ತಿರುಚಿ[ಜ.09]: ದೇಶಾದ್ಯಂತ ಧರ್ಮದ ಹೆಸರಿನಲ್ಲಿ ರಾಜಕೀಯ ಹಿಂಸಾಚಾರ ನಡೆಯುತ್ತಿರುವ ಬೆನ್ನಲ್ಲೇ, ಹಿಂದೂ ಧರ್ಮೀಯರೇ ಹೆಚ್ಚಿರುವ ತಮಿಳುನಾಡಿನ ಗ್ರಾಮ ಪಂಚಾಯ್ತಿಯೊಂದು ಮುಸ್ಲಿಂ ಪ್ರತಿನಿಧಿಯೊಬ್ಬರನ್ನು ಪಂಚಾಯತ್‌ ಅಧ್ಯಕ್ಷರನ್ನಾಗಿಸಿದೆ. ಈ ಮೂಲಕ ಸಾಮಾಜಿಕ ಸಾಮರಸ್ಯ ಮೆರೆದಿದೆ.

ರಕ್ತದ ಬಣ್ಣ ಒಂದೇ: ಹಿಂದೂ ಗೆಳೆಯನಿಗಾಗಿ ರಕ್ತ ನೀಡಲು ಉಪವಾಸ ಕೈಬಿಟ್ಟ ಅಹ್ಮದ್!

ಪುದುಕೊಟ್ಟೈ ಜಿಲ್ಲೆಯ ಸೆರಿಯಲೂರ್‌ ಗ್ರಾಮ ಪಂಚಾಯ್ತಿಯಲ್ಲಿ ಹಿಂದೂ ಸದಸ್ಯರೇ ಹೆಚ್ಚಿದ್ದಾರೆ. ಆದಾಗ್ಯೂ, ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಯಾದ ಮೊಹಮ್ಮದ್‌ ಜಿಯಾವುದೀನ್‌(45) ಅವರನ್ನು ಗೆಲ್ಲಿಸುವ ಮೂಲಕ ದೇಶಾದ್ಯಂತ ನಡೆಯುತ್ತಿರುವ ಸಿಎಎ ವಿರುದ್ಧದ ಪ್ರತಿಭಟನೆಗೆ ಬೆಂಬಲ ಸೂಚಿಸಲಾಗಿದೆ.

ಅಧ್ಯಕ್ಷರಾದ ಬಳಿಕ ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ ಜಿಯಾವುದ್ದೀನ್ 'ಕಾವೇರಿ ನದಿ ನೀರು ಹಳ್ಳಿಯಲ್ಲಿರುವ 25 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಅಯ್ಯನ್‌ಕುಲಂ ಟ್ಯಾಂಕ್‌ ಸೇರುವಂತೆ ಮಾಡುವುದೇ ನನ್ನ ಮೊದಲ ಗುರಿ' ಎಂದಿದ್ದಾರೆ.

ಗಣೇಶ-ಮೊಹರಂ ಒಂದೇ ರಸ್ತೆಯಲ್ಲಿ: ಸೌಹಾರ್ದತೆ ಬೆರೆತಿದೆ ಭಾರತೀಯನ ರಕ್ತದಲ್ಲಿ!