ಟಾಟಾ ಸನ್ಸ್ ಸಂಸ್ಥೆಯಲ್ಲಿ ಕೋಲಾಹಲ ಎದ್ದಿದೆ. ಟಾಟಾ ಸನ್ಸ್ ವಾರ್ಷಿಕ ಸಾಮಾನ್ಯ ಸಭೆಗೂ ಮೊದಲೇ ಚಂದ್ರಶೇಖರ್ ರಾಜೀನಾಮೆ ನೀಡಿರುವುದು ಸಂಸ್ಥೆಯ ಒಳಗಿನ ಜಟಾಪಟಿ ತೀವ್ರಗೊಂಡಿರುವ ಸೂಚನೆಗಳು ನೀಡಿದೆ.
ಮುಂಬೈ(ಆ.12) ಟಾಟಾ ಸಂಸ್ಥೆಯನ್ನು ರತನ್ ಟಾಟಾ ಸಮರ್ಥವಾಗಿ ಮುಂದುವರಿಸುವಲ್ಲಿ ಯಶಸ್ವಿಯಾಗಿದ್ದು ಮಾತ್ರವಲ್ಲ, ಭಾರತದ ಅತೀ ದೊಡ್ಡ ಉದ್ಯಮವಾಗಿ ಬೆಳೆಸಿದ್ದರು. ರತನ್ ಟಾಟಾ ಎಲ್ಲಾ ಜವಾಬ್ದಾರಿಗಳನ್ನು ಹಂಚಿಕೆ ಮಾಡಿ ನಿಧನಗೊಂಡರೂ ಗ್ರೂಪ್‌ನಲ್ಲಿನ ಜಟಾಪಟಿಗಳು, ಅಸಮಾಧಾನಗಳು ಭುಗಿಲೇಳುತ್ತಲೇ ಇದೆ. ಟಾಟಾ ಸನ್ಸ್ ಚೇರ್ಮೆನ್ ಎನ್ ಚಂದ್ರಶೇಖರನ್ ಮರು ಆಯ್ಕೆಗೆ ಷೇರುದಾರರು ಆಸಕ್ತಿ ತೋರಿದ್ದರೆ, ಟಾಟಾ ಟ್ರಸ್ಟ್ ಚೇರ್ಮೆನ್ ನೋಯೆಲ್ ಟಾಟಾ ಅಸಮಾಧಾನ ಹೊರಹಾಕಿದ್ದರು. ಈ ಜಟಾಪಟಿ ನಡುವೆ ಎನ್ ಚಂದ್ರಶೇಖರನ್ ದಿಢೀರ್ ರಾಜೀನಾಮೆ ನೀಡಿದ್ದಾರೆ.
ಆಗಸ್ಟ್ 18ರ ಎಜಿಎಂಗೂ ಮೊದಲೇ ರಾಜೀನಾಮೆ
ಆಘಸ್ಟ್ 18ಕ್ಕೆ ಟಾಟಾ ಸನ್ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಟಾಟಾ ಸನ್ಸ್ ಷೇರ್ ಹೋಲ್ಡರ್ಸ್ ಎನ್ ಚಂದ್ರಶೇಖರನ್ ಮರು ಆಯ್ಕೆಗೆ ಮುಂದಾಗಿದ್ದರು. ಎನ್ ಚಂದ್ರಶೇಖರನ್ ಅವಧಿ ಫೆಬ್ರವರಿ 2027ರಲ್ಲಿ ಮುಕ್ತಾಯಗೊಳ್ಳುತ್ತಿದ್ದ ಕಾರಣ ಕಂಪನಿ ಪಾಲುದಾರರು ಒಮ್ಮದ ಮೂಲಕ ಎನ್ ಚಂದ್ರಶೇಖರ್ ಮರುಆಯ್ಕೆಗೆ ಮುಂದಾಗಿದ್ದರು. ಆದರೆ ರತನ್ ಟಾಟಾ ನಿಧನದ ಬಳಿಕ ಟಾಟಾ ಟ್ರಸ್ಟ್ ಚೇರ್ಮೆನ್ ಜವಾಬ್ದಾರಿ ವಹಿಸಿಕೊಂಡಿರುವ ನೋಯೆಲ್ ಟಾಟಾ ಆಕ್ಷೇಪ ವ್ಯಕ್ತಪಡಿಸಿದ್ದರು. ಎನ್ ಚಂದ್ರಶೇಖರನ್ ಮರು ಆಯ್ಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಟಾಟಾ ಸನ್ಸ್ ಸಾಲದ ಪ್ರಮಾಣ ಹೆಚ್ಚಾಗಿದೆ ಎಂದು ನೋಯೆಲ್ ಟಾಟಾ ಆರೋಪಿಸಿದ್ದಾರೆ. ಟಾಟಾ ಸನ್ಸ್ ಹೊಸ ಹುರುಪಿನೊಂದಿಗೆ, ನೂತನ ರೂಪುರೇಷೆಯೊಂದಿಗೆ ಸಾಗಬೇಕಿದೆ ಎಂದು ನೋಯೆಲ್ ಟಾಟಾ ಹೇಳಿದ್ದರು. ಎನ್ ಚಂದ್ರಶೇಖರನ್ ಚೇರ್ಮೆನ್ ಆಗಿ ಮುಂದುವರಿಯುವುದನ್ನು ನೋಯೆಲ್ ಟಾಟಾ ವಿರೋಧ ತೀವ್ರಗೊಳ್ಳುತ್ತಿದ್ದಂತೆ ಎನ್ ಚಂದ್ರಶೇಖರನ್ ದಿಢೀರ್ ರಾಜೀನಾಮೆ ನೀಡಿದ್ದಾರೆ. ಫೆಬ್ರವರಿ 27ರ ವರೆಗೆ ಮಂದುವರಿಯುವುದಾಗಿ ಎನ್ ಚಂದ್ರಶೇಖರನ್ ತಿಳಿಸಿದ್ದಾರೆ. ಆಘಸ್ಟ್ 18ರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹೊಸ ಚೇರ್ಮೆನ್ ನೇಮಕಗೊಳ್ಳುವ ಸಾಧ್ಯತೆ ಇದೆ.
ಷೇರ್ ಹೋಲ್ಡರ್ಸ, ಟಾಟಾ ಸನ್ಸ್ ಕಂಪನಿ ಪಾಲುದಾರರು ಈ ನಿರ್ಧಾರಿಂದ ಆತಂಕಗೊಂಡಿದ್ದಾರೆ. ರತನ್ ಟಾಟಾ ಕಾಲದಿಂದಲೂ ಎನ್ ಚಂದ್ರಶೇಖರನ್ ಟಾಟಾ ಸನ್ಸ್ ಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಎನ್ ಚಂದ್ರಶೇಖರನ್ ಅನುಭವ ಹಾಗೂ ಸಾಮರ್ಥ್ಯ ಟಾಟಾ ಸನ್ಸ್ ಕಂಪನಿಗೆ ಅವಶ್ಯಕತೆ ಇದೆ ಎಂದು ಪಾಲುದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರತನ್ ಟಾಟಾ ಟ್ರಸ್ಟ್‌ನಿಂದ ವಿಜಯ್ ಸಿಂಗ್ ರಾಜೀನಾಮೆ
ಟಾಟಾ ಸನ್ಸ್ ಮಾತ್ರವಲ್ಲ, ಇತ್ತ ರತನ್ ಟಾಟಾ ಟ್ರಸ್ಟ್‌ನಿಂದ ಟ್ರಸ್ಟಿ ವಿಜಯ್ ಸಿಂಗ್ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಟಾಟಾ ಗ್ರೂಪ್ ಜೊತೆಗಿನ ಮನಸ್ತಾಪ, ಟಾಟಾ ಸನ್ಸ್ ಹಾಗೂ ಟಾಟಾ ಟ್ರಸ್ಟ್ ಒಳಗಿನ ಜಟಾಪಟಿಗಳಿಂದ ವಿಜಯ್ ಸಿಂಗ್ ಟ್ರಸ್ಟಿಯಾಗಿ ಮುಂದುವರಿಯಲು ನಿರಾಕರಿಸಿದ್ದಾರೆ.


