Air India Chairman ಏರ್ ಇಂಡಿಯಾ ಮುಖ್ಯಸ್ಥನಾಗಿ ಟಾಟಾ ಸನ್ಸ್ ಚೀಫ್ ಎನ್ ಚಂದ್ರಶೇಖರನ್ ನೇಮಕ!

  • ತೆರವಾಗಿದ್ದ ಏರ್ ಇಂಡಿಯಾ ಮುಖ್ಯಸ್ಥ ಸ್ಥಾನಕ್ಕ ನೇಮಕ
  • ಟಾಟಾ ಗ್ರೂಪ್‌ನಿಂದ ಮಹತ್ವದ ನಿರ್ಧಾರ
  • ಏರ್‌ ಇಂಡಿಯಾ ಸಿಇಒ ಹುದ್ದೆ ತಿರಸ್ಕರಿಸಿದ ಟರ್ಕಿಯ ಇಲ್ಕರ್‌
Tata Sons cheif N Chandrasekaran Appointed Air India Chairman after Ilker Ayci declined chief executive post ckm

ನವದೆಹಲಿ(ಮಾ.14): ಏರ್ ಇಂಡಿಯಾ ವಿಮಾನಯಾನ(Air India) ಸಂಸ್ಥೆ ಖರೀದಿಸಿದ ಟಾಟಾ ಗ್ರೂಪ್(Tata Group) ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ತೆರವಾಗಿದ್ದ ಏರ್ ಇಂಡಿಯಾ ಮುಖ್ಯಸ್ಥನ ಸ್ಥಾನಕ್ಕೆ ಟಾಟಾ ಸನ್ಸ್ ಮುಖ್ಯಸ್ಥ್ ಎನ್ ಚಂದ್ರಶೇಖರನ್(N Chandrasekaran) ಅವರನ್ನು ನೇಮಕ ಮಾಡಿದೆ. 

ಟಾಟಾ ಸನ್ಸ್ ಕಂಪನಿ ಚೇರ್ಮೆನ್ ಎನ್ ಚಂದ್ರಶೇಖರನ್ 100ಕ್ಕೂ ಹೆಚ್ಚು ಟಾಟಾ ಕಂಪನಿಗಳ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2016ರಲ್ಲಿ ಟಾಟಾ ಸನ್ಸ್ ಕಂಪನಿ ಸೇರಿಕೊಂಡ ಎನ್ ಚಂದ್ರಶೇಖರನ್, 2017ರಲ್ಲಿ ಟಾಟಾ ಸನ್ಸ್ ಚೇರ್ಮೆನ್ ಆಗಿ ಬಡ್ತಿ ಪಡೆದರು.

ಟಾಟಾ ಪವರ್, ಟಾಟಾ ಮೋಟಾರ್ಸ್, ಟಾಟಾ ಕನ್ಸಲ್ಟೆನ್ಸಿ , ಟಾಟಾ ಸ್ಟೀಲ್ ಕಂಪನಿಗೆ ಚೀಫ್ ಎಕ್ಸ್‌ಕ್ಯೂಟೀವ್ ಆಫೀಸರ್ ಆಗಿದ್ದಾರೆ. 2009ರಿಂದ 2019ರ ವರೆಗೆ ಸಿಇಒ ಒಗಿ ಕಾರ್ಯನಿರ್ವಹಿಸಿದ್ದರು. 2017ರಲ್ಲಿ ಚೇರ್ಮೆನ್ ಆಗಿ ಬಡ್ತಿ ಪಡೆದಿದ್ದಾರೆ.

ಕನಿಷ್ಠ ಆಭರಣ ಧರಿಸಿ, ಏರ್ ಇಂಡಿಯಾದಿಂದ ಸಿಬ್ಬಂದಿಗಳಿಗೆ ಹೊಸ ರೂಲ್ಸ್‌

ಏರ್‌ ಇಂಡಿಯಾ ಸಿಇಒ ಹುದ್ದೆ ತಿರಸ್ಕರಿಸಿದ ಟರ್ಕಿಯ ಇಲ್ಕರ್‌
ಇತ್ತೀಚೆಗಷ್ಟೇ ಟಾಟಾ ಸಮೂಹದ ವಶಕ್ಕೆ ಬಂದಿದ್ದ ಏರ್‌ ಇಂಡಿಯಾ ಕಂಪನಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಹುದ್ದೆಯನ್ನು ಟರ್ಕಿ ಮೂಲದ ಇಲ್ಕರ್‌ ಐಸಿ ತಿರಸ್ಕರಿಸಿದ್ದಾರೆ. ಈ ಸಂಬಂಧ ಇ-ಮೇಲ್‌ ಪತ್ರಿಕಾಹೇಳಿಕೆ ಬಿಡುಗಡೆ ಮಾಡಿ, ‘ಏರ್‌ ಇಂಡಿಯಾದ ಸಿಇಒ ಹುದ್ದೆಯನ್ನು ಒಪ್ಪಿಕೊಳ್ಳುವುದು ಗೌರವಾನ್ವಿತ ಅಥವಾ ಕಾರ‍್ಯಸಾಧ್ಯ ನಿರ್ಧಾರವಲ್ಲ ಎಂದು ನಾನು ತೀರ್ಮಾನಕ್ಕೆ ಬಂದಿದ್ದೇನೆ’ ಎಂದು ತಿಳಿಸಿದ್ದಾರೆ.

