ಕೊರೋನಾದಿಂದ ಟಾಟಾ ಸ್ಟೀಲ್ ಉದ್ಯೋಗಿ ನಿಧನ, 60ನೇ ವಯಸ್ಸಿನವರೆಗೆ ಕುಟುಂಬಕ್ಕೆ ವೇತನ!
- ಕೊರೋನಾ ವೈರಸ್‌ನಿಂದ ಟಾಟಾ ಸ್ಟೀಲ್ ಉದ್ಯೋಗಿ ನಿಧನ
- ಕುಟುಂಬಕ್ಕೆ ಉದ್ಯೋಗಿಯ 60 ವಯಸ್ಸಿನವರೆಗೆ ವೇತನ ನೀಡುವುದಾಗಿ ಹೇಳಿದ ಟಾಟಾ
- ಟಾಟಾ ಕಂಪನಿ ನಡೆಗೆ ಎಲ್ಲೆಡೆಗಳಿಂದ ಮೆಚ್ಚುಗೆ
ನವದೆಹಲಿ(ಮೇ.24): ಕೊರೋನಾ ವೈರಸ್ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಡ ಕೂಲಿ ಕಾರ್ಮಿಕರು, ಉದ್ಯೋಗಿಗಳು ಸೇರಿದಂತೆ ಎಲ್ಲಾ ವರ್ಗದರನ್ನೂ ಕೊರೋನಾ ಬಲಿ ಪಡೆದುಕೊಳ್ಳುತ್ತಿದೆ. ಇದರಲ್ಲಿ ಕೆಲ ಉದ್ಯೋಗಿಗಳ ಕುಟುಂಬಕ್ಕೆ ಕಂಪನಿ ಪರಿಹಾರ, ವಿಮೆ ಸೇರಿದಂತೆ ಇತರ ಸೌಲಭ್ಯ ನೀಡಿದೆ. ಆದರೆ ಹಲವರ ಕುಟಂಬ ಮತ್ತಷ್ಟೂ ಬಡತನಕ್ಕೆ ತಳ್ಳಲ್ಪಟ್ಟಿದೆ. ಆದರೆ ದೇಶದ ಹೆಮ್ಮೆಯ ಕಂಪನಿ ಟಾಟಾ ಈ ವಿಚಾರದಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿದೆ. ಕೊರೋನಾದಿಂದ ನಿಧನರಾದ ಟಾಟಾ ಸ್ಟೀಲ್ ಕಂಪನಿ ಉದ್ಯೋಗಿ ಕುಟುಂಬದ ಜೊತೆ ಕಂಪನಿ ನಿಂತಿದೆ.
ರಾಜ್ಯಸಭಾ MP ಮೋಹಪಾತ್ರ ನಿಧನದ ಬೆನ್ನಲ್ಲೇ ಪುತ್ರರಿಬ್ಬರು ಕೊರೋನಾಗೆ ಬಲಿ!
ಟಾಟಾ ಸ್ಟೀಲ್ ಕಂಪನಿ ಉದ್ಯೋಗಿ ಕೊರೋನಾ ಕಾರಣ ಆಸ್ಪತ್ರೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಉದ್ಯೋಗಿ ನಿಧನರಾಗಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಟಾಟಾ ಸ್ಟೀಲ್ ಕಂಪನಿ ಉದ್ಯೋಗಿ ಕುಟುಂಬದ ಜೊತೆ ನಿಂತಿದೆ. ನಿಧನರಾದ ಉದ್ಯೋಗಿಗೆ 60 ವರ್ಷ ವಯಸ್ಸಿನವರೆಗೆ ಕುಟುಂಬಕ್ಕೇ ಪ್ರತಿ ತಿಂಗಳು ವೇತನ ನೀಡುವುದಾಗಿ ಟಾಟಾ ಸ್ಟೀಲ್ ಘೋಷಿಸಿದೆ.
ಇಷ್ಟೇ ಅಲ್ಲ ನಿಧನಗೊಂಡ ಉದ್ಯೋಗಿ ಕುಟುಂಬಕ್ಕೆ ವೈದ್ಯಕೀಯ ಸೌಲಭ್ಯ, ನಿವೇಶನ ಕೂಡ ಸಿಗಲಿದೆ. ಈ ಕುರಿತು ಟಾಟಾ ಸ್ಟೀಲ್ ಟ್ವಿಟರ್ ಮೂಲಕ ಪತ್ರ ಬರೆದಿದೆ. ಇದೇ ವೇಳೆ ಕೊರೋನಾ ಕಾರಣದಿಂದ ನಿಧನರಾದ ಉದ್ಯೋಗಿಗಳ ಕುಟುಂಬ, ಅವರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಟಾಟಾ ಸ್ಟೀಲ್ ಹೊತ್ತುಕೊಳ್ಳಲಿದೆ ಎಂದಿದೆ.
ಕೊರೋನಾ 2ನೇ ಅಲೆ; 2 ತಿಂಗಳಲ್ಲಿ ಭಾರತದ 329 ವೈದ್ಯರು ಬಲಿ!
ಟಾಟಾ ಸ್ಟೀಲ್ ಕಂಪನಿ ಎಲ್ಲಾ ಸಮಯದಲ್ಲೂ ತನ್ನ ಉದ್ಯೋಗಿಗಳನ್ನು ಸಿಬ್ಬಂದಿಗಳನ್ನು ಬೆಂಬಲಿಸುತ್ತದೆ. ಅದು ಅತ್ಯಂತ ಕಠಿಣ ಸಮಯವಾಗಿದೆ. ಆದರೆ ಟಾಟಾ ಸ್ಟೀಲ್ ಸಿಬ್ಬಂದಿಗಳ ಜೊತೆ ನಿಲ್ಲಲಿದೆ. ಅವರ ಭದ್ರತೆ ಮತ್ತು ಯೋಗಕ್ಷೇಮಕ್ಕೆ ಬದ್ಧವಾಗಿದೆ ಎಂದು ಟಾಟಾ ಸ್ಟೀಲ್ ಪತ್ರದಲ್ಲಿ ಹೇಳಿದೆ.