತ್ತಿದೆ. ಮಾ.1ರ ಸೋಮವಾರ ಉತ್ತರ ಒಳನಾಡಿನ ಕಲಬುರಗಿಯಲ್ಲಿ ಅತ್ಯಂತ ಗರಿಷ್ಠ ತಾಪಮಾನ 38.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಪ್ರತಿ ವರ್ಷ ಬೇಸಿಗೆ ವೇಳೆ ಮಾಚ್‌ರ್‍ ಅಂತ್ಯಕ್ಕೆ ಹಂತ ಹಂತವಾಗಿ ತಾಪಮಾನ ಏರಿಕೆಯಾಗುತ್ತಿತ್ತು. ಆದರೆ ಈ ಭಾರಿ ಮಾಚ್‌ರ್‍ 1ರಂದೇ ಅತ್ಯಧಿಕ ತಾಪಮಾನ ವರದಿಯಾಗಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಮಾಚ್‌ರ್‍ ತಿಂಗಳಲ್ಲಿ ವಾಡಿಕೆ ತಾಪಮಾನ ಗರಿಷ್ಠ 37ಮತ್ತು ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ಇರುತ್ತದೆÜ. ಆದರೆ ಸೋಮವಾರ ವಾಡಿಕೆಗಿಂತ ಅಧಿಕ ತಾಪಮಾನ ದಾಖಲಾಗಿದೆ.

ಕಲಬುರಗಿಯಲ್ಲಿ 2016ರ ಫೆ.24ರಂದು 40.3 ಡಿ.ಸೆ. ತಾಪಮಾನ ದಾಖಲಾಗಿತ್ತು. ಇದು ಈವರೆಗಿನ ಆ ಜಿಲ್ಲೆಯ ಸಾರ್ವಕಾಲಿಕ ದಾಖಲೆಯ ಪ್ರಮಾಣ. 2012ರಲ್ಲಿ 38.3 ಡಿ.ಸೆ. ತಾಪಮಾನ ದಾಖಲಾಗಿತ್ತು. ಇದನ್ನು ಹೊರತು ಪಡಿಸಿದರೆ 2021ರ ಮಾ.1ರಂದು ಗರಿಷ್ಠ 38.6 (ಕನಿಷ್ಠ 24.1) ಡಿಗ್ರಿ ಸೆಲ್ಸಿಯಸ್‌ ತಾಪಮಾನ ವರದಿಯಾಗಿದೆ.

ಕಲಬುರಗಿ ಸೇರಿದಂತೆ ಉತ್ತರ ಒಳನಾಡಿನ ರಾಯ​ಚೂರು ಜಿಲ್ಲೆಯಲ್ಲಿ 37 ಡಿಗ್ರಿ ಸೆಲ್ಸಿಯಸ್‌, ಕೊಪ್ಪ​ಳ​ 36, ವಿಜ​ಯ​ಪು​ರ​ 35.6, ಬೀದರ್‌ ಮತ್ತು ಧಾರ​ವಾಡ ತಲಾ 35 ಹಾಗೂ ಮಂಡ್ಯ, ಚಿಂತಾ​ಮ​ಣಿ ಮತ್ತು ದಾವ​ಣ​ಗೆ​ರೆ​ಯಲ್ಲಿ 34, ಮೈಸೂರು ಜಿಲ್ಲೆಯಲ್ಲಿ 33 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ಹವೆ ಅಧಿಕವಾಗಿರಲಿದೆ.

ರಾಜ್ಯ​ದಲ್ಲಿ ಮಾ.5ರವರೆಗೆ ಗರಿ​ಷ್ಠ 33ರಿಂದ 35 ಹಾಗೂ ಕನಿಷ್ಠ 18ರಿಂದ 20 ಡಿಗ್ರಿ ಸೆಲ್ಸಿಯಸ್‌ ದಾಖಲಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.