Asianet Suvarna News Asianet Suvarna News

ತಮಿಳು ನಟ ವಿಜಯ್‌ರ ತಮಿಳಗ ವೆಟ್ರಿ ಕಳಗಂ ಪಾರ್ಟಿ ಧ್ವಜ ಅನಾವರಣ; Copy cat ಎಂದ ಕನ್ನಡಿಗರು!

ತಮಿಳು ನಟ ವಿಜಯ್‌ ಅವರು ಹೊಸದಾಗಿ ಸ್ಥಾಪಿಸಿದ ‘ತಮಿಳಗ ವೆಟ್ರಿ ಕಳಗಂ’ ರಾಜಕೀಯ ಪಕ್ಷದ ಧ್ವಜವನ್ನು ಅನಾವರಣಗೊಳಿಸಿದರು. ತಮಿಳುನಾಡು ವೆಟ್ರಿ ಕಳಗಂನ ಧ್ವಜ ಮತ್ತು ಹಾಡು ಬಿಡುಗಡೆ ಸಮಾರಂಭ ನಿನ್ನೆ ಚೆನ್ನೈನ ಪಣಯೂರ್‌ನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆಯಿತು. ಇದರಿಂದಾಗಿ ಪಕ್ಷದ ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿತ್ತು. ಬೆಳಗ್ಗೆಯಿಂದಲೇ ಆಡಳಿತಾಧಿಕಾರಿಗಳು ಅಲ್ಲಿದ್ದರು

Tamil actor viijay unveils his political party tamilaga Vettri kazhagamflag symbol rav
Author
First Published Aug 23, 2024, 8:15 AM IST | Last Updated Aug 23, 2024, 8:17 AM IST

ಚೆನ್ನೈ (ಆ.23): ತಮಿಳು ನಟ ವಿಜಯ್‌ ಅವರು ಹೊಸದಾಗಿ ಸ್ಥಾಪಿಸಿದ ‘ತಮಿಳಗ ವೆಟ್ರಿ ಕಳಗಂ’ ರಾಜಕೀಯ ಪಕ್ಷದ ಧ್ವಜವನ್ನು ಅನಾವರಣಗೊಳಿಸಿದರು. ತಮಿಳುನಾಡು ವೆಟ್ರಿ ಕಳಗಂನ ಧ್ವಜ ಮತ್ತು ಹಾಡು ಬಿಡುಗಡೆ ಸಮಾರಂಭ ನಿನ್ನೆ ಚೆನ್ನೈನ ಪಣಯೂರ್‌ನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆಯಿತು. ಇದರಿಂದಾಗಿ ಪಕ್ಷದ ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿತ್ತು. ಬೆಳಗ್ಗೆಯಿಂದಲೇ ಆಡಳಿತಾಧಿಕಾರಿಗಳು ಅಲ್ಲಿದ್ದರು

ಧ್ವಜವು ಎರಡು ಬಣ್ಣಗಳಿಂದ ಕೂಡಿದ್ದು, ಮೇಲ್ಭಾಗ ಮತ್ತು ಕೆಳಭಾಗ ಕೆಂಪುಬಣ್ಣದಿಂದ ಕೂಡಿದೆ. ಮಧ್ಯದಲ್ಲಿ ಹಳದಿ ಬಣ್ಣವಿದೆ. ಈ ಹಳದಿ ಬಣ್ಣದ ಮಧ್ಯೆ ವಾಗೈ ಹೂವಿದ್ದು, ಅದರ ಎರಡೂ ಬದಿಯಲ್ಲೂ ಆನೆಗಳ ಚಿತ್ರಗಳು ಇರುವ ಪಕ್ಷದ ಧ್ವಜವನ್ನು ಅನಾವರಣಗೊಳಿಸಿದರು. ಜತೆಗೆ ಪಕ್ಷದ ಗೀತೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು.

ಭಾರತದಲ್ಲಿ ಪ್ರತ್ಯೇಕ ಖಲಿಫಾ ರಾಜ್ಯ ಸ್ಥಾಪನೆ ಸಂಚು ಬಯಲು 14 ಜನರು ವಶಕ್ಕೆ!

ತಮಿಳುನಾಡು ವೆಟ್ರಿ ಕಳಗಂನ ಧ್ವಜ ಮತ್ತು ಹಾಡನ್ನು ಪಕ್ಷದ ನಾಯಕ ವಿಜಯ್ ಪರಿಚಯಿಸಿದರು. ತಮಿಳುನಾಡಿಗಾಗಿ ಮತ್ತು ತಮಿಳುನಾಡಿನ ಜನರ ಉನ್ನತಿಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಅವರು ಪಕ್ಷದ ಕಾರ್ಯಕಾರಿಗಳು ಮತ್ತು ಸ್ವಯಂಸೇವಕರಿಗೆ ಕರೆ ನೀಡಿದರು. .

ಕಳದೆ ಫೆಬ್ರವರಿಯಲ್ಲಿ ವಿಜಯ್‌ ಹೊಸ ಪಕ್ಷವನ್ನು ಸ್ಥಾಪಿಸಿದ್ದರು. 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸುವುದಾಗಿ ಘೋಷಿಸಿದ್ದರು. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ ಹಾಗೂ ಯಾವುದೇ ಪಕ್ಷಕ್ಕೆ ಬೆಂಬಲ ಸೂಚಿಸಿರಲಿಲ್ಲ.

ಕಾಪಿ ಕ್ಯಾಟ್ ವಿಜಯ ಎಂದ ಕನ್ನಡಿಗರು!

ವಿಜಯ ಅನಾವರಣಗೊಳಿಸಿರುವ ವೆಟ್ರಿ ಕಳಗಂನ ಧ್ವಜ ಕನ್ನಡ ಧ್ವಜವನ್ನೇ ಹೋಲುತ್ತಿದ್ದು, ಕನ್ನಡಿಗರು ಲೇವಡಿ ಮಾಡಿದ್ದಾರೆ. ಕಾಫಿ ಕ್ಯಾಟ್ ವಿಜಯ್ ಎಂದು ಮೆನ್ಷನ್ ಮಾಡಿ ತಿವಿದಿದ್ದಾರೆ. ಹಳದಿ ಕೆಂಪು ಕನ್ನಡಿಗರ ಧ್ವಜ ಎಂದು ಇಡೀ ಜಗತ್ತಿಗೆ ಗೊತ್ತಿದೆ. ಆದರೆ ವಿಜಯ ಕನ್ನಡ ಧ್ವಜವನ್ನೇ ಹೋಲುವಂತೆ ನಕಲು ಮಾಡಿದ್ದಾನೆ. ಬಣ್ಣ ನಕಲಿಸಿದರೂ ಕನ್ನಡ ಧ್ವಜದಷ್ಟು ಕಳೆ ಇಲ್ಲ ಎಂದ ಕನ್ನಡಿಗರು.

Latest Videos
Follow Us:
Download App:
  • android
  • ios