ಚೆನ್ನೈ(ಜೂ.20): ಮಾರಕ ಕೊರೋನಾ ವೈರಸ್‌ಗೆ ಡಿಎಂಕೆ ಮುಖಂಡ ಅನ್ಬಳಗನ್‌ ಅವರು ಬಲಿಯಾದ ಬೆನ್ನಲ್ಲೇ, ತಮಿಳುನಾಡಿನ ಹಾಲಿ ಉನ್ನತ ಶಿಕ್ಷಣ ಸಚಿವ ಹಾಗೂ ಅಣ್ಣಾಡಿಎಂಕೆ ನಾಯಕ ಕೆ.ಪಿ. ಅನ್ಬಳಗನ್‌ ಅವರು ಕೂಡ ಸೋಂಕಿಗೆ ತುತ್ತಾಗಿದ್ದಾರೆ.

‘ಸಚಿವರಲ್ಲಿ ಸಣ್ಣ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿ.ಟಿ. ಸ್ಕಾ್ಯನ್‌ನಲ್ಲಿ ಸಾಮಾನ್ಯ ಸ್ಥಿತಿ ಗೋಚರವಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಅನ್ಬಳಗನ್‌ ಅವರು ತಮಿಳುನಾಡಿನಲ್ಲಿ ಕೋವಿಡ್‌-19 ಸೋಂಕಿಗೊಳಗಾದ ಮೊದಲ ಸಚಿವ ಮತ್ತು ಮೂರನೇ ರಾಜಕಾರಣಿ ಎನಿಸಿಕೊಂಡಿದ್ದಾರೆ.

ಇದಕ್ಕೂ ಮೊದಲು ಡಿಎಂಕೆ ಶಾಸಕ ಜೆ.ಅನ್ಬಳಗನ್‌ ಮತ್ತು ಎಐಎಡಿಎಂಕೆ ಶಾಸಕ ಕೆ.ಪಳನಿ ಅವರಿಗೆ ಕೊರೋನಾ ಸೋಂಕಿರುವುದು ಪತ್ತೆಯಾಗಿತ್ತು.