ಮುಂಬೈ (ಅ.30):  ಹೋಟೆಲ್‌ಗೆ ಹೋಗಿ ತಿಂಡಿ ತಿಂದು ಬಿಲ್‌ ಕಟ್ಟದೇ ಇದ್ದರೆ ಹಿಟ್ಟು ರುಬ್ಬುವ ಕೆಲಸ ಫಿಕ್ಸ್‌. 

ಅದೇ ರೀತಿ ಮುಂಬೈ ಮಹಾನಗರ ಪಾಲಿಕೆ ಮಾಸ್ಕ್‌ ಹಾಕದೇ ಇದ್ದವರು ದಂಡ ಕಟ್ಟದೇ ಇದ್ದರೆ, ಅಂಥವರನ್ನು ಶಿಕ್ಷಿಸಲು ಹೊಸ ಉಪಾಯ ಹುಡುಕಿದೆ. ಅದೇನೆಂದರೆ 200 ರು. ದಂಡ ಕಟ್ಟಲು ಹಣವಿಲ್ಲದಿದ್ದರೆ 1 ಗಂಟೆ ರಸ್ತೆಯ ಕಸ ಗುಡಿಸಬೇಕು. 

ಮಾಸ್ಕ್ ಇಲ್ಲದೇ ಮದುವೆಯಲ್ಲಿ ಭಾಗಿಯಾದ ಶ್ರೀರಾಮುಲು; ಸಚಿವರಿಗಿಲ್ವಾ ಮಾಸ್ಕ್ ರೂಲ್ಸ್ ? .

ಅಂಧೇರಿ ವೆಸ್ಟ್‌, ಜುಹುನಂತಹ ಪ್ರತಿಷ್ಠಿತ ಸ್ಥಳಗಳು ಇರುವ ಕೆ.ವೆಸ್ಟ್‌ ವಾರ್ಡ್‌ನಲ್ಲಿ ಈ ನಿಯಮ ಜಾರಿಗೆ ತರಲಾಗಿದೆ.

ಗುಡ್ ನ್ಯೂಸ್: ನೂರಕ್ಕಿಂತಲೂ ಕೆಳಗಿಳಿದ ಕೊರೋನಾ ಮರೆಯಾಗುವ ದಾರಿಯತ್ತ

ಮಾಸ್ಕ್‌ ಹಾಕದೇ ಇದ್ದಿದ್ದಕ್ಕೆ ದಂಡ ಕಟ್ಟಲು ವಿಫಲವಾದ 35 ಮಂದಿ ರಸ್ತೆ ಗುಡಿಸಿ ಸಮುದಾಯ ಸೇವೆ ಮಾಡಿದ್ದಾರೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಈಗಾಗಲೇ ವಿವಿಧೆಡೆ ಭಾರೀ ಪ್ರಮಾಣದಲ್ಲಿ ದಂಡ ವಿಧಿಸಲಾಗುತ್ತದೆ. ಬೆಂಗಳೂರಿನಲ್ಲಿಯೂ ಭರ್ಜರಿ ದಂಡ ಬೀಳುತ್ತಿದೆ.