ಬೆಂಗಳೂರು(ಮೇ.18): ಕೊರೋನಾ ವೈರಸ್ ಕಾರಣ ಹಲವು ಕ್ಷೇತ್ರಗಳು ತೀವ್ರವಾಗಿ ನಷ್ಟ ಅನುಭವಿಸುತ್ತಿದೆ. ಇದರಿಂದ ಚೇತರಿಸಿಕೊಳ್ಳವು ದಾರಿಯೇ ಕಾಣದಾಗಿದೆ. ಅದರಲ್ಲೂ ಹೊಟೆಲ್ ಉದ್ಯಮ, ರೆಸ್ಟೋರೆಂಟ್ ಸೇರಿದಂತೆ ಇದಕ್ಕೆ ಸಂಬಂಧಿಸಿದ ಇತರ ಕ್ಷೇತ್ರಗಳು ನಷ್ಟದಲ್ಲಿದೆ. ಇದರಲ್ಲಿ ಪ್ರಮುಖವಾಗಿ ಫುಡ್ ಡೆಲಿವರಿ ಆ್ಯಪ್. ಸ್ವಿಗ್ಗಿ ಫುಡ್ ಡೆಲಿವರಿ ಕಂಪನಿ ಇದೀಗ ಆರ್ಥಿಕ ನಷ್ಟ ತಾಳಲಾರದೆ ಬರೋಬ್ಬರಿ 1,100 ನೌಕರರನ್ನು ಉದ್ಯೋಗದಿಂದ ತೆಗೆದಿದೆ.

ಇವತ್ತು ನಿಮ್ಮ ಕೊನೆಯ ದಿನ; ವಿಡಿಯೋ ಕಾಲ್ ಮಾಡಿ 3700 ಮಂದಿ ಉದ್ಯೋಗದಿಂದ ತೆಗೆದು ಹಾಕಿದ ಉಬರ್

ಸ್ವಿಗ್ಗಿ ಸಹ ಸಂಸ್ಥಾಪಕ ಹಾಗೂ ಸಿಇಓ ಶ್ರೀಹರ್ಷ ಮೆಜೆಟಿ ಈ ನಿರ್ಧಾರ ಪ್ರಕಟಿಸಿದ್ದಾರೆ. ಸೋಮವಾರ(ಮೇ.18): ನನಗೆ ವೃತ್ತಿ ಜೀವನದಲ್ಲಿ ಅತ್ಯಂತ ಕಠಿಣ ದಿನ. ನೌಕರರನ್ನು ಉದ್ಯೋಗದಿಂದ ತೆಗೆಯುವ ನಿರ್ಧಾರವನ್ನು ಭಾರವಾದ ಮನಸ್ಸಿನಿಂದ ಮಾಡುತ್ತಿದ್ದೇನೆ ಎಂದಿದ್ದಾರೆ. ಶ್ರೀಹರ್ಷ ಮೆಜೆಟಿ ಉದ್ಯೋಗಿಗಳಿ ಇ ಮೇಲ್ ಮೂಲಕ ಸುದೀರ್ಘ ಸಂದೇಶ ರವಾನಿಸಿದ್ದಾರೆ. ಈ ಮೂಲಕ ಉದ್ಯೋಗ ಕಡಿತ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಕೊರೋನಾ ವೈರಸ್ ಹೊಡೆತ, ವೋಲ್ವೋ ಕಾರು ಕಂಪನಿಯಿಂದ ಉದ್ಯೋಗ ಕಡಿತ!

ಕಂಪನಿ 1100 ನೌಕರರನ್ನು ಉದ್ಯೋಗದಿಂದ ತೆಗೆಯುತ್ತಿದೆ. ಆದರೆ  ಪರ್ಫಾಮೆನ್ಸ್ ಆಧಾರಿತವಾಗಿರುವ ಉದ್ಯೋಗ ಕಡಿತವಲ್ಲ. ಕಂಪನಿ ನಷ್ಟದಲ್ಲಿರುವ ಕಾರಣ ಈ ನಿರ್ಧಾರ ಅನಿವಾರ್ಯವಾಗಿದೆ. ಕಳೆದ ಕೆಲ ವರ್ಷಗಳಿಂದ ಕಂಪನಿಯ ಏಳಿಗೆಗಾಗಿ ದುಡಿಯುತ್ತಿರುವ ಪ್ರತಿಯೊಬ್ಬ ನೌಕಪ ಮೇಲೆ ಕಂಪನಿಗೆ ಅಷ್ಟೇ ಗೌರವವಿದೆ. ಆದರೆ ಅದೇ ನೌಕರರನ್ನು ಉದ್ಯೋಗದಿಂದ ತೆಗೆಯುವ ನಿರ್ಧಾರ ಅತ್ಯಂತ ಕಠಿಣವಾಗಿದೆ ಎಂದು ಶ್ರೀಹರ್ಷ ನೌಕರರಿಗೆ ಬರೆದಿರುವ ಇಮೇಲ್‌ನಲ್ಲಿ ಹೇಳಿದ್ದಾರೆ.

1,100 ನೌಕರರಿಗೆ 3 ತಿಂಗಳ ವೇತನ ನೀಡಲಾಗುತ್ತದೆ. ವೈರಸ್ ಭೀತಿಯಿಂದ ಯಾರೂ ಕೂಡ ಆಹಾರ ಬುಕ್ ಮಾಡುತ್ತಿಲ್ಲ. ಕೊರೋನಾ ವೈರಸ್ ಲಾಕ್‌ಡೌನ್ ಸಂಪೂರ್ಣ ಸಡಿಲಿಕೆಯಾದರೂ ಎಲ್ಲವೂ ಒಂದು ಹಂತಕ್ಕೆ ಬರವು ಸುದೀರ್ಘ ದಿನಗಳೇ ಬೇಕಾಗುವ ಸಾಧ್ಯತೆ ಇದೆ. ಸ್ವಿಗ್ಗಿ ಜೊತೆ ಕೈಜೋಡಿಸಿದ ಕೆಲ ಉದ್ಯಮಗಳನ್ನು ಸ್ಥಗಿತಗೊಳಿಸುವ ಚಿಂತನೆಯಲ್ಲಿದ್ದೇವೆ. ಆರ್ಥಿಕ ನಷ್ಟ ಅನುಭವಿಸುತ್ತಿರುವ ಕಾರಣ ಕಂಪನಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂದು ಶ್ರೀಹರ್ಷ ನೌಕರರಿಗೆ ರವಾನಿಸಿರುವ ಇ ಮೇಲ್‌ನಲ್ಲಿ ತಿಳಿಸಿದ್ದಾರೆ.