ಚೆನ್ನೈ[ಡಿ.10]: ನಿರ್ಭಯಾ ದೋಷಿಗಳಿಗೆ ಗಲ್ಲಿಗೇರಿಸಲು ದಿನಗಣನೆ ಆರಂಭವಾಗಿದೆ. ಈಗಾಗಲೇ ತಿಹಾರ್ ಜೈಲಿನ ಸಿಬ್ಬಂದಿ, ಗಲ್ಲಿಗೇರಿಸುವ ಹಗ್ಗವ ತಯಾರು ಮಾಡುವಂತೆ ಬಕ್ಸಾರ್ ಜೈಲಿನ ಸಿಬ್ಬಂದಿಗೆ ಮನವಿ ಮಾಡಿಕೊಂಡಿದೆ. ಹೀಗಿದ್ದರೂ ದಕ್ಷಿಣ ಏಷ್ಯಾದ ಅತಿ ದೊಡ್ಡ ಜೈಲು ಎನಿಸಿಕೊಂಡಿರುವ ತಿಹಾರ್‌ನಲ್ಲಿ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ಸಿಬ್ಬಂದಿ ಇಲ್ಲ ಎಂಬ ವರದಿಗಳು ಸದ್ದು ಮಾಡಿವೆ. ಈ ವರದಿ ಬಹಿರಂಗವಾದ ಬೆನ್ನಲ್ಲೇ ತಮಿಳುನಾಡಿನ ಹೆಡ್‌ ಕಾನ್ಸ್‌ಸ್ಟೇಬಲ್‌ ಒಬ್ಬರು ತಾನೇ ನಿರ್ಭಯಾ ದೋಷಿಗಳನ್ನು ಗಲ್ಲಿಗೇರಿಸುವುದಾಗಿ ಮುಂದೆ ಬಂದಿದ್ದಾರೆ.

ನಿರ್ಭಯಾ ರೇಪಿಸ್ಟ್ ಪವನ್ ತಿಹಾರ್ ಜೈಲಿಗೆ ಶಿಫ್ಟ್!

ತಮಿಳುನಾಡಿನ 42 ವರ್ಷದ ಹೆಡ್‌ಕಾನ್ಸ್‌ಸ್ಟೇಬಲ್, ತಿಹಾರ್ ಜೈಲಿನ ಮುಖ್ಯ ನಿರ್ದೇಶಕರಿಗೆ ಪತ್ರದ ಮೂಲಕ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ತಾನು ಸಿದ್ದನಿದ್ದೇನೆಂದು ಬರೆದಿದ್ದಾರೆ. 'ನಾನಲ್ಲಿ ಕೆಲಸ ಮಾಡುವಾಗ ನನಗೆ ನೀವು ಹಣ ಕೊಡಬೇಡಿ. ನೀವು ಕೊಡುವ ಕೆಲಸವನ್ನು ನಾನು ಅಚ್ಚುಕಟ್ಟಿನಿಂದ ನಿರ್ವಹಿಸುತ್ತೇನೆ. ಅಲ್ಲಿ ಕೆಲಸ ಮಾಡಲು ನನಗೆ ಅವಕಾಶ ಮಾಡಿಕೊಡಿ ಎಂಬುವುದು ನನ್ನ ಕಳಕಳಿಯ ವಿನಂತಿ' ಎಂದಿದ್ದಾರೆ.

ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಸಿಬ್ಬಂದಿ ಇಲ್ಲ ಎಂಬ ಸುದ್ದಿ ಮಾಧ್ಯಮಗಳಲ್ಲಿ ನೋಡಿದ ಬಳಿಕ ನಾಣು ಈ ಕೆಲಸ ನನಗೆ ನೀಡುವಂತೆ ಕೋರಿ ಪತ್ರ ಬರೆದಿದ್ದೇನೆ ಎಂದು ಹೆಡ್‌ ಕಾನ್ಸ್‌ಸ್ಟೇಬಲ್ ಶ್ರೀನಿವಾಸನ್ ತಿಳಿಸಿದ್ದಾರೆ. ಇಂತಹ ಘೋರ ಕೃತ್ಯವೆಸಗಿದ ಪಾಪಿಗಳಿಗೆ ಗಲ್ಲಿಗೇರಿಸಲು ಸಿಬ್ಬಂದಿ ಕೊರತೆ ಇದೆ ಎಂಬುವುದು ಆಘಾತಕಾರಿ ವಿಚಾರ ಎಂದು ಅವರು ತಿಳಿಸಿದ್ದಾರೆ.

ನಿರ್ಭಯಾ ರೇಪಿಸ್ಟ್‌ಗಳಿಗೆ ಗಲ್ಲು: ವಾರದೊಳಗೆ ಹಗ್ಗ ತಯಾರಿಕೆಗೆ ಬಕ್ಸರ್ ಜೈಲಿಗೆ ಸೂಚನೆ!