Asianet Suvarna News Asianet Suvarna News

ರಸ್ತೆಯಲ್ಲಿ ಚಹಾ ಮಾರ್ತಿದ್ದ ವ್ಯಕ್ತಿಗೆ ಶೋಕಾಸ್‌ ನೋಟಿಸ್‌ ನೀಡಿದ ಪಂಚಾಯತ್‌, ಏನ್‌ ಕಾರಣ?

ರಾಜಸ್ಥಾನದ ಝಲಾವರ್ ಜಿಲ್ಲೆಯ ಅಕ್ಲೇರಾದಲ್ಲಿ ಟೀ ಮಾರಾಟಗಾರನಿಗೆ ಪಂಚಾಯತ್ ಸಮಿತಿ ನೋಟಿಸ್ ಕಳುಹಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಇದು ವೈರಲ್‌ ಆದ ಬಳಿಕ, ಪತ್ರ ನಕಲಿ ಎಂದು ಪಂಚಾಯತ್‌ ಸಮಜಾಯಿಷಿ ನೀಡಿದೆ.

swachh bharat mission block coordinator in Rajasthan jhalawar issues notice to Tea seller san
Author
First Published Aug 3, 2023, 4:04 PM IST | Last Updated Aug 3, 2023, 4:04 PM IST

ನವದೆಹಲಿ (ಆ.3): ರಾಜಸ್ಥಾನದ ಝಲಾವರ್‌ ಜಿಲ್ಲೆಯ ಪಂಚಾಯತ್‌ ಕಚೇರಿಯ  ಸ್ವಚ್ಛ ಭಾರತ್ ಮಿಷನ್‌ನ ಬ್ಲಾಕ್ ಕೋ-ಆರ್ಡಿನೇಟರ್ ಅಧಿಕಾರಿಯೊಬ್ಬರು ತಮ್ಮ ಕಚೇರಿಯ ಸನಿಹದಲ್ಲಿಯೇ ಚಹಾ ಮಾರುತ್ತಿದ್ದ ಚಾಯ್‌ವಾಲಾನಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದಾರೆ. ನೋಟಿಸ್‌ನ ಪ್ರತಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬಳಿಕ ಇದು ನಕಲಿ ಪತ್ರ ಎಂದು ಪಂಚಾಯತ್‌ ಸಮಜಾಯಿಷಿ ನೀಡಿದೆ. ಅಷ್ಟಕ್ಕೂ ಚಾಯ್‌ವಾಲಾನಿಗೆ ನೋಟಿಸ್‌ ಕಳಿಸುವಷ್ಟು ದೊಡ್ಡ ತಪ್ಪು ಏನು ಮಾಡಿದ್ದಾನೆ ಎನ್ನುವ ವಿಷಯ ಗೊತ್ತಾದರೆ ನಿಮಗೆ ಅಚ್ಚರಿಯಾಗೋದು ಖಂಡಿತ. ತಮ್ಮ ಕಚೇರಿಗೆ ನಿಗದಿತ ಸಮಯಕ್ಕೆ ಚಹಾ ಪೂರೈಸದ ಕಾರಣಕ್ಕಾಗಿ ಚಾಯ್‌ವಾಲಾನಿಗೆ ಪಂಚಾಯತ್‌ ಅಫೀಸ್‌ನಿಂದ ನೋಟಿಸ್‌ ಜಾರಿ ಮಾಡಲಾಗಿದೆ. ಝಲಾವರ್ ಜಿಲ್ಲೆಯ ಮಾಜ್ರಾದ ಮನೋಹರರ್‌ ಥಾಣಾ ಪಂಚಾಯತ್‌ ಸಮಿತಿಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ನೋಟಿಸ್‌ ಸೋಶಿಯ್‌ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೂ ಕಾರಣವಾಗಿದೆ.

ಬ್ಲಾಕ್‌ ಕೋ ಆರ್ಡಿನೇಟರ್‌ ಅಧಿಕಾರಿ ಮೋಹನ್‌ ಲಾಲ್‌ ಎನ್ನುವವರು,  ಚಾಯ್‌ವಾಲಾ ಬಿರಮ್‌ಚಂದ್‌ ಎನ್ನುವ ವ್ಯಕ್ತಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದಾರೆ. ಬಿರಮ್‌ ಚಂದ್‌ ಪಂಚಾಯತ್‌ ಆಫೀಸ್‌ನ ಸಮೀಪವೇ ಚಹಾ ಅಂಗಡಿ ಇರಿಸಿಕೊಂಡಿದ್ದಾರೆ. ಇಷ್ಟು ಸಮೀಪದಲ್ಲಿ ಟೀ ಅಂಗಡಿ ಇರಿಸಿಕೊಂಡಿದ್ದೂ ಪಂಚಾಯತ್‌ಗೆ ಸರಿಯಾದ ಸಮಯದಲ್ಲಿ ಚಹಾ ತಲುಪುತ್ತಿಲ್ಲ. ಇತ್ತೀಚೆಗಷ್ಟೇ ನಿಮಗೆ ಪಂಚಾಯತ್‌ ಆಫೀಸ್‌ಗೆ ಚಹಾ ತರುವಂತೆ ಹೇಳಲಾಗಿತ್ತು. ಆದರೆ, ನೀವು ಸರಿಯಾದ ಸಮಯಕ್ಕೆ ಚಹಾ ತಂದುಕೊಟ್ಟಿರುವುದಿಲ್ಲ. ಈ ಕುರಿತಾಗಿ ಈ ಹಿಂದೆಯೇ ನಿಮಗೆ ಒಂದು ನೋಟಿಸ್‌ ಜಾರಿ ಮಾಡಲಾಗಿತ್ತು. ಅದಕ್ಕೆ ನೀವು ಯಾವುದೇ ತೃಪ್ತಿದಾಯಕ ಉತ್ತರ ನೀಡಿಲ್ಲ. ಇನ್ನು ಮುಂದೆ ಪಂಚಾಯತ್‌ ಆಫೀಸ್‌ನಿಂದ ಚಹಾ ತರುವಂತೆ ಸೂಚನೆ ನೀಡಿದಾಗ, ಎಮ್ಮೆಯ ಹಾಲನ್ನು ಕರೆದು ಫ್ರೆಶ್‌ ಆಗಿ ಚಹಾ ಮಾಡಿ ಪಂಚಾಯತ್‌ ಆಫೀಸ್‌ಗೆ ನೀಡಬೇಕು. ಸರಿಯಾದ ಸಮಯದಲ್ಲಿ ಚಹಾ ನೀಡದೇ ಇರುವುದು ಪಂಚಾಯತ್‌ ಬಗ್ಗೆ ಇರುವ ನಿಮ್ಮ ನಿರ್ಲಕ್ಷ್ಯವನ್ನು ತೋರುತ್ತದೆ. ಇದನ್ನು ಪಂಚಾಯತ್‌ ಯಾವುದೇ ಕಾರಣಕ್ಕೂ ಸಹಿಸಿಕೊಳ್ಳೋದಿಲ್ಲ.