ಸಾಲದ ಸುಳಿಗೆ ಸಿಲುಕಿ ನಷ್ಟದಲ್ಲಿದ್ದ ಏರ್‌ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಜ.27ರಂದು ಟಾಟಾ ಗ್ರೂಪ್‌ ತನ್ನ ಸುಪರ್ದಿಗೆ ಪಡೆದಿತ್ತು. ಬಳಿಕ ಫೆ.14ರಂದು ಏರ್‌ ಇಂಡಿಯಾದ ಸಿಇಒ ಆಗಿ ಇಲ್ಕರ್‌ ಐಸಿ ಅವರನ್ನು ಆಯ್ಕೆ ಮಾಡಿ ಘೋಷಿಸಿತ್ತು. ಇದನ್ನು ಆರ್‌ಎಸ್‌ಎಸ್‌ ಅಂಗಸಂಸ್ಥೆ ಸ್ವದೇಶಿ ಜಾಗರಣ್‌ ಮಂಚ್‌ ವಿರೋಧಿಸಿತ್ತು. ಅಲ್ಲದೆ ಇಲ್ಕರ್‌ ಐಸಿ ಪಾಕಿಸ್ತಾನದ ಮಿತ್ರರಾಷ್ಟ್ರ ಟರ್ಕಿಯ ಅಧ್ಯಕ್ಷ ರೆಸೆಪ್‌ ತಯ್ಯಿಪ್‌ ಎರ್ಡೋಗನ್‌ ಅವರಿಗೆ ನಿಕಟವರ್ತಿ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಈ ಬೆನ್ನಲ್ಲೇ ಹುದ್ದೆ ತ್ಯಜಿಸುವ ಘೋಷಣೆ ಮಾಡಿದ್ದಾರೆ.

Air India ಪ್ರಯಾಣಿಕರೊಂದಿಗೆ ರತನ್ ಟಾಟಾ ಮಾತು, 18 ಸೆಕೆಂಡ್ ಆಡಿಯೋದಲ್ಲಿ ಹೇಳಿದ್ದಿಷ್ಟು

18000 ಕೋಟಿ ರು.ಗೆ ಖರೀದಿ
ಕಳೆದ ವರ್ಷ ನಡೆದ ಬಿಡ್ಡಿಂಗ್‌ ಪ್ರಕ್ರಿಯೆಯಲ್ಲಿ ಟಾಟಾ ಸಮೂಹವು ಏರ್‌ ಇಂಡಿಯಾವನ್ನು 18 ಸಾವಿರ ಕೋಟಿಗೆ ಖರೀದಿಸಿತ್ತು. ಈ ಒಪ್ಪಂದದ ಅನ್ವಯ ಟಾಟಾ ಸಮೂಹವು ಕೇಂದ್ರ ಸರ್ಕಾರಕ್ಕೆ 2700 ಕೋಟಿ ರು. ನಗದು ಪಾವತಿಸಿದ್ದು, ಕಂಪನಿಯ 15300 ಕೋಟಿ ರು. ಸಾಲವನ್ನು ತೀರಿಸಿದೆ. ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಂಪನಿಯ ಆಡಳಿತವನ್ನು ಗುರುವಾರ ಟಾಟಾ ಸಮೂಹಕ್ಕೆ ಹಸ್ತಾಂತರಿಸಲಾಯಿತು.

ವಿಮಾನ ಸೇವೆ ಸುಧಾರಣೆ ಮತ್ತು ವಿಮಾನ ಹಾರಾಟದಲ್ಲಾಗುತ್ತಿರುವ ವಿಳಂಬ ತಪ್ಪಿಸಲು, ಇತ್ತೀಚೆಗೆ ಟಾಟಾ ವಶವಾಗಿರುವ ಏರ್‌ ಇಂಡಿಯಾ ವಿಮಾನ ಸಂಸ್ಥೆ ತನ್ನ ಕ್ಯಾಬಿನ್‌ ಸಿಬ್ಬಂದಿಗೆ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ‘ಡ್ಯೂಟಿ ಫ್ರೀ ಶಾಪ್‌ಗಳ ಭೇಟಿಗೆ ಹೋಗಲೇಬಾರದು. ಕಸ್ಟಮ್ಸ್‌ ಮತ್ತು ಭದ್ರತೆ ಪರಿಶೀಲನೆಯಲ್ಲಿ ಆಗುವ ಸಮಯ ವ್ಯರ್ಥ ತಪ್ಪಿಸಲು ಸಿಬ್ಬಂದಿ ಕಡಿಮೆ ಆಭರಣ ಧರಿಸಬೇಕು. ಅತಿಥಿಗಳು ವಿಮಾನದ ಪ್ರವೇಶಕ್ಕೆ ಮುನ್ನ ಸಿಬ್ಬಂದಿ ಏನನ್ನೂ ತಿನ್ನಬಾರದು ಮತ್ತು ಕುಡಿಯಬಾರದು’ ಎಂದು ಸೂಚಿಸಿದೆ.

Latest Videos
Follow Us:
Download App:
  • android
  • ios