ನವದೆಹಲಿ(ಜ.11): ಬ್ರಿಟನ್‌ ಪ್ರಧಾನಿ ಬೊರಿಸ್‌ ಜಾನ್ಸನ್‌ ಅವರು ಭಾರತದ ಗಣರಾಜ್ಯೋತ್ಸವದಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವುದನ್ನು ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ, ಸುರಿನೇಮ್‌ ಗಣರಾಜ್ಯದ ಅಧ್ಯಕ್ಷ ಚಂದ್ರಿಕಾಪ್ರಸಾದ್‌ ಸಂತೋಖಿ ಅವರಿಗೆ ಈ ಭಾಗ್ಯ ಒಲಿದುಬಂದಿದೆ ಎಂದು ಮೂಲಗಳು ಹೇಳಿವೆ.

ಸಂತೋಖಿ ಅವರು ಕಳೆದ ವಾರ ಪ್ರವಾಸಿ ಭಾರತೀಯ ದಿವಸದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಇದರ ಬೆನ್ನಲ್ಲೇ ಅವರಿಗೆ ಗಣರಾಜ್ಯ ದಿನದ ಅತಿಥಿಯಾಗಿ ಪಾಲ್ಗೊಳ್ಳುವ ಆಹ್ವಾನವೂ ಹೋಗಿದೆ ಎಂದು ತಿಳಿದುಬಂದಿದೆ.

ಸುರಿನೇಮ್‌ ಈ ಮುನ್ನ ಡಚ್‌ ವಸಾಹತು ಆಗಿತ್ತು. ಇಲ್ಲಿ ಭಾರತೀಯ ಮೂಲದವರ ಸಂಖ್ಯೆಯೇ ಶೇ.27.4ರಷ್ಟಿದೆ. ಸಂತೋಖಿ ಅವರು ಕಳೆದ ಜುಲೈನಲ್ಲಿ ಡೇಸಿ ಬೌಟೆರ್ಸೆ ಎಂಬ ಸರ್ವಾಧಿಕಾರಿಯ ಆಳ್ವಿಕೆಗೆ ಅಂತ್ಯ ಹಾಡಿ ಅಧಿಕಾರಕ್ಕೆ ಬಂದಿದ್ದರು