Farmers Law Withdrawn: ಕಾಶ್ಮೀರಕ್ಕೆ ವಿಶೇಷ ಸ್ಥಾನ ಬೇಕು, ಇದೀಗ ಸಿಎಎ ಹಿಂಪಡೆಯಲು ಮುಸ್ಲಿಂ ಸಂಘಟನೆ ಬೇಡಿಕೆ!

*ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆದ ಮೋದಿ ಸರ್ಕಾರ
*ಈ ಬೆನ್ನಲ್ಲೇ ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಆಗ್ರಹ
*ಸಿಎಎ ಕೂಡ ಹಿಂಪಡೆಯಿರಿ ಎಂದ ಜಮಿಯತ್ ಉಲೇಮಾ-ಇ-ಹಿಂದ್

Take Back CAA Too Muslim Body  Jamiat Ulema e Hind To Centre After Move To Cancel Farm Laws mnj

ನವದೆಹಲಿ(ನ.20): ಕಳೆದೊಂದು ವರ್ಷದಿಂದ ಸತತ ಹೋರಾಟ, ವಿಪಕ್ಷಗಳ ಆಗ್ರಹ, ಪ್ರತಿಭಟನೆ, ಬಂದ್, ರ್ಯಾಲಿ ಸೇರಿ ಹಲವು ರೀತಿಯ ರೈತರ ಪ್ರತಿಭಟನೆಗೆ ಜಗ್ಗದ ಕೇಂದ್ರ ಸರ್ಕಾರ ಇದೀಗ ದಿಢೀರ್ ಮೂರು ಕೃಷಿ ಮಸೂದೆಯನ್ನು(repeal of 3 farm laws) ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಘೋಷಿಸಿದ್ದಾರೆ. ಇದು ರೈತರ ಹೋರಾಟಕ್ಕೆ ಸಂದಿರುವ ಜಯ ಎಂದಿರವ ವಿಪಕ್ಷಗಳು ಮೋದಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿವೆ. ಇತ್ತ ಕೃಷಿ ಕಾಯ್ದೆಗಳು ರದ್ದಾದರೂ ಬಿಜೆಪಿ (BJP) ಪಾಳಯದಲ್ಲಿ ಹರ್ಷ ವ್ಯಕ್ತವಾಗುತ್ತಿದೆ. ಚುನಾವಣೆಗಾಗಿ ವಿಪಕ್ಷಗಳಿಗಿದ್ದ ಕೊನೆಯ ಅಸ್ತ್ರವನ್ನೂ ಮೋದಿ ಹಿಂಪಡೆದಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ.

ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಘೋಷಣೆ ಬೆನ್ನಲ್ಲೇ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನೂ ಹಿಂಪಡೆಯಬೇಕು ಎಂದು ಮುಸ್ಲಿಂ ಸಂಘಟನೆ ಜಮಿಯತ್ ಉಲೇಮಾ-ಇ-ಹಿಂದ್ (Jamiat Ulema-e-Hind) ಶುಕ್ರವಾರ ಸರ್ಕಾರವನ್ನು ಒತ್ತಾಯಿಸಿದೆ. ಜಮೀಯತ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ (Maulana Arshad Madani ) ಅವರು ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಘೋಷಣೆಯನ್ನು ಸ್ವಾಗತಿಸಿದ್ದಾರೆ ಮತ್ತು  ರೈತರ ಯಶಸ್ಸಿಗಾಗಿ  ಅವರನ್ನು  ಶ್ಲಾಘಿಸಿದ್ದಾರೆ.

ರೈತರನ್ನು ವಿಭಜಿಸಲು (Divide) ಷಡ್ಯಂತ್ರ!

ದೇಶದ ಇತರ ಎಲ್ಲ ಆಂದೋಲನಗಳಲ್ಲಿ ಮಾಡಿದಂತೆಯೇ ರೈತರ ಚಳವಳಿಯನ್ನು ನಿಗ್ರಹಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಯಿತು ಎಂದು ಮದನಿ ಆರೋಪಿಸಿದ್ದಾರೆ. ರೈತರನ್ನು ವಿಭಜಿಸಲು (Divide) ಷಡ್ಯಂತ್ರಗಳು ನಡೆದಿದ್ದವು, ಆದರೆ ಅವರು ಎಲ್ಲಾ ರೀತಿಯ ತ್ಯಾಗವನ್ನು ಮುಂದುವರೆಸಿದರು ತಮ್ಮ ನಿಲುವಿನಲ್ಲಿ ಅಚಲರಾಗಿದ್ದಾರೆ ಎಂದು ಅವರು ತಮ್ಮ ನೇತೃತ್ವದ ಜಮೀಯತ್  ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Farm Laws Repeal: ಕೃಷಿ ಕಾಯ್ದೆ ಹಿಂಪಡೆದ ಬೆನ್ನಲ್ಲೇ ಆರ್ಟಿಕಲ್ 370 ಮರುಸ್ಥಾಪನೆಗೆ ಆಗ್ರಹ!

