Asianet Suvarna News Asianet Suvarna News

ರಾಮ ಮಂದಿರಕ್ಕೆ ತೀವ್ರ ಹೋರಾಟ ನಡೆಸಿದ್ದ ಸ್ವಾಮಿ ಸ್ವರೂಪಾನಂದ ಸರಸ್ವತಿ ನಿಧನ

ಇತ್ತೀಚಿನ ವರ್ಷದಲ್ಲಿ ಹಿಂದೂಗಳ ಶ್ರೇಷ್ಠ ಧಾರ್ಮಿಕ ಎಂದೇ ಬಿಂಬಿಸಲ್ಪಟ್ಟಿದ್ದ ಸ್ವಾಮಿ ಸ್ವರೂಪಾನಂದ ಸರಸ್ವತಿ ಭಾನುವಾರ ನಿಧನರಾದರು. ಲಘು ಹೃದಯಾಘಾತದಿಂದ ಅವರು ನಿಧನರಾದರು ಎಂದು ಹೇಳಲಾಗಿದೆ.
 

Swami Shankaracharya Saraswati  Shankaracharya Of Dwarka Sharda Peeth Died in Madhya Pradesh san
Author
First Published Sep 11, 2022, 6:05 PM IST

ನವದೆಹಲಿ (ಸೆ.11): ಬದ್ರಿನಾಥ್‌ ಜ್ಯೋತಿರ್ಮಠ ಮತ್ತು ದ್ವಾರಕಾ ಶಾರದಾ ಪೀಠದ ಶಂಕರಾಚಾರ್ಯ, ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಭಾನುವಾರ ತಮ್ಮ 98 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಮಧ್ಯಪ್ರದೇಶದ ನರಸಿಂಗ್‌ಪುರ ಜಿಲ್ಲೆಯ ಜೋತೇಶ್ವರದಲ್ಲಿರುವ ಪರಮಹಂಸಿ ಗಂಗಾ ಆಶ್ರಮದಲ್ಲಿ ಲಘು ಹೃದಯಾಘಾತದಿಂದ ಮಧ್ಯಾಹ್ನ 3.50 ಕ್ಕೆ ಕೊನೆಯುಸಿರೆಳೆದರು. ಸ್ವರೂಪಾನಂದ ಸರಸ್ವತಿ ಅವರನ್ನು ಹಿಂದೂಗಳ ಶ್ರೇಷ್ಠ ಧಾರ್ಮಿಕ ನಾಯಕ ಎಂದು ಪರಿಗಣಿಸಲಾಗಿದೆ. ಸ್ವಾಮಿ ಶಂಕರಾಚಾರ್ಯರು ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನಲ್ಲಿ ಇದಕ್ಕಾಗಿ ಚಿಕಿತ್ಸೆಯನ್ನೂ ಪಡೆದಿದ್ದರು. ಚಿಕಿತ್ಸೆ ಪೂರ್ಣವಾದ ಬಳಿಕ ಇತ್ತೀಚೆಗಷ್ಟೇ ಅವರು ಆಶ್ರಮಕ್ಕೆ ಮರಳಿದ್ದರು. ಸೋಮವಾರ ಸಂಜೆ 5 ಗಂಟೆಗೆ ಪರಮಹಂಸಿ ಗಂಗಾ ಆಶ್ರಮದಲ್ಲಿ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ದೇಹದ ಸಮಾಧಿ ನೀಡಲಾಗುವುದು ಎಂದು ಶಂಕರಾಚಾರ್ಯರ ಶಿಷ್ಯ ಬ್ರಹ್ಮ ವಿದ್ಯಾನಂದ ತಿಳಿಸಿದ್ದಾರೆ. ಸ್ವಾಮಿ ಶಂಕರಾಚಾರ್ಯರು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿಗೆ ಹೋಗಿದ್ದರು. ಅದೇ ಸಮಯದಲ್ಲಿ, ಅವರು ರಾಮ ಮಂದಿರ ನಿರ್ಮಾಣಕ್ಕಾಗಿ ಸುದೀರ್ಘ ಕಾನೂನು ಹೋರಾಟವನ್ನೂ ನಡೆಸಿದರು.
 


