ನವದೆಹಲಿ(ಡಿ.14): ಮಕ್ಕಳಿಗೆ ಡ್ರೆಸ್ ಕೋಡ್ ಮಾಡುವುದು ಸಾಮಾನ್ಯ. ಆದರೆ ಇಲ್ಲಿ ಇನ್ನು ಮುಂದೆ ಜನ ಜೀನ್ಸ್ ಮತ್ತು ಟೀ ಶರ್ಟ್ ಧರಿಸೋ ಹಾಗಿಲ್ಲ. ಇದೆಂಥಾ ಕಾನೂನು..? ಎಲ್ಲರಿಗೂ ಕಂಫರ್ಟೆಬಲ್ ಅನಿಸೋ ಬಟ್ಟೆಯನ್ನೇ ಬ್ಯಾನ್ ಮಾಡಿದೆ ಸರ್ಕಾರ.

ಸರ್ಕಾರಿ ಕಚೇರಿಗಳಿಗೆ ಡ್ರೆಸ್ ಕೋಡ್ ಜಾರಿ ಮಾಡಿದ ಮಹಾರಾಷ್ಟ್ರ ಸರ್ಕಾರ ಟೀ ಶರ್ಟ್ ಮತ್ತು ಜೀನ್ಸ್ ಬ್ಯಾನ್ ಮಾಡಿದೆ. ಸರ್ಕಾರ ಆದೇಶದ ಪ್ರಕಾರ, ಕಾರ್ಮಿಕರು ಗಾಢ ಬಣ್ಣಗಳು ಮತ್ತು ವಿಚಿತ್ರ ಕಸೂತಿ ಮಾದರಿಗಳ ಅಥವಾ ಚಿತ್ರಗಳಿರುವ ಬಟ್ಟೆಗಳನ್ನು ಧರಿಸುವುದನ್ನು ತಡೆಯಲಾಗಿದೆ.

'ಗೋಡ್ಸೆ..ಸಾವರ್ಕರ್ DNA ಇದ್ದವರು ದೇಶವಿರೋಧಿಗಳ ಬಗ್ಗೆ ಮಾತಾಡ್ತಾರೆ'

ಮಹಿಳೆಯರು ಸೀರೆ ಅಥವಾ ಸಲ್ವಾರ್, ಕುರ್ತಾ ಧರಿಸಬೇಕು. ಕುರ್ತಾ ಜೊತೆ ಅಗತ್ಯವಿದ್ದರೆ ದುಪಟ್ಟಾ ಧರಿಸಬೇಕು. ಪುರುಷರು ಪ್ಯಾಂಟ್ ಶರ್ಟ್ ಧರಿಸಬೇಕು. ಎಲ್ಲ ಸಿಬ್ಬಂದಿ ವಾರದಲ್ಲಿ ಒಂದು ಬಾರಿ ಖಾದಿ ಬಟ್ಟೆ ಧರಿಸಬೇಕೆಂದು ಆದೇಶಿಸಲಾಗಿದೆ. ಮಹಿಳೆಯರು ಸ್ಲಿಪರ್ ಬದಲು ಚಪ್ಪಲ್, ಶೂಸ್ ಧರಿಸಬೇಕು ಎನ್ನಲಾಗಿದೆ.

ಮಹಾರಾಷ್ಟ್ರ ಸರ್ಕಾರ ಡ್ರೆಸ್ ಕೋಡ್ ಹೇರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ, ಮಧ್ಯಪ್ರದೇಶ ಸರ್ಕಾರವು ಸುತ್ತೋಲೆ ಹೊರಡಿಸಿತ್ತು, ಆ ಮೂಲಕ ರಾಜ್ಯದ ಗ್ವಾಲಿಯರ್ ವಿಭಾಗದ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಜೀನ್ಸ್ ಮತ್ತು ಟೀ ಶರ್ಟ್‌ಗಳನ್ನು ಕಚೇರಿಯಲ್ಲಿ ಧರಿಸುವುದನ್ನು ನಿಷೇಧಿಸಲಾಯಿತು ಮತ್ತು ಘನತೆ, ಸಭ್ಯ ಮತ್ತು ಔಪಚಾರಿಕ ಉಡುಪನ್ನು ಧರಿಸಲು ಕೇಳಲಾಯಿತು.