ಇನ್ನು ಮುಂದೆ ಏನಾದರೂ ಪಂಚಾಯತ್‌ ಆಫೀಸ್‌ನ ಅಧಿಕಾರಿಗಳು ಚಹಾ ತನ್ನಿ ಎಂದು ಹೇಳಿದಾಗ, ಹಿಂದೆ ಮಾಡಿರುವ ಚಹಾವನ್ನು ತರುವುದಲ್ಲ. ಅದರ ಬದಲು ಆಗಲೇ ಎಮ್ಮೆಯಿಂದ ಕರೆದ ಹಾಲನ್ನು ಬಳಸಿಕೊಂಡು ಚಹಾ ಮಾಡಿ ತರಬೇಕು. ಹಾಗೇನಾದರೂ ಇದನ್ನು ಮಾಡಲು ವಿಫಲವಾದಲ್ಲಿ ನಿಮ್ಮ ಅಂಗಡಿಯ ಪಾತ್ರೆಗಳು, ಚಹಾ ಮಾಡುವ ಸ್ಟೌಗಳನ್ನು ಪಂಚಾಯತ್‌ ವಶಪಡಿಸಿಕೊಳ್ಳಲಿದೆ. ಪಂಚಾಯತ್‌ ಆಫೀಸ್‌ಗೆ ರಜೆ ಇರುವ ದಿನವಾದ ಶನಿವಾರ ಹಾಗೂ ಭಾನುವಾರದಂದು ಈ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ.

ಡೈವೋರ್ಸ್‌ ಪಡೆದ ತಿಂಗಳ ಒಳಗೆ 2ನೇ ಮದುವೆಗೆ ರೆಡಿಯಾದ ಮೆಗಾ ಕುಟುಂಬದ ಕುಡಿ ನಿಹಾರಿಕಾ?

ಇದೇ ವೇಳೆ ಈ ವೈರಲ್ ನೋಟಿಸ್ ಕುರಿತು ಬ್ಲಾಕ್ ಸಂಯೋಜಕರನ್ನು ಕೇಳಲಾಯಿತು. ಆಗ ಈ ನೋಟಿಸ್ ಸಂಪೂರ್ಣ ನಕಲಿಯಾಗಿದ್ದು, ಮೋಜಿಗಾಗಿ ಕಂಪ್ಯೂಟರ್ ಆಪರೇಟರ್ ಪ್ರಿಂಟ್ ಔಟ್ ಮಾಡಿದ್ದಾರೆ ಎಂದು ತಿಳಿಸಿದರು. ಅವರ ಉತ್ತರ ಮತ್ತೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಕಚೇರಿಯ ಭೋಜನ ವಿರಾಮದ ವೇಳೆ ತಮಾಷೆಗಾಗಿ ನಮ್ಮ ಕಂಪ್ಯೂಟರ್‌ ಆಪರೇಟರ್‌ ಈ ನೋಟಿಸ್‌ಅನ್ನು ಟೈಪ್‌ ಮಾಡಿ, ಅದನ್ನು ಚಾಯ್‌ವಾಲಾನಿಗೆ ನೀಡಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ. ಆದರೆ, ಈ ಪತ್ರ ವೈರಲ್‌ ಆದ ಬೆನ್ನಲ್ಲಿಯೇ ಬ್ಲಾಕ್‌ ಸಂಯೋಜಕ ಮೋಹನ್‌ಲಾಲ್‌ಗೆ ಮೇಲಾಧಿಕಾರಿ ಸ್ಪಷ್ಟನೆ ನೀಡುವಂತೆ ತಿಳಿಸಿದ್ದಾರೆ.

ಸಿನಿಮಾ ನಟಿಯ ಖಾಸಗಿ ವಿಡಿಯೋ ಲೀಕ್‌, ಖ್ಯಾತ ನಿರ್ಮಾಪಕನ ವಿರುದ್ಧ ದೂರು

Latest Videos
Follow Us:
Download App:
  • android
  • ios