ನವದೆಹಲಿ(ಜು.09): ಕೊರೋನಾ ವೈರಸ್ ಭಾರತದಲ್ಲಿ ಅಲ್ಲೊಂದು ಇಲ್ಲೊಂದು ಪ್ರಕರಣ ವರದಿಯಾಗುತ್ತಿದ್ದ ವೇಳೆ ದೆಹಲಿಯಲ್ಲಿ ಆಯೋಜಿಸಿದ್ದ ತಬ್ಲೀಗ್ ಜಮಾತ್ ಕೋಲಾಹಲವನ್ನೇ ಸೃಷ್ಟಿಸಿತ್ತು. ವಿದೇಶಿಗರು, ಭಾರತ ಜಿಲ್ಲೆ ಜಿಲ್ಲೆಗಳಿಂದ ಜನರು ತಬ್ಲೀಗ್ ಜಮಾತ್‌ನಲ್ಲಿ ಪಾಲ್ಗೊಂಡು ವೈರಸನ್ನು ಗಲ್ಲಿ ಗಲ್ಲಿಗೆ ಹರಡಿದ ಆರೋಪ ಹೊತ್ತಿದ್ದಾರೆ. ಪ್ರವಾಸಿ ವೀಸಾದಡಿ ಭಾರತಕ್ಕೆ ಆಗಮಿಸಿ ಧರ್ಮಪ್ರಚಾರ ಮಾಡಿದ್ದಲ್ಲದೇ , ಕೊರೋನಾ ಹರಡಿದ ದೋಷಾರೋಪ ಪಟ್ಟಿಯಲ್ಲಿದ್ದ 8 ದೇಶಗಳ 76 ವಿದೇಶಿಗರಿಗೆ ಜಾಮೀನು ನೀಡಲಾಗಿದೆ.

ಪಕ್ಕಾ ಪ್ಲಾನ್ ಮಾಡಿಯೇ ದೇಶಕ್ಕೆ ಕೊರೊನಾ ಹರಡಿದ್ರಾ ತಬ್ಲಿಘಿಗಳು?.

ದೆಹಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಮೂರ್ತಿ ಗುರ್ಮೋಹಿನಾ ಕೌರ್ ಜಾಮೀನು ಮಂಜೂರು ಮಾಡಿದ್ದಾರೆ. ಪ್ರತಿಯೊಬ್ಬರು 10,000 ರೂಪಾಯಿ ವೈಯುಕ್ತಿಕ ಬಾಂಡ್ ನೀಡಲು ಆದೇಶಿಸಿದ್ದಾರೆ. 

ಮಾಡಿದ್ದುಣ್ಣೋ ಮಾರಾಯ, ತಬ್ಲಿಘಿಗಳಿಗೆ 10 ವರ್ಷ ಭಾರತ ಎಂಟ್ರಿ ಇಲ್ಲ!.

ದೆಹಲಿಯಲ್ಲಿ ಆಯೋಜಿಸಿದ್ದ ತಬ್ಲೀಗ್ ಜಮಾತ್ ತೆರಳಿದ್ದ ಬಹುತೇಕರಿಗೆ ಕೊರೋನಾ ವೈರಸ್ ದೃಢವಾಗಿತ್ತು. ಬಳಿಕ ಹಲವು ತಲೆಮರೆಸಿಕೊಂಡು ತಿರುಗಾಡಿದ್ದರೆ, ಇನ್ನೂ ಕೆಲವರು ಕ್ವಾರಂಟೈನ್, ಐಸೋಲೇಶನ್ ವಾರ್ಡ್‌ನಿಂದ ಎಸ್ಕೇಪ್ ಆಗಿದ್ದರು. ಹೀಗಾಗಿ ತಬ್ಲೀಹ್ ಜಮಾತ್ ದೇಶದಲ್ಲಿ ಭಾರಿ ವಿವಾವದನ್ನೇ ಸೃಷ್ಟಿಸಿತ್ತು. ಈ ಪ್ರಕರಣದಲ್ಲಿ ಒಟ್ಟು 956 ವಿದೇಶಿಗರ ಮೇಲೆ ದೋಷಾರೋಪ ಪಟ್ಟಿಯನ್ನು ಪೊಲೀಸಲು ಸಲ್ಲಿಸಿದ್ದರು.