Asianet Suvarna News Asianet Suvarna News

ಐಸಿಸ್ ಉಗ್ರ ಜಾಲದೊಂದಿಗೆ ನಂಟು ಶಂಕೆ: ಅಲಿಗಢ ವಿವಿಯ 4 ವಿದ್ಯಾರ್ಥಿಗಳ ಬಂಧನ

ಐಸಿಸ್‌ನ ಅಲಿಗಢ ಜಾಲದೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಕಾರಣಕ್ಕೆ ಅಲಿಗಢ ಮುಸ್ಲಿಂ ವಿವಿಯ ನಾಲ್ವರು ವ್ಯಕ್ತಿಗಳನ್ನು ಉತ್ತರ ಪ್ರದೇಶದ ಉಗ್ರ ನಿಗ್ರಹ ದಳ ಶನಿವಾರ ಬಂಧಿಸಿದೆ.

Suspected links with ISIS terrorist network 4 students of Aligarh University arrested akb
Author
First Published Nov 12, 2023, 8:26 AM IST

ಲಖನೌ: ಐಸಿಸ್‌ನ ಅಲಿಗಢ ಜಾಲದೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಕಾರಣಕ್ಕೆ ಅಲಿಗಢ ಮುಸ್ಲಿಂ ವಿವಿಯ ನಾಲ್ವರು ವ್ಯಕ್ತಿಗಳನ್ನು ಉತ್ತರ ಪ್ರದೇಶದ ಉಗ್ರ ನಿಗ್ರಹ ದಳ ಶನಿವಾರ ಬಂಧಿಸಿದೆ. ಇವರೆಲ್ಲರೂ ಅಲಿಗಢ ವಿವಿಯಲ್ಲಿ ವಿವಿಧ ಪದವಿ ಪಡೆದಿದ್ದರು. ಇವರಿಂದ ನಿಷೇಧಿಸಲ್ಪಟ್ಟಿರುವ ಐಸಿಸ್ ಸಾಹಿತ್ಯ, ಮೊಬೈಲ್ ಫೋನ್ ಮತ್ತು ಪೆನ್‌ಡ್ರೈವ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ನಾಲ್ವರು ಐಸಿಸ್ ಉಗ್ರ ಸಂಘಟನೆಯ ಜೊತೆ ಸಂಪರ್ಕದಲ್ಲಿದ್ದು, ಜಿಹಾದ್‌ ಮೂಲಕ ಚುನಾಯಿತ ಸರ್ಕಾರವನ್ನು ಬೀಳಿಸಲು ಯೋಜನೆ ರೂಪಿಸಿದ್ದರು. ಅಲ್ಲದೇ ಉಗ್ರ ಸಂಘ ಟನೆ ಬಗ್ಗೆ ಆಸಕ್ತಿಯುಳ್ಳ ವ್ಯಕ್ತಿಗಳನ್ನು ಸೆಳೆದು ಸಂಘಟನೆಗೆ ಸೇರ್ಪಡೆ ಮಾಡುತ್ತಿದ್ದರು. ಯುವಕರ ಟ್ರೈನ್ ವಾಶ್ ಮಾಡುತ್ತಿದ್ದರೆಂದು ಅಧಿಕಾರಿಗಳು ವಿವರಿಸಿದ್ದಾರೆ.

ಚೀನಾ ಹತ್ತಿಕ್ಕಲು ಅಮೆರಿಕಾ ಜೊತೆ ಸೇರಿ ಜಂಟಿಯಾಗಿ ಸೇನಾ ಸ್ಟ್ರೈಕರ್ ನಿರ್ಮಾಣಕ್ಕೆ ಭಾರತ ನಿರ್ಧಾರ

