ರಾಷ್ಟ್ರೀಯ ವಾರ್ಷಿಕ ಸ್ವಚ್ಛತೆ ಸರ್ವೆಯ 5ನೇ ಎಡಿಷನ್ ಸ್ವಚ್ಛ ಸರ್ವೇಕ್ಷಣ್ 2020 ಬಿಡುಗಡೆಯಾಗಿದೆ. ಮಧ್ಯ ಪ್ರದೇಶದ ಇಂದೋರ್ ಮತ್ತೊಮ್ಮೆ ಭಾರತದ ಅತ್ಯಂತ ಸ್ವಚ್ಛ ನಗರ ಅನ್ನೋ ಹಿರಿಮೆಗೆ ಪಾತ್ರವಾಗಿದೆ. ಆದರೆ ಮೈಸೂರು ಈ ಬಾರಿ 2 ಸ್ಥಾನ ಕೆಳಕ್ಕೆ ಕುಸಿದಿದೆ

ರಾಷ್ಟ್ರೀಯ ವಾರ್ಷಿಕ ಸ್ವಚ್ಛತೆ ಸರ್ವೆಯ 5ನೇ ಎಡಿಷನ್ ಸ್ವಚ್ಛ ಸರ್ವೇಕ್ಷಣ್ 2020 ಬಿಡುಗಡೆಯಾಗಿದೆ. ಮಧ್ಯ ಪ್ರದೇಶದ ಇಂದೋರ್ ಮತ್ತೊಮ್ಮೆ ಭಾರತದ ಅತ್ಯಂತ ಸ್ವಚ್ಛ ನಗರ ಅನ್ನೋ ಹಿರಿಮೆಗೆ ಪಾತ್ರವಾಗಿದೆ. ಆದರೆ ಮೈಸೂರು ಈ ಬಾರಿ 2 ಸ್ಥಾನ ಕೆಳಕ್ಕೆ ಕುಸಿದಿದೆ

ಸತತ ನಾಲ್ಕನೇ ಬಾರಿ ಇಂದೋರ್ ಭಾರತದ ಸ್ವಚ್ಛ ನಗರವಾಗಿ ಗುರುತಿಸಲ್ಪಟ್ಟಿದೆ. ಗುಜರಾತ್‌ನ ಸೂರತ್ ಭಾರತದ ಎರಡನೇ ಸ್ವಚ್ಛ ನಗರವಾಗಿ ಮೂಡಿ ಬಂದಿದೆ. ನವಿ ಮುಂಬೈ ಮೂರನೇ ಸ್ಥಾನದಲ್ಲಿದೆ.

ಮೋದಿ ಮಹತ್ವಾಕಾಂಕ್ಷಿ ಯೋಜನೆ : ಶೀಘ್ರ ನಿವೇಶನ ಭಾಗ್ಯ

ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿ ಇದನ್ನು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಗಂಗಾ ನದಿ ತೀರದಲ್ಲಿರುವ ವಾರಣಾಸಿ ಸ್ವಚ್ಛ ನಗರವಾಗಿ ಗುರುತಿಸಲ್ಪಟ್ಟಿದೆ. ಬೆಸ್ಟ್‌ ಪರ್ಫೋರ್ಮಿಂಗ್ ರಾಜ್ಯದ ಲಿಸ್ಟ್‌ನಲ್ಲಿ ಝಾರ್‌ಖಂಡ್ ಮೊದಲ ಸ್ಥಾನದಲ್ಲಿದ್ದು, ಬೆಸ್ಟ್ ಪರ್ಫೋರ್ಮಿಂಗ್ ಅವಾರ್ಡ್‌ ಪಡೆದಿದೆ.

