ತಿರುನೆಲ್ವೇಲಿ[ಡಿ.31]: ಕರ್ನಾಟಕ ಮತ್ತು ಉತ್ತರಪ್ರದೇಶದಲ್ಲಿ ಇತ್ತೀಚೆಗೆ ನಡೆದ ಪೌರತ್ವ ವಿರೋಧಿ ಹಿಂಸಾಚಾರದಲ್ಲಿ ಎಸ್‌ಡಿಪಿಯ ಸಂಘಟನೆಯ ಕೈವಾಡ ಬೆಳಕಿಗೆ ಬಂದ ಬೆನ್ನಲ್ಲೇ, ಇಲ್ಲಿ ನಡೆದ ಪೌರತ್ವ ವಿರೋಧಿ ಪ್ರತಿಭಟನೆಯೊಂದರಲ್ಲಿ, ಕಾಯ್ದೆಯ ರೂವಾರಿಗಳಾದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಚಿವ ಅವರನ್ನು ಮುಗಿಸಿ ಎಂದು ಕರೆ ಕೊಟ್ಟಿರುವ ಆಘಾತಕಾರಿ ಘಟನೆ ನಡೆದಿದೆ.

ಪೌರತ್ವ ಕಾಯ್ದೆ ಬೆಂಬಲಿಸಿ ಪ್ರಧಾನಿಗೆ 1 ಕೋಟಿ ಪತ್ರ: ಶೋಭಾ

ಪೌರತ್ವ ಕಾಯ್ದೆ ವಿರೋಧಿಸಿ ಎಸ್‌ಡಿಪಿಐ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾತನಾಡಿದ ತಮಿಳು ವಿಚಾರವಾದಿ ನೆಲ್ಲೈ ಕಣ್ಣನ್‌ ‘ಅಮಿತ್‌ ಶಾ ಪ್ರಧಾನಿ ಮೋದಿ ಅವರ ಮೆದುಳಿನಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ಮುಗಿಸಿದರೆ, ಮೋದಿ ಕಥೆಯೂ ಮುಗಿದಂತೆ. ಹೀಗಾಗಿಯೇ ಮೊದಲು ಅವರನ್ನು ಮುಗಿಸಬೇಕು. ಪೌರತ್ವ ವಿರೋಧಿ ಹೋರಾಟದ ವೇಳೆಯೇ ಇಂಥದ್ದೊಂದು ಆಗಲಿ ಎಂದು ನಾನು ಕಾಯುತ್ತಿದ್ದೇನೆ. ಆದರೆ ಮುಸ್ಲಿಮರು ಏನೂ ಮಾಡುತ್ತಿಲ್ಲ’ ಎಂದು ಹೇಳಿದ್ದಾರೆ.

ಕಣ್ಣನ್‌ರ ಈ ಹೇಳಿಕೆ ವಿರುದ್ಧ ಸ್ಥಳೀಯ ಬಿಜೆಪಿ ನಾಯಕರು ದೂರು ದಾಖಲಿಸಿದ್ದಾರೆ.

ಮಂಗಳೂರು ಗಲಭೆ: ಕುಮ್ಮಕ್ಕು ನೀಡಿದವರಿಗೆ ಸಿಕ್ತು ನೋಟಿಸ್‌!

ಡಿಸೆಂಬರ್ 31ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