'ಕಾಫಿರರ' ವಿರುದ್ಧ ಸೇಡು: ಚಾರ್ಜ್‌ಶೀಟ್

ಮುಂಬೈ: ಇತ್ತೀಚೆಗೆ ಪುಣೆಯಲ್ಲಿ ಬಂಧಿತರಾದ 7 ಶಂಕಿತ ಐಸಿಸ್ ಉಗ್ರರು ತಮ್ಮ ಸಂಚಿನ ಎಲ್ಲ ವಿವರಗಳನ್ನು 'ಕಾಫಿ‌ರರ (ಮುಸ್ಲಿಮೇತರರು) ಮೇಲೆ ಪ್ರತೀಕಾರ' ಎಂಬ ಪುಸ್ತಕದಲ್ಲಿ ಶೇಖರಿಸಿಟ್ಟಿದ್ದರು. ಮುಸ್ಲಿಮೇತರರು ಮುಸ್ಲಿಮರ ಮೇಲೆ ನಡೆಸುವ ದೌರ್ಜನ್ಯಕ್ಕೆ ಸೇಡು ತೀರಿಸಿಕೊಳ್ಳುವ ಉದ್ದೇಶ ಹೊಂದಿದ್ದರು ಎಂದು ಎನ್ ಐಎ ಹೇಳಿದೆ.

ಅಲಿಗಢ ಹೆಸರು ಹರಿಗಢ ಎಂದು ಬದಲಿಸಲು ಶಿಫಾರಸು

ಲಖನೌ: ಅಲಹಾಬಾದ್‌ ಮತ್ತು ಫೈಜಾಬಾದ್‌ ಬಳಿಕ ನಗರಗಳ ಹೆಸರು ಬದಲಾಯಿಸುವಿಕೆ ಉತ್ತರ ಪ್ರದೇಶದಲ್ಲಿ ಮುಂದುವರೆದಿದ್ದು, ಇದೀಗ ಅಲಿಗಢ ನಗರದ ಹೆಸರನ್ನು ‘ಹರಿಗಢ’ ಎಂದು ಬದಲಿಸಬೇಕೆಂದು ಅಲಿಗಢ ಮಹಾನಗರಪಾಲಿಕೆ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಸೋಮವಾರ ನಡೆದ ಸಭೆಯಲ್ಲಿ ನಗರದ ಮೇಯರ್‌ ಸಲ್ಲಿಸಿದ ಪ್ರಸ್ತಾವನೆಗೆ ಎಲ್ಲ ಕಾರ್ಪೋರೇಟರ್‌ಗಳು ಸಮ್ಮತಿ ನೀಡಿದ್ದಾರೆ.. ಸರ್ಕಾರ ಒಪ್ಪಿದರೆ ನಗರದ ಮರುನಾಮಕರಣ ಯಶಸ್ವಿಯಾಗಲಿದೆ.

ಕರ್ನಾಟಕ ಸೇರಿ ದೇಶವ್ಯಾಪಿ ದಾಳಿಗೆ ಸಂಚು: 7 ಶಂಕಿತ ಐಸಿಸ್‌ ಉಗ್ರರ ವಿರುದ್ಧ ಚಾರ್ಜ್‌ಶೀಟ್‌

ಈ ಮುಂಚೆ ಅಲಿಘಢಕ್ಕೆ ರಾಮಗಢ ಎಂದು ಹೆಸರಿತ್ತು ಎಂದು ಇತಿಹಾಸ ಹೇಳುತ್ತದೆ. 1700ರಲ್ಲಿ ಮುಸ್ಲಿಂ ಅರಸರ ಅಳ್ವಿಕೆ ವೇಳೆ ನಗರದ ಹೆಸರು ಅಲಿಗಢ ಎಂದು ಬದಲಾಗಿತ್ತು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ 2019ರಲ್ಲಿ ಅಲಹಾಬಾದ್‌ ಹೆಸರನ್ನು ಪ್ರಯಾಗ್‌ರಾಜ್‌ ಎಂದು ಮರುನಾಮಕರಣ ಮಾಡಿತ್ತು.

Follow Us:
Download App:
  • android
  • ios