ಗುಜರಾತ್(ಅ.01): ಕೊರೋನಾ ವೈರಸ್ ಕಾರಣ ಗುಜರಾತ್ ಸರ್ಕಾರ ಕಳೆದ ಎಪ್ರಿಲ್ ತಿಂಗಳಲ್ಲಿ ಕೆಲ ಆದೇಶ ಜಾರಿ ಮಾಡಿತ್ತು. ಇದರಲ್ಲಿ ಪ್ರಮುಖವಾಗಿ ಕೈಗಾರಿಕೆಗಳು ತಮ್ಮ ಕೆಲಸದ ಸಮಯವನ್ನು 12ಗಂಟೆ ಹೆಚ್ಚಿಸಲು ಅವಕಾಶ ನೀಡಿತ್ತು. ಇದೇ ಅವಕಾಶ ಬಳಸಿಕೊಂಡು ಕೈಗರಾರಿಕೆಗಳು, ಕಂಪನಿಗಳು ಕಾರ್ಮಿಕರನ್ನು 12 ಗಂಟೆ  ದುಡಿಸಿಕೊಳ್ಳುತ್ತಿತ್ತು. ಇಷ್ಟೇ ಹೆಚ್ಚುವರಿ ಡ್ಯೂಟಿ ಸಮಯಕ್ಕೆ ವೇತನ ಕೂಡ ನೀಡುತ್ತಿರಲಿಲ್ಲ. ಇದೀಗ ಈ ಸಂಪ್ರದಾಯಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದೆ.

ಸೆಕ್ಸ್ ವರ್ಕರ್‌ಗಳಿಗೆ ಮೊದಲು ಆಹಾರ ನೀಡಿ; ಸುಪ್ರೀಂ ಆದೇಶ

ಕೊರೋನಾ ವೈರಸ್‌ನಿಂದ ಸೃಷ್ಟಿಯಾದ ಆರ್ಥಿಕ ಸಂಕಷ್ಟಗಳ ಹೊರೆಯನ್ನು ಕಾರ್ಮಿಕರ ಮೇಲೆ ಹಾಕಬಾರದು. ಪ್ರತಿಯೊಬ್ಬ ಕಾರ್ಮಿಕನಿಗೆ ವೇತನ ಹಾಗೂ ಕೆಲಸ ಸಮಯ ಸರಿಯಾಗಿರಬೇಕು. ಹೆಚ್ಚುವರಿ ದುಡಿಸಿಕೊಂಡರೆ ಹೆಚ್ಚುವರಿ ವೇತನ ನೀಡಬೇಕು. ಕೊರೋನಾ ಕಾರಣ ಹೆಚ್ಚುವರಿ ಸಮಯಕ್ಕೆ ವೇತನ ನೀಡದಿರುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಗುಜರಾತ್ ಕಾರ್ಮಿಕ ವಿಭಾಗ ಆದೇಶದ ವಿರುದ್ಧ ಗುಜರಾತ್ ಮಜ್ದೂರ್ ಸಬಾ ಪಿಟೀಶನ್ ಸಲ್ಲಿಕೆ ಮಾಡಿತ್ತು. ಈ ಕುರಿತು ವಿಚಾರಣೆ ನಡೆಸಿದೆ ಜಸ್ಟೀಸ್ ಡಿವೈ ಚಂದ್ರಚೂಡ್, ಇಂದು ಮಲ್ಹೋತ್ರ ಹಾಗೂ ಕೆಎಂ ಜೋಸೆಫ್ ನೇತೃತ್ವದ ತ್ರಿಸದಸ್ಯ ಪೀಠ ಮಹತ್ವ ಆದೇಶ ನೀಡಿದೆ.