Scroll to load tweet…

ಸಚ್ಛ ಸರ್ವೇಕ್ಷಣದಲ್ಲಿ 1.87 ಕೋಟಿ ಜನ ಭಾಗವಹಿಸಿದ್ದು, 4242 ನಗರಗಳು ಭಾಗಿಯಾಗಿದೆ. 28 ದಿನದಲ್ಲಿ ಸ್ವಚ್ಛ ಸರ್ವೇಕ್ಷಣ 2020 ಮುಗಿದಿದ್ದು, 1.7 ಕೋಟಿ ಜನರು ಸ್ವಚ್ಛತಾ ಎಪ್ಲಿಕೇಷನ್‌ನಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ 11 ಕೋಟಿ ರಿಯಾಕ್ಷನ್ ಪಡೆದಿದೆ.

2014-15 ಮತ್ತು 2015-16ರಲ್ಲಿ ದೇಶದಲ್ಲಿಯೇ ನಂಬರ್ ಒನ್ ಸ್ವಚ್ಛ ನಗರ ಗರಿಮೆ ಪಡೆದಿದ್ದ ಮೈಸೂರು 2016-17 ನೇ ಸಾಲಿನಲ್ಲಿ 5ನೇ ಸ್ಥಾನ, 2017-18ರಲ್ಲಿ 8ನೇ ಸ್ಥಾನ, 2018-19ರಲ್ಲಿ ಮೂರನೇ ಸ್ಥಾನ ಪಡೆದಿತ್ತು.

ಟಾಪ್ 25 ನಗರ ಸ್ಥಳೀಯ ಸಂಸ್ಥೆಗಳು(1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ)

ರ‍್ಯಾಂಕ್ರಾಜ್ಯನಗರಅಂಕ
1ಮಧ್ಯ ಪ್ರದೇಶಇಂದೋರ್5647.56
2ಗುಜರಾತ್ಸೂರತ್5519.59
3ಮಹಾರಾಷ್ಟ್ರನವಿ ಮುಂಬೈ5467.89
4ಛತ್ತೀಸ್‌ಗಡಅಂಬಿಕಾಪುರ5428.30
5ಕರ್ನಾಟಕಮೈಸೂರು5298.61
6ಆಂದ್ರಪ್ರದೇಶವಿಜಯವಾಡ5270.32
7ಗುಜರಾತ್ಅಹಮದಾಬಾದ್5207.13
8ದೆಹಲಿನವದೆಹಲಿ5193.27
9ಮಹಾರಾಷ್ಟ್ರಚಂದ್ರಪುರ5178.93
10ಮಧ್ಯ ಪ್ರದೇಶಖರ್ಗೋನ್5158.36
11ಗುಜರಾತ್ರಾಜ್‌ಕೋಟ್5157.36
12ಆಂಧ್ರ ಪ್ರದೇಶತಿರುಪತಿ5142.76
13ಝಾರ್ಕಂಡ್ಜಮ್‌ಶೆಡ್ಜ್‌ಪುರ5133.20
14ಮಧ್ಯ ಪ್ರದೇಶಭೋಪಾಲ್5066.31
15ಗುಜರಾತ್ಗಾಂಧೀನಗರ5056.72
16ಚಂಡೀಗಡಚಂಡೀಗಡ4970.07
17ಮಹಾರಾಷ್ಟ್ರಧುಲೆ4896.99
18ಛತ್ತೀಸ್‌ಗಡರಾಜ್‌ನಂದಗಾನ್4887.50
19ಛತ್ತೀಸ್‌ಗಡಬಿಲಾಸ್‌ಪುರ್4875.74
20ಮಧ್ಯಪ್ರದೇಶಉಜ್ಜೈನಿ4826.53
21ಛತ್ತೀಸ್‌ಗಡರಾಯ್‌ಘರ್4808.37
22ಮಧ್ಯಪ್ರದೇಶಬುರ್ಹಾನ್‌ಪುರ4791.18
23ಮಹಾರಾಷ್ಟ್ರನಾಸಿಕ್4729.46
24ಉತ್ತರ ಪ್ರದೇಶಲಕ್ನೋ4728.28
25ಮಧ್ಯಪ್ರದೇಶಸಿಂಗ್ರೌಲಿ4703.93