ಮಧ್ಯಪ್ರದೇಶದ (Madhya Pradesh) ಸಿಯೋನಿ ಜಿಲ್ಲೆಯ ದಿಘೋರಿ ಗ್ರಾಮದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಸ್ವಾಮಿ ಜನಿಸಿದ್ದರಯ. ಅವರ ಪೋಷಕರು ಅವರಿಗೆ ಬಾಲ್ಯದಲ್ಲಿ ಪೋತಿರಾಮ್ (Pothiram) ಉಪಾಧ್ಯಾಯ ಎಂದು ಹೆಸರಿಟ್ಟಿದ್ದರು. 9ನೇ ವಯಸ್ಸಿನಲ್ಲಿ ಮನೆ ತೊರೆದು ಧರ್ಮ ಯಾತ್ರೆ ಆರಂಭಿಸಿ, ಕಾಶಿಯನ್ನು ತಲುಪಿದ್ದರಯ. ಅಲ್ಲಿ ಅವರು ಬ್ರಹ್ಮಲಿನ್ ಶ್ರೀ ಸ್ವಾಮಿ ಕರ್ಪಾತ್ರಿ ಮಹಾರಾಜ್ ವೇದ-ವೇದಂಗ್, ಧರ್ಮಗ್ರಂಥಗಳನ್ನು ಕಲಿತರು. 1942 ರಲ್ಲಿ ಬ್ರಿಟಿಷ್ ಕ್ವಿಟ್ ಇಂಡಿಯಾ ಚಳುವಳಿಯನ್ನು ಘೋಷಿಸಿದಾಗ, ಸ್ವಾಮಿ ಸ್ವರೂಪಾನಂದರು (Swaroopanand saraswati) ಸಹ ಚಳುವಳಿಗೆ ಧುಮುಕಿದರು, ಅವರು 19 ನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎನಿಸಿಕೊಂಡರು. 19 ನೇ ವಯಸ್ಸಿನಲ್ಲಿ, ಅವರು ಕ್ರಾಂತಿಕಾರಿ ಸನ್ಯಾಸಿ ಎಂದು ಪ್ರಸಿದ್ಧರಾದರು. ವಾರಣಾಸಿಯಲ್ಲಿ 9 ತಿಂಗಳು ಮತ್ತು ಮಧ್ಯಪ್ರದೇಶದ ಜೈಲುಗಳಲ್ಲಿ 6 ತಿಂಗಳು ಸೆರೆವಾಸ ಅನುಭವಿಸಿದರು. ಜಗದ್ಗುರು ಶಂಕರಾಚಾರ್ಯರ ಕೊನೆಯ ಜನ್ಮದಿನವನ್ನು ಹರಿಯಲಿ ತೀಜ್‌ ದಿ(ನದಂದು ಆಚರಿಸಲಾಗಿತ್ತು.

1981 ರಲ್ಲಿ ಶಂಕರಾಚಾರ್ಯ (shankaracharya swaroopanand saraswati) ಎಂಬ ಬಿರುದು ಪಡೆದ ಸ್ವಾಮಿ ಸ್ವರೂಪಾನಂದರು 1950 ರಲ್ಲಿ ದಂಡಿ ಸನ್ಯಾಸಿಯಾಗಿದ್ದರು. ಜ್ಯೋತಿರ್ಮಠದ ಬ್ರಹ್ಮಲಿನ್ ಶಂಕರಾಚಾರ್ಯರು ಸ್ವಾಮಿ ಬ್ರಹ್ಮಾನಂದ ಸರಸ್ವತಿ ಅವರಿಂದ ದಂಡ ಸನ್ಯಾಸಿಗಳ ದೀಕ್ಷೆಯನ್ನು ಪಡೆದರು ಮತ್ತು ಸ್ವಾಮಿ ಸ್ವರೂಪಾನಂದ ಸರಸ್ವತಿ ಎಂದು ಪ್ರಸಿದ್ಧರಾದರು. 1981ರಲ್ಲಿ ಶಂಕರಾಚಾರ್ಯ ಎಂಬ ಬಿರುದು ಪಡೆದರು.

