ಉತ್ತರಾಖಂಡದ ಶ್ರೀ ಕ್ಷೇತ್ರ ಹೃಷಿಕೇಶ ನಲ್ಲಿರುವ ತಾಜ್‌ ಫೈವ್‌ಸ್ಟಾರ್‌ ಹೋಟೆಲ್‌ನಲ್ಲಿ 76 ಮಂದಿಗೆ ಕೋವಿಡ್‌ ಸೋಂಕು|  ಹೃಷಿಕೇಶದ ತಾಜ್‌ ಹೋಟೆಲ್‌ ಬಂದ್‌

ಹೃಷಿಕೇಶ(ಮಾ.30): ಉತ್ತರಾಖಂಡದ ಶ್ರೀ ಕ್ಷೇತ್ರ ಹೃಷಿಕೇಶ ನಲ್ಲಿರುವ ತಾಜ್‌ ಫೈವ್‌ಸ್ಟಾರ್‌ ಹೋಟೆಲ್‌ನಲ್ಲಿ 76 ಮಂದಿಗೆ ಕೋವಿಡ್‌ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ಇಲ್ಲಿನ ಸ್ಥಳೀಯ ಆಡಳಿತ ಹೋಟೆಲ್‌ಅನ್ನು ಮೂರು ದಿನಗಳ ಕಾಲ ಮುಚ್ಚಿಸಿದೆ.

‘ಹೋಟೆಲ್‌ ಅನ್ನು ಸ್ಯಾನಿಟೈಸ್‌ ಮಾಡಿ ಮುಂಜಾಗ್ರತಾ ಕ್ರಮವಾಗಿ 3 ದಿನಗಳ ಕಾಲ ಮುಚ್ಚಿಸಲಾಗಿದೆ’ ಎಂದು ಇಲ್ಲಿನ ಪೊಲೀಸ್‌ ವರಿಷ್ಠಾಧಿಕಾರಿ ತೃಪ್ತಿ ಭಟ್‌ ತಿಳಿಸಿದ್ದಾರೆ. ಕುಂಭಮೇಳ ಏ.1ರಕ್ಕೆ ಆರಂಭವಾಗುತ್ತಿದ್ದು, ಈ ಸಂದರ್ಭದಲ್ಲಿ ಈ ಪ್ರಕರಣ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

ಕಳೆದ ಗುರುವಾರ ತಾಜ್‌ ಹೃಷಿಕೇಶ ರೆಸಾರ್ಟ್‌ ಮತ್ತು ಸ್ಪಾದ 16 ಉದ್ಯೋಗಿಗಳಿಗೆ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಎಲ್ಲಾ ಉದ್ಯೋಗಿಗಳನ್ನೂ ಕೊರೋನಾ ಪರೀಕ್ಷೆಗೆ ಒಳಪಡಿಸಿ, ನಂತರ 48 ಗಂಟೆ ಕಾಲ ಹೋಟೆಲ್‌ ಮುಚ್ಚಿ, ಸ್ಯಾನಿಟೈಜ್‌ ಮಾಡಿ ಸ್ವಚ್ಛ ಮಾಡಲಾಗಿತ್ತು.