ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌)ನ ಸರ್ವರ್‌ ಬುಧವಾರ ಮುಂಜಾನೆಯಿಂದಲೂ ಡೌನ್‌ ಆಗಿದ್ದು, ವೈರಸ್‌ ದಾಳಿ ನಡೆದಿರಬಹುದು ಎಂದು ಸರ್ಕಾರ ಶಂಕೆ ವ್ಯಕ್ತಪಡಿಸಿದೆ.

ನವದೆಹಲಿ: ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌)ನ ಸರ್ವರ್‌ ಬುಧವಾರ ಮುಂಜಾನೆಯಿಂದಲೂ ಡೌನ್‌ ಆಗಿದ್ದು, ವೈರಸ್‌ ದಾಳಿ ನಡೆದಿರಬಹುದು ಎಂದು ಸರ್ಕಾರ ಶಂಕೆ ವ್ಯಕ್ತಪಡಿಸಿದೆ. ಸರ್ವರ್‌ ಡೌನ್‌ ಆಗಿರುವುದರಿಂದ, ಸ್ಮಾರ್ಟ್‌ ಲ್ಯಾಬ್‌, ಬಿಲ್ಲಿಂಗ್‌, ರಿಪೋರ್ಟ್‌ಗಳ ನಿರ್ವಹಣೆ ಮತ್ತು ಅಪಾಂಯಿಂಟ್‌ಮೆಂಟ್‌ ನೀಡುವ ವ್ಯವಸ್ಥೆಗಳು ಸಮಸ್ಯೆಗೀಡಾಗಿದ್ದವು. ಇದರಿಂದಾಗಿ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ. ಇದೊಂದು ರಾರ‍ಯನ್‌ಸಮ್‌ವೇರ್‌ ದಾಳಿಯಾಗಿರುವ ಸಾಧ್ಯತೆಗಳು ದಟ್ಟವಾಗಿವೆ. ಈ ಕುರಿತಾಗಿ ತನಿಖೆ ನಡೆಸಲಾಗುವುದು ಎಂದು ಏಮ್ಸ್‌ ಹೇಳಿದೆ. ಅಲ್ಲದೇ ಈ ಸಮಸ್ಯೆಯನ್ನು ಸರಿಪಡಿಸಲು ಕಂಪ್ಯೂಟರ್‌ ಮತ್ತು ತುರ್ತು ಪ್ರತಿಕ್ರಿಯೆ ತಂಡ ಕಾರ್ಯೋನ್ಮುಖವಾಗಿದೆ ಎಂದು ಮೂಲಗಳು ತಿಳಿಸಿವೆ.


MBBS ವಿದ್ಯಾರ್ಥಿಗಳಿಗೆ ದಿಲ್ಲಿ AIIMS ವಿದ್ಯಾರ್ಥಿವೇತನ, ಯಾರಿಗೆ ಸಿಗುತ್ತೆ ನೆರವು?

ತಾಯ್ತನದ ಸುಖ ಅನುಭವಿಸಲಿಲ್ಲ, ಹೆರಿಗೆ ನೋವಿಲ್ಲ, ಕೋಮಾದಲ್ಲೇ ಅಮ್ಮನಾದ ಮಹಿಳೆ!

ಸಂಸದರಿಗೆ ವಿಶೇಷ ಚಿಕಿತ್ಸೆ, ಆಸ್ಪತ್ರೆಯಲ್ಲಿ ವಿಐಪಿ ಸಂಸ್ಕೃತಿ ವಿರುದ್ದ ಸಿಡಿದೆದ್ದ ವೈದ್ಯರ ಸಂಘ!