ಬೆಂಗಳೂರು(ಏ.14): ಕೊರೋನಾ ಸೋಂಕು ಲಕ್ಷಣಗಳು 14 ದಿನಗಳ ಬಳಿಕವೂ ಗೋಚರಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ 28 ದಿನಗಳ ಕಾಲ ಕ್ವಾರಂಟೈನ್‌ಗೆ ಸೂಚಿಸುತ್ತಿದ್ದು, ಎರಡನೇ ಹಂತದ 14 ದಿನಗಳ ಕಾಲ ಮನೆಯಲ್ಲೇ ಪ್ರತ್ಯೇಕವಾಗಿರುವಂತೆ ಸೂಚಿಸಲಾಗುತ್ತಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಹೇಳಿದರು.

ವಿದೇಶ ಪ್ರಯಾಣದ ಹಿನ್ನೆಲೆ ಹಾಗೂ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿರುವವರನ್ನು 14 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗುತ್ತದೆ. 14 ದಿನಗಳ ಬಳಿಕವೂ ಸೋಂಕಿನ ಲಕ್ಷಣ ಗೋಚರಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಇನ್ನುಳಿದ 14 ದಿನ ಮನೆಯಲ್ಲಿ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗುತ್ತಿದೆ. ಸೋಂಕಿತ ಪ್ರಕರಣಗಳ ಪೈಕಿ 218ನೇ ಸೋಂಕಿತ ಮಾ.21ರಂದು ಇಂಡೋನೇಷ್ಯಾದಿಂದ ಆಗಮಿಸಿದ್ದರು. 58 ವರ್ಷದ ಈ ವ್ಯಕ್ತಿಗೆ ವಿದೇಶದಿಂದ ಆಗಮಿಸಿದ 22 ದಿನಗಳ ಬಳಿಕ ಏ.12 ರಂದು ಸೋಂಕು ದೃಢಪಟ್ಟಿತ್ತು.

ನಾಳೆಯಿಂದ ಸರಳ, ಸ್ಮಾರ್ಟ್‌ ಲಾಕ್‌ಡೌನ್‌?: ಯಾರಿಗೆಲ್ಲಾ ಇರುತ್ತೆ ರಿಯಾಯಿತಿ?

ಹೀಗಾಗಿ 14 ದಿನಗಳ ಕ್ವಾರಂಟೈನ್‌ ಸಾಕಾಗುತ್ತಿಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೆಲವು ವಿಶೇಷ ಪ್ರಕರಣಗಳಲ್ಲಿ ಸ್ವಲ್ಪ ತಡವಾಗಿ ಲಕ್ಷಣಗಳು ಗೋಚರಿಸಬಹುದು. ಹೀಗಾಗಿಯೇ 28 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗುತ್ತಿದೆ. 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ಮುಗಿದ ಬಳಿಕವೂ 14 ದಿನಗಳ ಕಾಲ ಮನೆಯಲ್ಲೇ ಇರುವಂತೆ ಸೂಚಿಸುತ್ತೇವೆ’ ಎಂದು ಹೇಳಿದರು.

ಕಿಟ್‌ ಬಂದ ಬಳಿಕ ರಾರ‍ಯಂಡಮ್‌ ಪರೀಕ್ಷೆ:

ಸೋಂಕು ಹೆಚ್ಚಾಗಿ ಹರಡಿರುವ ಕಂಟೈನ್‌ಮೆಂಟ್‌ ಪ್ರದೇಶದಲ್ಲಿ ತೀವ್ರವಾಗಿ ಪರೀಕ್ಷೆ ನಡೆಸಲು ರಾರ‍ಯಂಡಮ್‌ ಪರೀಕ್ಷೆಗೆ ಚಿಂತನೆ ನಡೆಸಿದ್ದೇವೆ. ಆದರೆ, ಪರೀಕ್ಷಾ ಕಿಟ್‌ಗಳು ಇನ್ನೂ ಬಾರದ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಸದ್ಯದಲ್ಲೇ ಪರೀಕ್ಷಾ ಕಿಟ್‌ಗಳು ಬರುವ ಸಾಧ್ಯತೆ ಇದೆ. ಕಿಟ್‌ಗಳು ಬಂದ ಮೇಲೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ದೇಶ​ದಲ್ಲಿ ಕೊರೋನಾ 'ಮಹಾ' ಸ್ಫೋಟ: ಈ ರಾಜ್ಯದಲ್ಲಿ ಒಂದೇ ದಿನ 352 ಕೇಸ್

ಕಲರ್‌ ಕೋಡ್‌ ವಲಯ ವರ್ಗೀಕರಣ

ಬೆಂಗಳೂರು: ರಾಜ್ಯದಲ್ಲಿ ಸೋಂಕು ಆಧಾರದ ಮೇಲೆ ಕೆಂಪು, ಆರೆಂಜ್‌ ಹಾಗೂ ಹಸಿರು ವಲಯಗಳಾಗಿ ವಿಂಗಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಹೇಳಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ವಲಯಗಳನ್ನು ಮೂರು ವಿಭಾಗಗಳಾಗಿ ಗುರುತಿಸಿದೆ. ರಾಜ್ಯದಲ್ಲೂ ಇದಕ್ಕೆ ಪ್ರಾಥಮಿಕ ಸಿದ್ಧತೆ ಮಾಡಿಕೊಂಡಿದ್ದು, ವರ್ಗೀಕರಣ ಕಾರ್ಯ ಪ್ರಗತಿಯಲ್ಲಿದೆ ಎಂದರು.