ಪಾಕಿಸ್ತಾನ ಕಡೆಯಿಂದ ನಿಗೂಢ ಸಂದೇಶ ಹೊತ್ತು ಹಾರಿ ಬಂದಿದ್ದ ಪಾರಿವಾಳವೊಂದನ್ನು ವಶ್ಕೆ ಪಡೆಯಲಾಗಿದೆ.

ಜಮ್ಮು(ಮೇ.26: ಭಾರತದ ವಿರುದ್ದ ಗೂಢಚೆರ್ಯ ಮಾಡಲು ಪಾಕಿಸ್ತಾನ ತರಬೇತಿ ನೀಡಿ ಬಿಟ್ಟಿರಬಹುದು ಎಂದು ಶಂಕಿಸಲಾದ ಪಾರಿವಾಳವನ್ನು ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಸೇನೆ ಮಾಹಿತಿ ನೀಡಿದೆ.

ಪಾಕ್‌ ವಿಮಾನ ದುರಂತದಿಂದ ಅನೇಕರನ್ನು ಕಾಪಾಡಿದ ನಮಾಜ್‌!

ಪಾಕಿಸ್ತಾನ ಕಡೆಯಿಂದ ಹಾರಿ ಬಂದ ನಿಗೂಢ ಸಂದೇಶ ಹೊಂದಿದ್ದ ಪಾರಿವಾಳವನ್ನು ಹಿರಾನಗರ್‌ ವಲಯದಲ್ಲಿರುವ ಮನ್ಯಾರಿ ಗ್ರಾಮಸ್ಥರು ಸೆರೆ ಹಿಡಿದು, ಪೊಲೀಸ್‌ ಠಾಣೆ ಒಪ್ಪಿಸಿದ್ದಾರೆ.

ಕೆಲ ಕೋಡ್‌ ನಂಬರ್‌ಗಳಿರುವ ನಿಗೂಢ ಸಂದೇಶ ಅದರ ಕಾಲಿನಲ್ಲಿ ಪತ್ತೆಯಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಕಥುವಾ ಪೊಲೀಸ್‌ ಅಧಿಕಾರಿ ಶೈಲೇಂದ್ರ ಮಿಶ್ರಾ ಮಾಹಿತಿ ನೀಡಿದ್ದಾರೆ.