ರಾಮ ಮಂದಿರ ನಿರ್ಮಾಣಕ್ಕೆ ಯಶ್ ದೇಣಿಗೆ ? 50 ಕೋಟಿ ದೇಣಿಗೆ ಸತ್ಯವೇನು ಗೊತ್ತಾ ?

ರಾಮ ಜನ್ಮಭೂಮಿ (ram janmabhoomi)  ನ್ಯಾಸ್ ಹೆಸರಿನಲ್ಲಿ ರಾಮಮಂದಿರದ ಹೆಸರಿನಲ್ಲಿ ವಿಎಚ್‌ಪಿ ಮತ್ತು ಬಿಜೆಪಿ ಕಚೇರಿ ನಿರ್ಮಿಸುತ್ತಿದೆ ಎಂದು ಶಂಕರಾಚಾರ್ಯ ಸ್ವಾಮಿ ಸ್ಪರುಪಾನಂದ ಸರಸ್ವತಿ ಆರೋಪಿಸಿದ್ದರು. ಬಿಜೆಪಿ-ವಿಎಚ್‌ಪಿ ಅಯೋಧ್ಯೆಯಲ್ಲಿ ಮಂದಿರದ ಹೆಸರಿನಲ್ಲಿ ತಮ್ಮ ಕಚೇರಿಯನ್ನು ತೆರೆಯಲು ಬಯಸಿವೆ. ಅದು ನಮಗೆ ಸ್ವೀಕಾರಾರ್ಹವಲ್ಲ. ಹಿಂದೂಗಳಲ್ಲಿ ಶಂಕರಾಚಾರ್ಯರು ಸರ್ವಶ್ರೇಷ್ಠರು. ನಾವು ಹಿಂದೂಗಳ ಸರ್ವೋಚ್ಚ ನ್ಯಾಯಾಲಯ. ದೇವಸ್ಥಾನಕ್ಕೆ ಧಾರ್ಮಿಕ ಸ್ವರೂಪ ಇರಬೇಕು, ಆದರೆ ಈ ಜನ ಅದಕ್ಕೆ ರಾಜಕೀಯ ರೂಪ ಕೊಡಲು ಬಯಸಿದ್ದು ನಮಗೆ ಒಪ್ಪಿಗೆಯಾಗುವುದಿಲ್ಲ ಎಂದು ಹೇಳಿದ್ದರು.

ಅಯೋಧ್ಯೆ ರಾಮಮಂದಿರ ಗರ್ಭಗುಡಿಯ ಮೊದಲ ಚಿತ್ರ, ಇದೇ ಸ್ಥಳದಲ್ಲಿ ಇರಲಿದ್ದಾನೆ ರಾಮಲಲ್ಲಾ!

ಗಣ್ಯರ ಸಂತಾಪ: ಶಾರದಾಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಸನಾತನ ಧರ್ಮದ ಸ್ಲಕಾ ಪುರುಷ ಮತ್ತು ಸನ್ಯಾಸ್ ಸಂಪ್ರದಾಯದ ಸೂರ್ಯ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಟ್ವೀಟ್‌ ಮಾಡಿದ್ದಾರೆ. ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ನಿಧನ ಸಂತ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಣ್ಣಿಸಿದ್ದಾರೆ. ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ತಮ್ಮ ಇಡೀ ಜೀವನವನ್ನು ಧರ್ಮ, ಆಧ್ಯಾತ್ಮಿಕತೆ ಮತ್ತು ದಾನಕ್ಕಾಗಿ ಮೀಸಲಿಟ್ಟಿದ್ದರು ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್‌ ಮಾಡಿದ್ದಾರೆ.

 

Follow Us:
Download App:
  • android
  • ios