ಪೌರತ್ವ (ತಿದ್ದುಪಡಿ) ಕಾಯ್ದೆಯ (CAA) ವಿರುದ್ಧದ ಆಂದೋಲನವು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಲು ರೈತರನ್ನು ಉತ್ತೇಜಿಸಿತು. ಕೃಷಿ ಕಾನೂನುಗಳಂತೆಯೇ ಸಿಎಎಯನ್ನು ಹಿಂಪಡೆಯಬೇಕು ಎಂದು ಮದನಿ ಒತ್ತಾಯಿಸಿದ್ದಾರೆ. ಕೃಷಿ ಕಾನೂನುಗಳನ್ನು ಹಿಂಪಡೆಯುವ ನಿರ್ಧಾರವು ಪ್ರಜಾಪ್ರಭುತ್ವ ಮತ್ತು ಜನರ ಶಕ್ತಿಯೇ ಮುಖ್ಯ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಅವರು ಹೇಳಿದರು. ಈ ಮೂಲಕ ಕೃಷಿ ಕಾಯ್ದೆಗಳನ್ನು ಹಿಂಪಡೆದಿರುವ ಮೋದಿ ಸರ್ಕಾರಕ್ಕೆ ಶೀಘ್ರವೇ ಸಿಎಎ ಹಿಂಪಡೆಯುವಂತೆ ಜಮಿಯತ್ ಉಲೇಮಾ-ಎ-ಹಿಂದ್ ಆಗ್ರಹಿಸಿದೆ

ಹೆಚ್ಚು ವಿಳಂಬ ಮಾಡದೇ ಸಿಎಎ ಹಿಂಪಡೆಯಿರಿ!

ಬಿಎಸ್‌ಪಿ ಸಂಸದ ಅಮ್ರೋಹಾ ಕುನ್ವರ್‌ನ  ಡ್ಯಾನಿಶ್ ಅಲಿ (Kunwar Danish Ali) ಕೂಡ "ಹೆಚ್ಚು ವಿಳಂಬವಿಲ್ಲದೆ" ಸಿಎಎ ಹಿಂಪಡೆಯಲು ಕರೆ ನೀಡಿದ್ದಾರೆ. "3 ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ್ದು ಸ್ವಾಗತಾರ್ಹ ಕ್ರಮವಾಗಿದೆ. ರೈತರ ದಿಟ್ಟ ಹೋರಾಟಕ್ಕೆ ನಾನು ಧನ್ಯವಾದ ತಿಳಿಸಿಸುತ್ತೇನೆ. ಅವರ ತ್ಯಾಗ ಮತ್ತು ಸರ್ಕಾರವನ್ನು  ಸೋಲಿಸಲು ರೈತರ ಇಚ್ಛಾಶಕ್ತಿಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಜತೆಗೆ ಯಾವುದೇ ವಿಳಂಬ ಮಾಡದೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕೆಂದು ಎಂದು  ಅಲಿ ಟ್ವೀಟ್ ಮಾಡಿದ್ದಾರೆ.

 

 

Farm Laws: ಒಂದೇ ಏಟಿಗೆ ವಿಪಕ್ಷಗಳ ಅಸ್ತ್ರ ನಿಷ್ಕ್ರಿಯ; ಬಿಜೆಪಿ ಯೂ-ಟರ್ನ್ ಹೊಡೆದಿದ್ದೇಕೆ?

CAA ಅನ್ನು ಡಿಸೆಂಬರ್ 12, 2019 ರಂದು ಸೂಚಿಸಲಾಗಿತ್ತು ಮತ್ತು ಜನವರಿ 10, 2020 ರಿಂದ ಸಿಎಎ ಜಾರಿಗೆ ಬಂದಿದೆ. ಸಿಎಎಯನ್ನು ಸಂಸತ್ತು ಅಂಗೀಕರಿಸಿದ ನಂತರ, ದೇಶದ ವಿವಿಧ ಭಾಗಗಳಲ್ಲಿ ವ್ಯಾಪಕ ಪ್ರತಿಭಟನೆಗಳಿಗೆ ನಡೆದಿದ್ದವು. ಪಾಕಿಸ್ತಾನ (Pakistan), ಬಾಂಗ್ಲಾದೇಶ (Bangladesh)  ಮತ್ತು ಅಫ್ಘಾನಿಸ್ತಾನದಿಂದ (Afghanistan) ಕಿರುಕುಳಕ್ಕೊಳಗಾದ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಂತಹ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವವನ್ನು ನೀಡುವ ಗುರಿಯನ್ನು ಸಿಎಎ ಹೊಂದಿದೆ.

Latest Videos
Follow Us:
Download App:
  • android
  • ios